ಅಮಿತ್ ಶಾ ಎಂಬ ಮಾಸ್ಟರ್ ಹೋಂವರ್ಕ್ ನೋಡಲು ಮಂಗಳೂರಿಗೆ ಬರುತ್ತಿದ್ದಾರೆ!
ಕ್ಯಾ ಕರ್ ರಹೇ ಹೋ ಭಾಯ್, ಇಸ್ ಜಿಲ್ಲಾ ಕೋ ಸಂಘ ಪರಿವಾರ್ ಕಾ ಸ್ಟ್ರಾಂಗ್ ಖಿಲಾ ಮಾನ್ ತೇ ಹೇ, ಲೇಕಿನ್ ಯೇಹಾ ಆಟ್ ಮೇ ಸಾತ್ ಎಂಎಲ್ ಎ ಕಾಂಗ್ರೆಸ್ ಕಾ ಹೇ, ಪಾಲಿಕಾ ಬಿ ಕಾಂಗ್ರೆಸ್ ಕಾ ಹೇ, ತುಮ್ ಲೋಗ್ ಕ್ಯಾ ಕರ್ ರಹೇ ಹೋ. ಯೆಂಹಾ ತೋ ಗೋಟಾಲೆ ಕಾ ಬಾಪ್ ಸಿಹಾಸತ್ ಕರ್ ರಹೇ ಹೇ. ಮುಝೆ ಪತಾ ಚಲಾ ಹೇ ಕಿ ಕುಡ್ಸೆಂಪು ಮೇ ಹಜಾರ್ ಕರೋಡ್ ಕಾ ಗೋಟಾಲಾ ಕರ್ನೆ ವಾಲೆ ಎಂಎಲ್ ಎ ಬನೆ ಹೇ. ಘರ್ ಮೇ ಇನ್ ಕಂ ಟ್ಯಾಕ್ಸ್ ರೇಡ್ ಹೋನೆ ವಾಲೆ ಸುರತ್ಕಲ್ ಕಾ ಎಂಎಲ್ ಎ ಹೇ, ಉಳ್ಳಾಲ್ ಕಾ ಎಂಎಲ್ ಎ ಔರ್ ಉನ್ ಕಾ ಬಾಯಿ ಕಹಾ ಕಹಾ ಭ್ರಷ್ಟಾಚಾರ್ ಕಾ ಪೈಸಾ ಮೇ ಗೋಟಾಲ್ ಕರ್ ಚುಕೇ ಹೇ. ಯೇಹಾ ಕಾ ಮಿನಿಸ್ಟರ್ ಕುಲೇ ಆಮ್ ಪೊಲೀಸ್ ಆಫೀಸರ್ ಕೋ ದಮ್ಕಿ ದೇ ಚುಕೇ ಹೇ, ಮೂಡಬಿದ್ರೆ ಕಾ ಎಂಎಲ್ ಎ ಹಿಂದೂ ಕಾ ಖೂನ್ ಹೂವಾ ತೋ ಚುಪ್ ಬೈಠತಾ ಹೇ. ಯೇ ಸಬ್ ಎಂಎಲ್ ಎ ಬನೆ ಹೇ ಔರ್ ಬಿಜೆಪಿ ಚುಪ್ಕೆ ಕ್ಯಾ ಕರ್ ರಹಾ ಹೇ” ಇದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಲಿರುವ ಮಾತುಗಳು ನನಗೆ ಹೇಗೆ ಮೊದಲೇ ಗೊತ್ತಾಯಿತು ಎಂದು ನಿಮಗೆ ಅನಿಸಬಹುದು. ಅವರ ಭಾಷಣದ ಪ್ರತಿ ಲೀಕ್ ಆಯಿತು ಎಂದು ಹೇಳುವುದಿಲ್ಲ. ವಿಷಯ ಏನೆಂದರೆ ಅವರು ಇದನ್ನು ಇಲ್ಲಿಯವರ ತಲೆಯ ಒಳಗೆ ಹಾಕಲಿ ಎನ್ನುವುದು ನನ್ನ ನಿರೀಕ್ಷೆ.
