ಕೆಲಸಕ್ಕೆ ಅರ್ಜಿದಾರ @ 80
>> ಶುರುವಾಗಿದೆ ಬಿಜೆಪಿ ಘನಾಘಟಿಗಳ ಸಮರ: ಜೇಟ್ಲಿ ವರ್ಸಸ್ ಸಿನ್ಹಾ
>> ಮೋದಿ ಆಪ್ತ ಜೇಟ್ಲಿ ವಿರುದ್ಧ ಆರ್ಥಿಕತೆ ಕುಸಿತ ಅಸ್ತ್ರ ಪ್ರಯೋಗಿಸಿದ ಹಿರಿಯ ನಾಯಕ ಯಶ್ವಂತ್ ಸಿನ್ಹಾ
>> ತಕ್ಷಣವೇ ಅಪ್ಪನಿಗೆ ಮಗ ಜಯಂತ್‍ನಿಂದ ತಿರುಗೇಟು
ದೆಹಲಿ : ದೇಶದ ಆರ್ಥಿಕತೆ ಕುಸಿತಕ್ಕೆ ಪ್ರಧಾನಿ ಹೊಣೆ ಎಂದು ಒಂದೆಡೆ ಪ್ರತಿಪ್ಷಗಳು ಹರಿಹಾಯುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ತಮ್ಮ ಅಸಮಾಧಾನ ಹೊರಹಾಕಿ ಜೇಟ್ಲಿ ತಪ್ಪು ನಿರ್ಧಾರಗಳೇ ಮಾರಕವಾಗಿವೆ ಎಂದು ದೂಷಿಸಿದ್ದರು. ಶಿಸ್ತಿನ ಪಕ್ಷದಲ್ಲಿ ಹಿರಿಯ ನಾಯಕರೊಬ್ಬರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಸಂಪಾದಕೀಯ ಪುಟದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದ ಸಿನ್ಹಾ, ಪ್ರಧಾನಿ ಭೇಟಿಗೆ ಸಮಯ ನೀಡದ್ದಕ್ಕೆ ಇದೇ ನನ್ನ ಆಯ್ಕೆಯಾಯಿತು ಎಂದು ಅಸಹಾಯಕತೆ ಪ್ರದರ್ಶಿಸಿದ್ದರು. ಇದರ ಲಾಭ ಪಡೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ “ಮೋದಿ ವಿಮಾನದ ರೆಕ್ಕೆಗಳು ಕತ್ತಿರಿಸಲಾಗಿವೆ. ಸೀಟ್ ಬೆಲ್ಟ್ ಭದ್ರ’ ಎಂದು ವ್ಯಂಗ್ಯವಾಡಿದ್ದರು. ಮಾಜಿ ಸಚಿವ ಪಿ.ಚಿದಂಬರಂ ಸಿನ್ಹಾಗೆ ಬೆಂಬಲ ಸೂಚಿಸಿದ್ದರು.
ಜೇಟ್ಲಿ ತಿರುಗೇಟು, ಸಿನ್ಹಾಗೆ ಕೆಲಸ ಬೇಕು : ಹಿರಿಯ ಮುಖಂಡ ಸಿನ್ಹಾಗೆ ತಿರುಗೇಟಿ ನೀಡಲು ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯ್ದುಕೊಂಡರು. ಇಂಡಿಯಾ @70, ಮೋದಿ @3.5 ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಿ, ಕೆಲಸಕ್ಕೆ ಅರ್ಜಿದಾರ @80 ಎಂದು ಪರೋಕ್ಷವಾಗಿ ಸಿನ್ಹಾಗೆ ಕುಟುಕಿದರು. ಸಿನ್ಹಾ ವಿತ್ತ ಸಚಿವಾರಗಿದ್ದ 1991ರಲ್ಲಿ ಆದಂಥ ಅನುತ್ಪಾದಕ ಆಸ್ತಿಗಳ ಪ್ರಮಾಣ ಇಂದಿಗೂ ದೇಶಕ್ಕೆ ಹೊರೆಯಾಗಿದೆ. ಅಂಥವರು ಕಾಂಗ್ರೆಸ್‍ಗೆ ಆಹಾರವಾಗುತ್ತಿದ್ದಾರೆ ಅಷ್ಟೇ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. ಹಿರಿಯ ಮುಖಂಡ ಆಡ್ವಾಣಿ ನನಗೆ ಯಾರನ್ನೂ ನೇರವಾಗಿ ಹೆಸರಿಸಿ ತಿರುಗೇಟು ನೀಡಬಾರದು ಎಂದು ಕಿವಿಮಾತು ಹೇಳಿದ್ದನ್ನು ಗೌರವಿಸಿ ನನ್ನ ವಾಗ್ದಾಳಿ ನಿಯಂತ್ರಿಸಿದ್ದೇನೆ ಎಂದರು.
ಚಿದಂಬರಂ ನನ್ನ ಆರ್ಥಿಕತೆ ಕೊಡುಗೆಯ ದಾಖಲೆಗಳನ್ನು ಸರಿದೂಗಿಸಲು ಮತ್ತೆ ಹುಟ್ಟಿ ಬಂದು ಸಚಿವರಾಗಬೇಕು. ವಿತ್ತೀಯ ಕೊರತೆ ಎಂಬ ರೋಗಿಯನ್ನು ಮತ್ತಷ್ಟು ಅನಾರೋಗ್ಯಕ್ಕೆ ದೂಡಿದ ವಿಫಲ ವೈದ್ಯ ಚಿದಂಬರಂ. ಅವರಿಂದ ಯುಪಿಎ ಅವಧಿಯಲ್ಲಿ ಆರ್ಥಿಕತೆ ಪಾತಾಳ ತಲುಪಿದ್ದು, ಈಗಲೂ ನಾವು ಅಡ್ಡಪರಿಣಾಮ ಎದುರಿಸುತ್ತಿದ್ದೇವೆ.
– ಅರುಣ್ ಜೇಟ್ಲಿ, ವಿತ್ತ ಸಚಿವ
ಮಗ ಜಯಂತ್ ವರ್ಸಸ್ ಅಪ್ಪ ಯಶ್ವಂತ್ : ಯಶ್ವಂತ್ ಸಿನ್ಹಾ ಲೇಖನಕ್ಕೆ ಅವರ ಪುತ್ರ ಹಾಗೂ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಮತ್ತೊಂದು ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಲೇಖನ ಬರೆದು ಉತ್ತರಿಸಿದ್ದಾರೆ.
ಸರಕಾರವನ್ನು ಸಮರ್ಥಸಿಕೊಂಡಿರುವ ಅವರು ಕೆಲವೇ ಕೆಲವು ಅಂಶಗಳನ್ನು ಕೇಂದ್ರೀಕರಿಸಿ ಆರ್ಥಿಕತೆ, ಎನ್‍ಪಿಎ ಬಗ್ಗೆ ಯಶ್ವಂತ್ ಕಿಡಿಕಾರಿದ್ದಾರೆ. ಜಿಡಿಪಿ ಲೆಕ್ಕಾಚಾರದ ಹೊಸ ಪದ್ಧತಿಯಿಂದ 5.7 ಎಂದು ಜಿಡಿಪಿ ದಾಖಲಾದರು. ಅದು ಹಳೆಯ ಪದ್ಧತಿಯಲ್ಲಿ 3.7ರಷ್ಟು ಹೆಚ್ಚಿರುತ್ತಿತ್ತು ಎಂದಿದ್ದಾರೆ.
Leave A Reply