ಜಯಾ ಸಾವಿನ ಮಹಾರಹಸ್ಯ ಸ್ಫೋಟ!
>> ಯಾವ ಎಐಎಡಿಎಂಕೆ ಮುಖಂಡರೂ ಕೂಡ ಅಮ್ಮನನ್ನು ಅಪೋಲೊ ಆಸ್ಪತ್ರೆಯಲ್ಲಿ ಭೇಟಿಯಾಗಿರಲಿಲ್ಲ
>> ಚಿನ್ನಮ್ಮಗೆ ಹೆದರಿ ಬಾಯಿಗೆಬಂದಂತೆ ಸುಳ್ಳು ಹೇಳಿದೆವು.
>> ಅಮ್ಮ ಇಡ್ಲಿ ತಿಂದಿದ್ದು, ನ್ಯೂಸ್ ಪೇಪರ್ ಓದುತ್ತಿದ್ದದ್ದು ಸುಳ್ಳು
ಚೆನ್ನೈ : ನಾವು ಎಐಎಡಿಎಂಕೆ ಮುಖಂಡರು ಯಾರೂ ಕೂಡ ಅಪೋಲೋ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಜಯಲಲಿತಾಗೆ ಚಿಕಿತ್ಸೆ ಸಂದರ್ಭ ಅವರನ್ನು ಕಂಡಿಲ್ಲ. ಶಶಿಕಲಾಗೆ ಹೆದರಿ ಸುಳ್ಳು ಹೇಳಿದ್ದೆವು ಎಂಬ ರಹಸ್ಯವನ್ನು ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಶನಿವಾರ ಸ್ಫೋಟಿಸಿದ್ದಾರೆ. ಈ ಮೂಲಕ ಜಯಾ ಸಾವಿನ ಸುತ್ತ ಅನುಮಾನದ ಹುತ್ತ ಮತ್ತೆ ಬೆಳೆಯಲು ಆರಂಭವಾಗಿದೆ.
ಡಿ.5ರಂದು ಜಯಾ ಸತ್ತಿದ್ದಾರೆ ಎಂದು ವೈದ್ಯರು ಘೋಷಿಸುವವರೆಗೂ 75 ದಿನಗಳ ಆಸ್ಪತ್ರೆಯ ಹೈಡ್ರಾಮಾದಲ್ಲಿ ದಿನಕ್ಕೊಬ್ಬ ಶಾಸಕರು ಅಮ್ಮ ಇಡ್ಲಿ ತಿಂದರು. ಪೇಪರ್ ಓದಿದರು ಎಂದು ಹೇಳುತ್ತಾ ಬಂದಿದ್ದರು. ಆದರೆ ಅಸಲಿಗೆ ಯಾರೂ ಜಯಾ ಅವರನ್ನು ನೋಡಲು ಅವಕಾಶವೇ ಇರಲಿಲ್ಲ ಎಂದು ಶ್ರೀನಿವಾಸನ್ ಸತ್ಯ ಬಹಿರಂಗಪಡಿಸಿದ್ದಾರೆ.
ಎಲ್ಲ ಎಐಎಡಿಎಂಕೆ ಮುಖಂಡರು ಆಸ್ಪತ್ರೆಗೆ ಜಯಾ ಅವರನ್ನು ಕಾಣಲು ಹೋದಾಗ ಕೇವಲ ಒಂದನೇ ಮಹಡಿಯಲ್ಲಿ ಕೂತು ಕಾದು ವಾಪಸಾಗಿದ್ದರು. ರಾಜ್ಯಪಾಲ ವಿದ್ಯಾಸಾಗರ ರಾವ್ ಕೂಡ ಅಮ್ಮ ಅವರನ್ನು ನೋಡೇ ಇಲ್ಲ ಎಂದು ಶ್ರೀನಿವಾನಸ್ ಅಮ್ಮ ಸಾವಿನ ಹಿಂದೆ ಕಾಣದ ಕೈಗಳ ಆಟ ನಡೆದಿದೆ ಎಂಬ ಶಂಕೆಗೆ ಪುಷ್ಟಿ ನೀಡಿದ್ದಾರೆ.
ದಿಂಡಿಗಲ್ ಶ್ರೀನಿವಾಸನ್
ತನಿಖಾ ಸಮಿತಿ ಡಮ್ಮಿ, ಹೇಳೋರು-ಕೇಳೊರು ಇಲ್ಲ
ಅಮ್ಮ ಆಪ್ತ ಒ. ಪನ್ನೀರ್ ಸೆಲ್ವಂ ಸಿಎಂ ಆಗಿದ್ದಾಗ ಜಯಾ ಸಾವಿನ ಬಳಿಕ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದರು. ಆದರೆ ಎ.ಪಳನಿಸ್ವಾಮಿ ಸಿಎಂ ಆದನಂತರ ಅದರ ಘೋಷಣೆ ಮಾಡಿದರು. ಈಗ ಇಬ್ಬರೂ ಒಂದಾಗಿದ್ದರೂ ತನಿಖೆ ಆರಂಭವೇ ಆಗಿಲ್ಲ ಎಂದು ಶ್ರೀನಿವಾಸನ್ ಬಾಗ್ದಾಳಿ ನಡೆಸಿದ್ದಾರೆ.
Leave A Reply