• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗೋವಾ, ರಾಜ್ ಕೋಟ್ ಟೂರ್ ನಿಂದ ಪಾಲಿಕೆಗೆ ಆದ ಪ್ರಯೋಜನ ಸೊನ್ನೆ, ಈಗ ಮುಂಬೈ, ಪುಣೆ ಬೇಕಾ!

Hanumantha Kamath Posted On September 28, 2017
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಹಿಂದೆ ಗೋವಾಕ್ಕೆ ಹೋಗಿದ್ದರು. ಅಲ್ಲಿ ಡ್ರೈನೇಜ್ ಸಿಸ್ಟಮ್ ನೋಡಿ ಬರೋಣ, ಅಲ್ಲಿನ ಯುಜಿಡಿ ವ್ಯವಸ್ಥೆ ನಮ್ಮಲ್ಲೂ ಅಳವಡಿಸೋಣ ಎಂದು ಹೋಗಿದ್ದರು. ಎಷ್ಟು ಬಿಯರ್ ಬಾಟಲಿ ಖಾಲಿ ಮಾಡಿ ಬಂದ್ರೋ ಗೊತ್ತಿಲ್ಲ, ಬಂದ ಮೇಲೆ ಡ್ರೈನೇಜ್ ನ ಸುದ್ದಿಯೇ ಇರಲಿಲ್ಲ. ಅದರ ನಂತರ ಯಾರೋ ಗುಜರಾತಿನ ರಾಜಕೋಟ್ ನೋಡಲು ಚೆನ್ನಾಗಿರಬೇಕು ಎಂದು ಹೇಳಿದ್ರು ಅಂತ ಅನಿಸುತ್ತೆ. ಪಾಲಿಕೆಯ ಪಟಾಲಂ ರಾಜಕೋಟ್ ಗೆ ಹೋಯಿತು. ಅಲ್ಲಿ ಶಾಪಿಂಗ್ ಎಲ್ಲಾ ಮಾಡಿದ ನಂತರ ಬಂದ್ರು. ರಾಜಕೋಟಿನಲ್ಲಿ ಏನು ನೋಡಿದ್ರು, ಅದರಿಂದ ಪಾಲಿಕೆಗೆ ಏನು ಲಾಭವಾಯಿತು, ಯಾರೂ ಒಂದು ಸಲವೂ ಮಾತನಾಡಿಲ್ಲ. ಹೀಗೆ ಬೇರೆ ಬೇರೆ ಟೂರಿಸಂ ಸ್ಥಳಗಳಿಗೆ ಹೋಗಿ ತಿರುಗಾಡಿ ಬರುವುದು, ನಂತರ ಆ ಬಗ್ಗೆ ತಮ್ಮ ಗೆಳೆಯರ ಬಳಗದಲ್ಲಿ ಕೊಚ್ಚಿಕೊಳ್ಳುವುದು ಬಿಟ್ಟರೆ ಇವರ ಯಾವ ಟೂರಿನಿಂದಲೂ ಪಾಲಿಕೆಗೆ ಒಂದು ರೂಪಾಯಿ ಲಾಭ ಇಲ್ಲ.
ಇದರ ಬದಲಿಗೆ ನಾವು ವರ್ಷಕ್ಕೊಮ್ಮೆ ಟೂರ್ ಹೋಗ್ತೀವಿ, ಅದಕ್ಕೆ ಜನರ ತೆರಿಗೆಯ ಹಣ ಬಳಸ್ತಿವಿ, ಯಾರಿಗಾದರೂ ಎದುರು ಮಾತನಾಡುವ ಧೈರ್ಯ ಇದ್ರೆ ಪಾಲಿಕೆಗೆ ಬನ್ನಿ ಎಂದು ಒಂದು ಪತ್ರಿಕಾ ಹೇಳಿಕೆ ಮೇಯರ್ ಕಡೆಯಿಂದ ಬಂದ್ರೆ ಮುಗಿಯಿತು. ಅದರ ನಂತರ ಇವರು ಮುಂಬೈಗೆ ಬೇಕಾದರೆ ಹೋಗಲಿ, ದುಬೈಗೆ ಬೇಕಾದರೆ ಹೋಗಲಿ.
