ಡಿ.9, 14 ಪ್ರಧಾನಿ ತವರಲ್ಲಿ ಚುನಾವಣೆ, ಸಮೀಕ್ಷೆಯಲ್ಲಿ ಬಿಜೆಪಿ ಗೆಲವು ಶತಸಿದ್ಧ
Posted On October 26, 2017
>> 50, 128 ಮತಗಟ್ಟೆಗಳಲ್ಲಿ ಮತದಾನ, 102 ಮತಗಟ್ಟೆಗಳು ಮಹಿಳೆಯರಿಂದ ನಿರ್ವಹಣೆ
>> ಇದೇ ಮೊದಲ ಬಾರಿಗೆ ವಿವಿಪ್ಯಾಟ್(ಮತದಾರರಿಗೆ ಮತ ಪರಿಶೀಲನೆ ವ್ಯವಸ್ಥೆ) ಬಳಕೆ
>> ರೂ. 28 ಲಕ್ಷ ಪ್ರತಿ ಅಭ್ಯರ್ಥಿಗೆ ಅವಕಾಶವಿರುವ ಚುನಾವಣಾ ಗರಿಷ್ಠ ವೆಚ್ಚ
>> ಡಿ. 18ಕ್ಕೆ ಹಿಮಾಚಲ ಪ್ರದೇಶ, ಗುಜರಾತ್‍ನಲ್ಲಿ ಒಟ್ಟಿಗೆ ಮತೆಎಣಿಕೆ, ಫಲಿತಾಂಶ
>> ಸಮೀಕ್ಷೆಯಲ್ಲಿ 81% ಮತದಾರರಿಗೆ ಮಣ್ಣಿನ ಮಗ ಮೋದಿಗಾಗಿ ಬಿಜೆಪಿ ಗೆಲ್ಲಿಸುವ ಹಂಬಲ
ಸೂರತ್ : ಅಂತೂ ಇಂತು ಹಿಮಾಚಲ ಪ್ರದೇಶಕ್ಕೆ ಮಾತ್ರ ಚುನಾವಣೆ ಘೋಷಿಸಿರುವುದಕ್ಕೆ ಕೇಂದ್ರ ಸರ್ಕಾರದ ಪಿತೂರಿ ಎಂದುವಿರೋಧ ಪಕ್ಷಗಳ ಆರೋಪ ಪ್ರತ್ಯಾಪರೋಪಗಳ ನಡುವೆಯೇ ಬುಧವಾರ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಡಿಸೆಂಬರ್ 9 ಮತ್ತು 14 ರಂದು ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ಹೇಳಿದ್ದಾರೆ.
ಮೊದಲ ಹಂತದಲ್ಲಿ 89 ಕ್ಷೇತ್ರಗಳು, ಎರಡನೇ ಹಂತದಲ್ಲಿ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸುಮಾರು 4.32 ಕೋಟಿ ಮತದಾರರು ಮತ ಚಲಾವಣೆಗೆ ಅರ್ಹತೆ ಪಡೆದಿದ್ದಾರೆ.
ಬುಧವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜ.22, 2018ಕ್ಕೆ ವಿಧಾನಸಭೆ ಕಾಲಾವಧಿ ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ನೂತನ ಸರ್ಕಾರ ಅಧಿಕಾರವಹಿಸಿಕೊಳ್ಳಬೇಕಿದೆ ಎಂದು ಜೋತಿ ವಿವರಿಸಿದ್ದಾರೆ.
ಮತ್ತೆ ಮೋದಿ ಅಲೆಯಿಂದ ಬಿಜೆಪಿಗೆ ಗೆಲವು ಶತಸಿದ್ಧ
ಟೈಮ್ಸ್ ನವ್ – ವಿಎಂಆರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ರಾಷ್ಠ್ರೀಯ ಅಧ್ಯಕ್ಷ ಅಮಿತ್ ಷಾ ಅವರ 150+ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲವು ಗುರಿ ಅಸಾಧ್ಯವಾದರೂ, ಬಹುಮತದ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವುದು ಸ್ಪಷ್ಟವಾಗಿದೆ.
ಬಿಜೆಪಿ – 18-134 ಕ್ಷೇತ್ರಗಳಲ್ಲಿ ಪ್ರಚಂಡ ಜಯಭೇರಿ
ಕಾಂಗ್ರೆಸ್- 49-61 ಕ್ಷೇತ್ರಗಳಲ್ಲಿ ಜಯ.
- Advertisement -
14201720189ahmedamitaprilassemblycomissiondecemberelectiongandhigujarathimachaljanuaryjotilossmodindapatelrahulrupanisabhashahsoniavidhanvijaywin
Trending Now
ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು - ಸಚಿನ್ ಪೈಲೆಟ್
November 22, 2024
ದುಬೈಗೆ ಹೊರಡುವ ಯೋಚನೆ ಇದ್ದರೆ ಈ ನಿಯಮ ಕಡ್ಡಾಯ!
November 22, 2024
Leave A Reply