ಒಂದು ವಿಷಯ ಏನು ಹೇಳಿದರೆ ಅಮಿತ್ ಶಾ ಬಂದು ಹೋಗುವುದರಿಂದ ನನ್ನ ಹೊಟ್ಟೆಯೇನೂ ತುಂಬುವುದಿಲ್ಲ ಅಥವಾ ಮಂಗಳೂರು ನಾಳೆಯೇ ಅಮಿತ್ ಶಾ ಅವರ ಆಗಮನದಿಂದ ಸ್ವರ್ಗವಾಗುತ್ತೆ ಎನ್ನುವ ಭ್ರಮೆ ನನಗಿಲ್ಲ. ಆದರೆ ಒಂದು ಪ್ರಬಲ ವಿಪಕ್ಷ ಇದ್ದಾಗ ಮಾತ್ರ ಆಡಳಿತ ಪಕ್ಷಕ್ಕೆ ಬುದ್ಧಿ ಬರುತ್ತದೆ. ಅದನ್ನು ಅಮಿತ್ ಶಾ ಬೆಂಗಳೂರಿನಲ್ಲಿ ಒಂದಷ್ಟರ ಮಟ್ಟಿಗೆ ಮಾಡಿ ತೋರಿಸಿದ್ದಾರೆ. ಅವರು ಮೂರು ದಿನ ಬೆಂಗಳೂರಿನಲ್ಲಿ ಇರುವಾಗ ಅಲ್ಲಿ ಬಿಜೆಪಿ ನಾಯಕರು ಕೈ ಮುಂದೆ ಮಾಡಿ ಟೀಚರ್ ಅಡಿಕೋಲಿನಿಂದ ಚಿಕ್ಕದಿರುವಾಗ ನಮಗೆ ಬಾರಿಸುತ್ತಿದ್ದರಲ್ಲ, ಹಾಗೆ ಪೆಟ್ಟು ತಿಂದಿದ್ದರು. ಹೋಂವರ್ಕ್ ಮಾಡದೇ ಶಾಲೆಗೆ ಬರುತ್ತಿಯಾ ಎಂದು ಟೀಚರ್ ಬೆಂಚ್ ಮೇಲೆ ನಿಲ್ಲಿಸಿ ಕೇಳುತ್ತಿದ್ದರಲ್ಲ, ಹಾಗೆ ನಿಲ್ಲಿಸಿ ಅಮಿತ್ ಶಾ ಕೇಳಿದ್ದರು. ಅದರ ನಂತರ ಅಲ್ಲಿ ಸ್ವಲ್ಪ ಹೋರಾಟ ನಡೆಯಿತು. ವಿರೋಧ ಮಾಡುವುದಕ್ಕಾಗಿಯೇ ವಿರೋಧ ಮಾಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ನಿರ್ಲಕ್ಷ್ಯ ಆಡಳಿತದ ವಿರುದ್ಧ ಮೌನವಾಗಿ ಕುಳಿತರೆ ಅದು ಬೆನ್ನು ಮೂಳೆ ಇದ್ದರೂ ಎದ್ದು ನಿಲ್ಲಲಾಗದ ಪರಿಸ್ಥಿತಿ. ಅದು ನಿಲ್ಲಬೇಕು.
ಅಮಿತ್ ಶಾ ಉತ್ತರ ಪ್ರದೇಶದಂತಹ ಉತ್ತರ ಪ್ರದೇಶದಲ್ಲಿಯೇ ಪ್ರಬಲ ಪ್ರಾದೇಶಿಕ ಪಕ್ಷಗಳು ಬೇರು ಬಿಟ್ಟಿದ್ದಾಗ ಅದನ್ನು ಕಿತ್ತು ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಹಾಗಿರುವಾಗ ಅವರಿಗೆ ಸರಿಯಾಗಿ ನೋಡಿದರೆ ಕರ್ನಾಟಕ ಲೆಕ್ಕವೇ ಅಲ್ಲ. ಆದರೆ ವಿಷಯ ಇರುವುದು ಇಲ್ಲಿನವರ ಜಡತ್ವ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೇಟ್ ತೆಗೆದುಕೊಳ್ಳುವುದಕ್ಕೆ ತೋರಿಸುವಷ್ಟೇ ಆಸಕ್ತಿಯನ್ನು ಸ್ಪರ್ಧಿಗಳು ಆಡಳಿತ ಪಕ್ಷದ ಲೋಪದೋಷಗಳನ್ನು ಬಯಲಿಗೆ ತರಲು ಹೋರಾಡಬೇಕು. ಜನರಿಗೆ ಕಾಂಗ್ರೆಸ್ ಮಾಡುತ್ತಿರುವ ಅನಾಚಾರವನ್ನು ದಿಕ್ಕರಿಸಲು ಗೊತ್ತಿದೆ. ಆದರೆ ಬಿಜೆಪಿ ಕ್ರಿಯಾತ್ಮಕವಾಗಿ ಹೋರಾಡದೆ ಇದ್ದರೆ ನಂಬಿಕೆ ಬರುವುದಾದರೂ ಹೇಗೆ?
