ಚುನಾವಣೆಗಳಾಚೆಗೆ ಪ್ರಜಾಪ್ರಭುತ್ವ ಕಾಣಿರಿ : ಮೋದಿ ಕಿವಿಮಾತು
*ಕಾರ್ಯಕಾರಣಿಯಲ್ಲಿ ಬಿಜೆಪಿ ಬಲ *
13 ಸಿಎಂಗಳು, 6 ಡಿಸಿಎಂಗಳು, 232 ಸಚಿವರು, 65 ಕೇಂದ್ರ ಸಚಿವರು, 1515 ಶಾಸಕರು/ಎಂಎಲ್ಸಿಗಳು, 334 ಸಂಸದರು
>> ಪಕ್ಷಕ್ಕಿಂತ ದೇಶ ಮುಖ್ಯ.
>> ಭ್ರಷ್ಟಾಚಾರ , ಕಪ್ಪುಹಣ ಶೇಖರಣೆಗೆ ಕ್ಷಮೆಯಿಲ್ಲ.
>> ಮುಲಾಜಿಲ್ಲದೇ ಕ್ರಮ, ನನಗೆ ಯಾರೂ ಸಂಬಂಧಿಕರಲ್ಲ. ಸಂಬಂಧಿಕರೂ ಇಲ್ಲ.
ನವದೆಹಲಿ : ನನಗೆ ಯಾರೂ ಸಂಬಂಧಿಗಳಿಲ್ಲ. ಪಕ್ಷಕ್ಕಿಂತ ನನಗೆ ದೇಶವೇ ಮುಖ್ಯ. ಯಾರೇ ಭ್ರಷ್ಟಾಚಾರ ಮತ್ತು ಕಪ್ಪು ಹಣ ಶೇಖರಣ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಕಾಪಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಸಂಸದರು, ಶಾಸಕರು ಮತ್ತು ಕಾರ್ಯಕರ್ತರೆಂದು ಮುಲಾಜಿಲ್ಲದೇ ಯಾರೇ ಭ್ರಷ್ಟರಾದರೂ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಮೋದಿ ಗುಡುಗಿದ್ದಾರೆ.
ಸುಮಾರು 2 ಸಾವಿರಕ್ಕೂ ಅಧಿಕ ಬಿಜಪೆಇ ಮುಖಂಡರು ಭಾಗವಹಿಸಿದ್ದ ಕಾರ್ಯಕಾರಿಣಿಯಲ್ಲಿ ಮೋದಿ ಅವರ ಮಾತುಗಳನ್ನು ಮಾಧ್ಯಮದವರಿಗೆ ಕಾರ್ಯಕಾರಿಣಿಯ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಗೋಷ್ಠಿಯಲ್ಲಿ ವಿವರಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮತ್ತು ಕಪ್ಪುಹಣ ನಿಗ್ರಹ ಅಜೆಂಡಾದಲ್ಲಿಯೇ ಇರಲಿಲ್ಲ. ಕೆಲವೊಮ್ಮೆ ನಮ್ಮ ಸರ್ಕಾರವನ್ನು ಟೀಕಿಸಲು ಪದಗಳೇ ಸಿಗದಿದ್ದಾಗ ಕಾಂಗ್ರೆಸ್‍ನ ಹಿರಿಯ ಮುಖಂಡರೂ ಸೇರಿದಂತೆ ಅನೇಕರು ನಿಕೃಷ್ಟ ಪದ ಬಳಕೆಯಿಂದ ನಿಂದಿಸಿ ತೃಪ್ತಿಪಟ್ಟುಕೊಳ್ಳುತ್ತಾರೆ ಎಂದು ಮೋದಿ ದಿಗ್ವಿಜಯ್ ಮತ್ತು ಮನೀಷ್ ತಿವಾರಿ ಟ್ವೀಟ್‍ಗೆ ಕುಟುಕಿದ್ದಾರೆ.
ಮೋದಿ ಮಾತುಗಳು—>
* ಕೇವಲ ಚುನಾವಣೆಯ ಗೆಲುವಿಗಾಗಿ ಶ್ರಮಿಸಬೇಡಿ. ಕಾರ್ಯಕರ್ತರು, ಶಾಸಕರು, ಸಂಸದರೆಲ್ಲರೂ ಎನ್‍ಡಿಎ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಶ್ರಮಿಸಿ.
* ಜನರ ಪಾಲ್ಗೊಳ್ಳುವಿಕೆ ಇಲ್ಲದೇ ಯಾವುದೇ ಯೋಜನೆಯೂ ಯಶಸ್ವಿಯಾಗುವುದಿಲ್ಲ.
………………………………………………………………….
ಸೌಭಾಗ್ಯ ಯೋಜನೆಗೆ ಚಾಲನೆ, ಉರ್ಜಾ ಭವನ ಉದ್ಘಾಟನೆ
ಡಿಸೆಂಬರ್2018ರೊಳಗೆ ನಾಲ್ಕು ಕೋಟಿಗೂ ಅಧಿಕ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದ ಸೌಲಭ್ಯ ಕಲ್ಪಿಸುವ ಮೂಲಕ ಮಾರ್ಚ್ 2019ರೊಳಗೆ ದೇಶಾದ್ಯಂತ ಎಲ್ಲ ನಾಗರಿಕರಿಗೂ 100% ವಿದ್ಯುತ್ ನೀಡುವ ಗುರಿಯೊಂದಿಗೆ ಸೌಭಾಗ್ಯ ಹೆಸರಿನ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ.
ರು. 16, 320 ಕೋಟಿ ವೆಚ್ಚದ ಯೋಜನೆ ಇದು. ಪ್ರಧಾನ ಮಂತ್ರಿ ಸಹಜ ಬಿಜ್ಲಿ ಹರ್ ಘರ್ ಯೋಜನೆ ಅಥವಾ ಸೌಭಾಗ್ಯ ಯೋಜನೆಗಿಂತ ಮುಂಚೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮೂಲಕ 18 ಸಾವಿರ ಹಳ್ಳಿಗಳ ಪೈಕಿ 78% ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಸರ್ಕಾರಿ ಸ್ಚಾಮ್ಯದ ತೈಲ ಕಂಪನಿ ಒಎನ್‍ಜಿಸಿಯ ನೂತನ ಕಾರ್ಪೊರೇಟ್ ಕಚೇರಿ ದೀನ್ ದಯಾಳ್ ಉಪಾಧ್ಯಾಯ ಉರ್ಜಾ ಭವನವನ್ನು ದೆಹಲಿಯಲ್ಲಿ ಪ್ರಧಾನಿ ಉದ್ಘಾಟಿಸಿದರು.
Leave A Reply