ಗೋಹತ್ಯೆ ನಿಷೇಧ ಅಧಿಸೂಚನೆ ಹೊರಡಿಸಿದರೂ, ರಫ್ತು ಮಾತ್ರ ನಿಲ್ಲುತ್ತಿಲ್ಲ

ಕಳೆದ ಮೇ 25ರಂದು ಕೇಂದ್ರ ಸರಕಾರ ಗೋ ಹತ್ಯೆ ನಿಷೇಧದ ಅಧಿಸೂಚನೆ ಹೊರಡಿಸುತ್ತಲೇ, ಗೋಮಾಂಸ ಸೇವಿಸದವರೂ ಇದು ಆಹಾರ ಸಂಸ್ಕೃತಿಯ ಹರಣ ಎಂದು ಬೊಬ್ಬಿರಿದರು. ನಮ್ಮಿಷ್ಟ, ನಾವು ಮನಸ್ಸಿಗೆ ಬಂದದ್ದನ್ನು ತಿನ್ನುತ್ತೇವೆ ಎಂದರು.
ಆದರೆ, ಕೇಂದ್ರ ಸರಕಾರ ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸಿದರೂ ಗೋ, ಎಮ್ಮೆಗಳ ರಫ್ತು ಮಾತ್ರ ನಿಲ್ಲುತ್ತಿಲ್ಲ. ಇಷ್ಟಾದರೂ ಯಾರೂ ಇದು ಕಾನೂನಿನ ಉಲ್ಲಂಘನೆ ಎನ್ನುತ್ತಿಲ್ಲ. ಗೋಹತ್ಯೆ ನಿಷೇಧದ ಅಧಿಸೂಚನೆಗೂ, ಗೋ ರಫ್ತಿಗೂ ಯಾವುದೇ ಅಡಚಣೆಯಾಗಿಲ್ಲ ಎಂದು ಹೇಳುತ್ತಿಲ್ಲ. ಎಲ್ಲರೂ ಮಗುಮ್ಮಾಗಿದ್ದಾರೆ.
ದೇಶದಲ್ಲಿ 2016-17ನೇ ಸಾಲಿನಲ್ಲಿ ಎಮ್ಮೆಯ ಮಾಂಸ ರಫ್ತಿನಲ್ಲಿ ಕುಸಿತ ಕಂಡಿರುವುದು ಎಲ್ಲರಿಗೂ ಗೊತ್ತು. ಮೊದಲಿದ್ದ 14.76 ಲಕ್ಷ ಟನ್ ಮಾಂಸದ ರಫ್ತು 13.31 ಲಕ್ಷ ಟನ್ನಿಗೆ ಇಳಿಕೆಯಾದ ಅಂಕಿ ಅಂಶ ಕಣ್ಣೆದುರೇ ಇವೆ.
ಆದರೆ ಉತ್ತರ ಬಂದರಿನ ಮೂಲಕ ಎಮ್ಮೆಯ ಮಾಂಸದ ರಫ್ತಿನಲ್ಲಿ ಮಾತ್ರ ಪ್ರಮಾಣ ಏರಿಕೆಯಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶದ ಗಾಜಿಯಾಬಾದ್, ಸಹಸ್ನೂರ್, ಬಿಜನೂರ್, ನಾಗಾಲೆಂಡಿನ ಬರ್ಮಾ ಕ್ಯಾಂಪ್ ಮೂಲಕ ಎಮ್ಮೆ ಮಾಂಸದ ರಫ್ತಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಕಳೆದ ಏಪ್ರಿಲ್-ಜುಲೈ ಅವಧಿಯಲ್ಲಿ ಚೆನ್ನೈ ಮತ್ತು ಕಟ್ಟುಪಳ್ಳಿ ಬಂದರಿನಿಂದಲೇ ಸುಮಾರು 15,577 ಮೆಟ್ರಿಕ್ ಟನ್ ಎಮ್ಮೆ ಮಾಂಸ ರಫ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೋಮಾಂಸ ಸಾಗಣೆ ಕುರಿತು ಕೇಂದ್ರ ಸರಕಾರವೇ ಹಲವು ನಿಬಂಧನೆ ಹೇರಿದ್ದರೂ ಇಷ್ಟೆಲ್ಲ ಅಕ್ರಮ ನಡೆಯಲು ಹೇಗೆ ಸಾಧ್ಯ? ಆಯಾ ರಾಜ್ಯ ಸರಕಾರಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ಎದುರಾದರೂ, ಅಧಿಸೂಚನೆಯಿಂದ ಗೋಮಾಂಸ ರಫ್ತು ಹೆಚ್ಚಾಗಲು ಸ್ಥಳೀಯರ, ಕೆಲವು ಮೂಲಭೂತವಾದಿಗಳ ಕೃತ್ಯ ಎದ್ದು ಕಾಣುತ್ತಿದೆ. ಆದಾಗ್ಯೂ, ಕೇಂದ್ರ ಸರಕಾರದ ನಿರ್ಣಯ ವಿರೋಧಿಸಿಯಾದರೂ ಇಂಥವರು ಗೋಮಾಂಸ ಸಾಗಣೆ ಮಾಡುತ್ತಾರೆ. ಈ ಮಾತನ್ನು ಅಲ್ಲಗಳೆಯುವಂತಿಲ್ಲ.
-ಅನಿರುದ್ಧ್ ನಾಗೇಂದ್ರ, ಬೆಂಗಳೂರು
Leave A Reply