ಇನ್ನು ಅಕ್ಟೋಬರ್ 4 ರಂದು ಅಮಿತ್ ಶಾ ಟಿಎಂಎ ಪೈ ಹಾಲ್ ನಲ್ಲಿ ಪ್ರಬುದ್ಧರ ಸಭೆ ನಡೆಸಲಿದ್ದಾರೆ. ಅಲ್ಲಿ ಶಿಕ್ಷಕರು, ಲೆಕ್ಕ ಪರಿಶೋಧಕರು, ವಕೀಲರು, ವೈದ್ಯರು, ಇಂಜಿನಿಯರ್ ಗಳು, ವಿವಿಧ ಕ್ಷೇತ್ರಗಳ ತಂತ್ರಜ್ಞರು ಉಪಸ್ಥಿತರಿರುತ್ತಾರೆ. ಅದು ಕೇವಲ ತೋರಿಕೆಯ ಉಪಸ್ಥಿತಿ ಆದರೆ ಏನೂ ಪ್ರಯೋಜನವಿಲ್ಲ. ಅದರ ಬದಲಿಗೆ ಅಲ್ಲಿ ಬಂದವರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಏನಾಗಬೇಕಿತ್ತು, ಏನಾಗುತ್ತಿದೆ ಎಂದು ಹೇಳಬೇಕು. ಬಿಜೆಪಿ ಎಲ್ಲಿ ಎಡವಿದೆ ಎಂದು ಹೇಳಿದರೂ ನನ್ನ ಪ್ರಕಾರ ತಪ್ಪಿಲ್ಲ. ಹೇಳಿದಾಗ ಮಾತ್ರ ಸರಿಪಡಿಸಿಕೊಳ್ಳಲು ಅವಕಾಶ ಮತ್ತು ಮಾರ್ಗದಶ್ಯನ ಸಿಗುತ್ತದೆ. ಅದು ಬಿಟ್ಟು ನೀವು ಮಾಡಿದ್ದು ತಪ್ಪು ಎಂದು ಹೇಳಿದಾಗ ಕೋಪಿಸಿಕೊಂಡರೆ ಅಲ್ಲಿ ಸುಧಾರಣೆಗೆ ಅವಕಾಶ ಇರುವುದಿಲ್ಲ. ಆ ನಿಟ್ಟಿನಲ್ಲಿ ಅಮಿತ್ ಶಾ ಮುಕ್ತ ಅವಕಾಶ ಕೊಡುತ್ತಾರೆ ಎಂದು ನಂಬಿಕೆ ಇದೆ. ಅದು ಬಿಟ್ಟು ಯಾರೋ ಪಾಸ್ ಕೊಟ್ಟು ಬರಬೇಕು ಎಂದು ಕೇಳಿಕೊಂಡರು ಎನ್ನುವ ಕಾರಣಕ್ಕೆ ಅಲ್ಲಿ ಸುಮ್ಮನೆ ಕುಳಿತು ಮೊಬೈಲ್ ನಲ್ಲಿ ವಾಟ್ಸ್ ಅಪ್, ಫೇಸ್ ಬುಕ್ ನೋಡಿ ಕಾಲಹರಣ ಮಾಡುವಂತಹ ಪ್ರಬುದ್ಧರಿಂದ ಏನೂ ಉಪಯೋಗವಿಲ್ಲ. ಹಾಗೆ ಟೈಮ್ ವೇಸ್ಟ್ ಮಾಡಲು ಅಮಿತ್ ಶಾ ಯಾವುದೋ ಬ್ಲಾಕ್ ನ ಅಧ್ಯಕ್ಷರೂ ಅಲ್ಲ. ಅವರು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅವರ ಸಮಯ ಕೂಡ ಅಮೂಲ್ಯ. ನಿಮ್ಮ ಸಲಹೆ ದೇಶದ, ರಾಜ್ಯದ, ಜಿಲ್ಲೆಯ, ಮಂಗಳೂರಿನ ಪ್ರಗತಿಯ ದಿಕ್ಕು ಬದಲಿಸಬಹುದು. ಪ್ರಯತ್ನಿಸಿ ನೋಡಿ!
Leave A Reply