ಇವರು ಈ ಬಾರಿ ಮುಂಬೈಗೆ ಹೋಗಿ ಸ್ವಚ್ಚತೆಯ ಬಗ್ಗೆ ಅಧ್ಯಯನ ಮಾಡಿ ಬರುತ್ತೇವೆ ಎಂದು ಹೊರಟಿರುವ ಬಗ್ಗೆ ನನ್ನ ಆಕ್ಷೇಪ ಏಕೆಂದರೆ ಇವರು ಕನಿಷ್ಟ ಒಂದು ಸಿಗರೇಟು ಪ್ಯಾಕಿನಷ್ಟು ದೊಡ್ಡ ಕಾಗದದ ಮೇಲೆಯಾದರೂ ತಾವು ಅಲ್ಲಿ ಏನು ನೋಡಿ ಬಂದೆ ಎಂದು ಬರೆಯುವಷ್ಟು ವಿಷಯ ಅಧ್ಯಯನ ಮಾಡಿದರೂ ಪಾಲಿಕೆ ಇವರನ್ನು ಕಳುಹಿಸಿದಕ್ಕೆ ಧನ್ಯವಾಗುತ್ತಿತ್ತು. ಆದರೆ ಇವರು ಬರೆಯುವುದು ಬಿಡಿ, ಇವರ ಬಾಯಿಗೆ ಬಡಿದರೂ ತಾವು ಅಧ್ಯಯನ ಮಾಡಿದ ಒಂದೇ ಒಂದು ಶಬ್ದ ಹೊರಗೆ ಬರುವುದಿಲ್ಲ. ಅಷ್ಟಿರುವಾಗ ಇವರನ್ನು ಕಳುಹಿಸುವುದು ಸರಿ ಎನಿಸುತ್ತಾ? ಇದು ಕೇವಲ ಈ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಹೋಗುವುದು ವೇಸ್ಟ್ ಎಂದಲ್ಲ, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಾಡುವುದು ಹೀಗೆನೆ? ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಧ್ಯಯನ ಪ್ರವಾಸ ಆಗಿದೆ. ಏನು ಲಾಭ ಆಗಿದೆ?
ಒಂದು ಅಧ್ಯಯನ ಪ್ರವಾಸಕ್ಕೆಂದು ಹೋಗುವ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅವರೊಂದಿಗೆ ಎರಡ್ಮೂರು ಅಧಿಕಾರಿಗಳು ಏನು ಮಾಡಬೇಕು? ಬಂದ ನಂತರ ನೀಟಾಗಿ ಕುಳಿತು ತಾವು ನೋಡಿದ, ಅಭ್ಯಸಿಸಿದ ವಿಷಯಗಳ ಬಗ್ಗೆ ನೋಟ್ ಮಾಡಬೇಕು. ಅದರ ನಂತರ ಅದನ್ನು ಒಂದು ವರದಿ ಮಾಡಬೇಕು. ಅದನ್ನು ನಂತರ ಮೇಯರ್ ಅವರಿಗೋ, ಕಮೀಷನರ್ ಅವರಿಗೋ ಸಲ್ಲಿಸಬೇಕು. ಅದರ ಬಳಿಕ ಅದು ಪರಿಷತ್ ಸಭೆಯಲ್ಲಿ ಚರ್ಚೆಗೆ ಇಡಬೇಕು. ಬಳಿಕ ಮೇಯರ್ ಸುದ್ದಿಗೋಷ್ಟಿ ಕರೆದು ನಮ್ಮ ಹೆಮ್ಮೆಯ ಸದಸ್ಯರು ಇಂತಿಂತಹ ವಿಷಯದ ಮೇಲೆ ಅಧ್ಯಯನ ಮಾಡಲು ಇಂತಹ ಸ್ಥಳಕ್ಕೆ ಪ್ರವಾಸ ಹೋಗಿದ್ದರು. ಅವರು ಅಧ್ಯಯನ ಮಾಡಿ ಸಿದ್ಧಪಡಿಸಿದ ವರದಿಯ ಮೇಲೆ ಚರ್ಚೆ ನಡೆದಿದೆ. ಅದನ್ನು ಅನುಷ್ಟಾನಕ್ಕೆ ತರಲು ಇಂತಿಂತಹ ಶೈಲಿಯಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರೆ ಆಗ ಇವರ ಅಧ್ಯಯನ ಪ್ರವಾಸ ಒಪ್ಪಬಹುದು. ಒಂದು ವೇಳೆ ಮೇಯರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಷ್ಟು ಸದಸ್ಯರು ಹೋಗಿದ್ದರು, ಇಷ್ಟು ಖರ್ಚು ಆಗಿದೆ ಎನ್ನುವ ಲೆಕ್ಕವನ್ನು ವಿವರವಾಗಿ ಕೊಟ್ಟಲ್ಲಿ ಅದಕ್ಕಿಂತ ಬೇರೆ ಉತ್ತಮ ಹೆಜ್ಜೆ ಇಲ್ಲ. ಆದರೆ ಅಂತಹುದು ಇಲ್ಲಿಯ ತನಕ ಆಗಲೇ ಇಲ್ಲ. ಈಗ ಅಧ್ಯಯನ ಪ್ರವಾಸ ಹೋಗುವುದು, ನಂತರ ಬಂದು ಕಾಲು ಚಾಚಿ ಮಲಗುವುದು ಇಷ್ಟೇ ನಡೆಯುತ್ತಿದೆ. ಸದಸ್ಯರೊಂದಿಗೆ ಕೆಲವು ಅಧಿಕಾರಿಗಳು ಕೂಡ ಹೋಗುವುದರಿಂದ ಅಧಿಕಾರಿವಲಯ ಕೂಡ ಮೌನವಾಗಿರುತ್ತದೆ.
