ಉಂಗಾದಲ್ಲಿ ಪಾಕ್ ಆಯಿತು ಮಂಗ !
>> ವಿಶ್ವಸಂಸ್ಥೆ ಸಭೆಯಲ್ಲಿ ನಕಲಿ ಫೋಟೊ ತೋರಿಸಿ ಕಮಂಗಿಯಾದ ನರಿ ಪಾಕಿಸ್ತಾನ
>> ಪೆಲೆಟ್ ಗನ್ ದಾಳಿ ಎಂದು ಪ್ಯಾಲೆಸ್ತೀನಿ ಸಂತ್ರಸ್ತೆ ಫೋಟೊ ತೋರಿಸಿದ ಪಾಕ್ ಪ್ರತಿನಿಧಿ
ನ್ಯೂಯಾರ್ಕ್ : ಭಾರತವನ್ನು ಹೀಯಾಳಿಸಬೇಕು, ಜರಿಯಬೇಕು, ಜಾಗತಿಕವಾಗಿ ಭಾರತದ ಮುಖಕ್ಕೆ ಮಸಿ ಬಳಿಯಬೇಕು. ಒಟ್ಟಿನಲ್ಲಿ ಭಾರತ ನಾಶವಾಗಬೇಕು. ಅದನ್ನು ನೋಡಿ ಕೇಕೆ ಹಾಕಿ ನಗಬೇಕು….
ಏನಿದು ಅಂತಾನ? ಇದು ಪಾಕಿಸ್ತಾನದ ಮಹದಾಸೆ. ಅಲ್ಲವೇ, ಆದರೆ ತಾನೊಂದು ಬಗೆದೊಡೆ, ದೈವವೊಂದು ಬಗೆವುದು ಅನ್ನುವುದು ಭಾನುವಾರ ಪಾಕಿಸ್ತಾನದ ಪಾಲಿಗೆ ಜ್ಞಾಪಕವಾಗಿದೆ. ಶುದ್ಧ ಮುಸ್ಲಿಂ ರಾಷ್ಟ್ರಕ್ಕೆ ಅವರ ದೇವರೆ ಪಾಠ ಕಲಿಸಿದ್ದಾನೆ.
ಶನಿವಾರ ಪಾಕಿಸ್ತಾನವನ್ನು ಭಯೋತ್ಪಾದನೆ ಕಾರ್ಖಾನೆ. ಭಾರತದಲ್ಲಿ ಐಐಟಿ, ಐಐಎಂಗಳಿದ್ದರೆ ಪಾಕ್‍ನಲ್ಲಿ ಜೈಷೆ ಮೊಹಮ್ಮದ್, ಲಷ್ಕರೆ ತಯ್ಯಬಾ, ಹಕ್ಕಾನಿ ಥರದ ಉಗ್ರರ ತರಬೇತಿ ಸಂಸ್ಥೆಯಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್‍ನನ್ನು ಬೆತ್ತಲೆಗೊಳಿಸಿದ್ದರು.
ಲಂಗೋಟಿಯೂ ಇಲ್ಲದೇ ನಿಂತಿದ್ದ ಪಾಕಿಸ್ತಾನಕ್ಕೆ ಎಂದಿನಂತೆ ಅಡಗಿಕೊಳ್ಳಲು ಸಿಕ್ಕಿದ್ದು ಕಾಶ್ಮೀರ.
ಭಾನುವಾರ ಪ್ರತಿಕ್ರಿಯೆ ಹಕ್ಕು ಬಳಸಿ ಮಾತನಾಡಲು ಆರಂಭಿಸಿದ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ ಕೇವಲ ಭಾರತವನ್ನು ಬಯ್ಯುತ್ತಲೇ ಹೋದರು. ಆರ್‍ಎಸ್‍ಎಸ್ ಹಿನ್ನೆಲೆಯ ಪ್ರಧಾನಿಯಿಂಧ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. 2015ರಲ್ಲಿ ಅರುಂಧತಿ ರಾಯ್ ಅವರ ಹೇಳಿಕೆ ಇದಕ್ಕೆ ಸಾಕ್ಷಿ. ಭಾರತ ಉಗ್ರವಾದ ಪೋಷಿಸಿ ಪಾಕ್‍ನೊಳಗೆ ತೂರಿಸುತ್ತಿದೆ. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಸಿರುವ ಭಾರತೀಯ ಸೇನೆಯನ್ನು ಪ್ರಶ್ನಿಸುವವರೇ ಇಲ್ಲ ಎಂದು ವ್ಯರ್ಥಾರೋಪಗಳ ಪಟ್ಟಿ ಓದುತ್ತಾ ಹೋದರು.
ಪ್ಯಾಲೆಸ್ತೀನ್ ಯುವತಿಯನ್ನು ಕಾಶ್ಮೀರಯಾಗಿಸಿ, ಸುಳ್ಳು ಫೋಟೊ ಪ್ರೂಫ್
ಇಷ್ಟು ಸಾಲದು ಎಂದು ಮಲೀಹಾ ಪೆಲೆಟ್ ಗನ್ ದಾಳಿಯಿಂದ ಯುವತಿಯೊಬ್ಬಳ ಮುಖ ನೋಡಿ ಹೇಗಾಗಿದೆ ಎಂದು ಒಂದು ಫೋಟೊ ತೋರಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ನಾಟಕವಾಡಿದರು. ಕೊನೆಗೆ ತಿಳಿದಿದ್ದೇನೆಂದರೆ ಆ ಫೋಟೊ ಪ್ಯಾಲಿಸ್ತೀನಿ ಮಹಿಳೆಯದ್ದು ಎಂದು.
Leave A Reply