ಅಷ್ಟಕ್ಕೂ ಈ ಪ್ರವಾಸಕ್ಕೆ ಹೋಗಲು ಆತುರ ತೋರುವವರಿಗೆ ನಾನು ಇನ್ನೊಂದು ವಿಷಯ ಇವತ್ತು ಕೇಳುತ್ತೆನೆ. ಅದೇನೆಂದರೆ ಈ ಮ್ಯಾನ್ ಹೋಲ್ ಇದೆಯಲ್ಲ, ಅದರಲ್ಲಿ ಹಿಂದಿನ ಹಾಗೆ ಸ್ವಚ್ಚತೆಯ ಕಾರ್ಮಿಕರನ್ನು ಇಳಿಸಿ ಅಮಾನುಷವಾಗಿ ನಡೆಸುವಂತಹ ಕೆಲಸ ಈಗ ನಿಂತಿರುವುದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ ಅದರ ಬದಲು desilting machine ಇದೆ. ಅಂತಹುದು ನಮ್ಮ ಪಾಲಿಕೆಯಲ್ಲಿ ನಾಲ್ಕು ಇದೆ. ಅದನ್ನು ಟೆಂಡರ್ ಕರೆದು ಗುತ್ತಿಗೆ ಕೊಡುವ ಕ್ರಮ ಇದೆ. ಆ ಗುತ್ತಿಗೆ ಪಡೆದವರು desilting machine ಬಳಸಿ ಮ್ಯಾನ್ ಹೋಲ್ ಕ್ಲೀನ್ ಮಾಡಬೇಕು. ಆಗ ಏನಾಗುತ್ತದೆ ಎಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬರುವಾಗ ಈ ಮ್ಯಾನ್ ಹೋಲ್ ಗಳು ತುಂಬಿ ಅದರಿಂದ ಗಲೀಜು ಹೊರಗೆ ಬರುವುದು ನಿಲ್ಲುತ್ತದೆ. ಆದರೆ ಪಾಲಿಕೆಯಲ್ಲಿರುವ desilting machine ಗಳ ಬಗ್ಗೆ ಒಂದು ಲಾಗ್ ಬುಕ್ ಇಲ್ಲ. ಅವು ಎಲ್ಲಿ, ಏನು ಕೆಲಸ ಮಾಡುತ್ತಿವೆ ಎನ್ನುವ ಬಗ್ಗೆ ಯಾವ ಸದಸ್ಯನಿಗೆ ತಾನೆ ಗೊತ್ತಿದೆ. ಮೊದಲು ಅದನ್ನು ಶಿಸ್ತುಬದ್ಧವಾಗಿ ಮಾಡಿ, ಆಗ ಅಲ್ಲಲ್ಲಿ ಮ್ಯಾನ್ ಹೋಲ್ ತುಂಬಿ ರಸ್ತೆಯ ಮೇಲೆ ತ್ಯಾಜ್ಯ ಹರಿಯುವುದು ನಿಲ್ಲುತ್ತದೆ. ಅದು ಬಿಟ್ಟು ಮುಂಬೈಗೆ ಹೋಗಿ ನೋಡಿ ಬರುತ್ತೇವೆ ಎಂದು ಹಟ ಮಾಡಿದರೆ ಹೋಗುವವರ ಹೆಸರು, ಪಕ್ಷವನ್ನು ಸಾಮಾಜಿಕ ತಾಣದಲ್ಲಿ ಹಾಕಿ ಬಂದ ನಂತರ ವರದಿ ಕೇಳುತ್ತೇನೆ!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search