• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಅನರ್ಹರಿಗೆ ಕೊಡುವ ಕೆಲಸ ಕೋಟ ಶ್ರೀನಿವಾಸ ಪೂಜಾರಿ ಮಾಡಬಾರದು!

Naresh Shenoy Posted On October 3, 2017
0


0
Shares
  • Share On Facebook
  • Tweet It

ನಡೆದಾಡುವ ಜ್ಞಾನಕೋಶ, ಕರ್ನಾಟಕ ಮಾತ್ರವಲ್ಲ ದೇಶದಲ್ಲಿಯೇ ಸಾಹಿತ್ತಿಕ ವಲಯದಲ್ಲಿ ಹೆಸರು ಸಂಪಾದಿಸಿರುವ ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಕಾರಂತ ಪ್ರಶಸ್ತಿಯನ್ನು ಪ್ರತಿ ವರ್ಷ ಅರ್ಹರಿಗೆ ನೀಡುವ ಸಂಪ್ರದಾಯವನ್ನು ಕಾರಂತರ ಹುಟ್ಟೂರಿನ ಅಭಿಮಾನಿಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ವಿಷಯ. ನಮ್ಮ ರಾಜ್ಯದ ಅನೇಕ ಸಾಧಕರು ಈ ಪ್ರಶಸ್ತಿಯನ್ನು ಸ್ವೀಕರಿಸಿ ಧನ್ಯರಾಗಿದ್ದಾರೆ. ಈ ಬಾರಿ ಈ ಪ್ರಶಸ್ತಿಯನ್ನು ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್ ಅವರಿಗೆ ಕೊಡಲು ಸಂಘಟಕರು ನಿರ್ಧರಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಈ ಪ್ರಶಸ್ತಿ ಅನರ್ಹ ವ್ಯಕ್ತಿಯೊಬ್ಬನ ಕೈಗೆ ಹೋಗಲಿದೆ. ಬಹುಶ: ಎಲ್ಲಿಯಾದರೂ ಶಿವರಾಮ ಕಾರಂತರ ಆತ್ಮ ಇದನ್ನು ನೋಡುತ್ತಿದ್ದರೆ ಅದು ಅಸಹ್ಯದಿಂದ ಮರುಗಬಹುದು.
ಬಹುಶ: ದೇಶದ್ರೋಹಿಗಳ ಸಂಘಟನೆ, ಚೀನಿಯರ ಬೂಟು ನೆಕ್ಕುವ ಸಂಘಟನೆ, ದೇಶವನ್ನು ಇಬ್ಭಾಗ ಮಾಡಲು ಜಯಕಾರ ಹಾಕುವ ಸಂಘಟನೆಗಳು ತಮ್ಮ ಆರಾಧ್ಯ ಮೂರ್ತಿಗಳ ಹೆಸರಿನಲ್ಲಿ ಯಾವುದಾದರೂ ಪ್ರಶಸ್ತಿಯನ್ನು ಪ್ರಾರಂಭಿಸಿ ಅದನ್ನು ಪ್ರಕಾಶ್ ರೈಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ. ಮುಸೊಲಿನಿ ಪ್ರಶಸ್ತಿ, ದಾವೂದ್ ಇಬ್ರಾಹಿಂ ಪ್ರಶಸ್ತಿ, ಕಸಬ್ ಪ್ರಶಸ್ತಿ, ಹಿಟ್ಲರ್ ಪ್ರಶಸ್ತಿ ಹೀಗೆ ಯಾವುದಾದರೊಂದು ಪ್ರಶಸ್ತಿಯನ್ನು ಪ್ರಕಾಶ್ ರೈಗೆ ಕೊಟ್ಟಿದ್ದರೆ ಯಾರ ಹೆಸರಿನಲ್ಲಿ ಆ ಪ್ರಶಸ್ತಿ ಇದೆಯೋ ಅವರ ಆತ್ಮ ಸಂತೃಪ್ತಿಗೊಳ್ಳುತ್ತಿತ್ತು. ಆದರೆ ಕಾರಂತರ ಹೆಸರಿನಲ್ಲಿ ಕೊಡುವುದರಿಂದ ಆ ಪ್ರಶಸ್ತಿ ಕಾರ್ಯಕ್ರಮದ ಸಂಘಟಕರು ಪ್ರಕಾಶ್ ರೈಯನ್ನು ಸನ್ಮಾನಿಸುವುದರೊಂದಿಗೆ ಶಿವರಾಮ್ ಕಾರಂತರನ್ನು ಅವಮಾನಿಸುತ್ತಿದ್ದಾರೆ ಎಂದೇ ಹೇಳಬೇಕು.
ಪ್ರಕಾಶ್ ರೈ ತಮಿಳುನಾಡಿನಲ್ಲಿ ಕಾಲಿಟ್ಟ ಕೂಡಲೇ ಪ್ರಕಾಶ್ ರಾಜ್ ಎಂದೇ ಕರೆಸಿಕೊಳ್ಳುತ್ತಾರೆ, ಯಾಕೆಂದರೆ ತಮ್ಮ ಸರ್ ನೇಮ್ ಗೊತ್ತಾಗಿ ಅಲ್ಲಿಯವರು ತನ್ನನ್ನು ಹೊರಗಿಟ್ಟಾರು ಎನ್ನುವ ಭಯ. ಅಂತವರು ಪುತ್ತೂರಿನವರು ಎನ್ನುವ ಹೆಮ್ಮೆ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಇರಲೇಬಾರದು. ಇನ್ನು ಕಾವೇರಿ ವಿಷಯ ಬಂದಾಗ ತನ್ನ ಒಂದು ಮಾತಿನಿಂದ ತಮಿಳರು ಕೋಪಗೊಂಡು ತನ್ನ ಹೊಟ್ಟೆಗೆ ಹೊಡೆಯಬಹುದು ಎಂದು ಹೆದರಿದ್ದ ಪ್ರಕಾಶ್ ರಾಜ್ ನಿರೂಪಕಿಯನ್ನೇ ಬೈದಿದ್ದರು. ತನ್ನ ಜಾತಿ ಮೇಲೆ ಹೆಮ್ಮೆ ಇಲ್ಲ, ತನ್ನ ರಾಜ್ಯದ ಜೀವನದಿ ಮೇಲೆ ಹೆಮ್ಮೆ ಇಲ್ಲ, ಕೊನೆಗೆ ದೇಶದ ಪ್ರಧಾನಿಯನ್ನು ಕೂಡ ನಟ ಎಂದು ಮೂದಲಿಸುವ ಮೂಲಕ ತಾನು ಒಳ್ಳೆಯ ನಟ ಎನ್ನುವ ಅಹಂಕಾರವನ್ನು ಪ್ರಕಾಶ್ ರಾಜ್ ಪ್ರದರ್ಶಿಸಿದ್ದಾರೆ.
ನರೇಂದ್ರ ಮೋದಿಯವರನ್ನು ಟೀಕಿಸಿದ್ದ ಕಾರಣಕ್ಕೆ ಪ್ರಕಾಶ್ ರಾಜ್ ದೇಶದ್ರೋಹಿ ಎಂದು ಹೇಳುವಷ್ಟು ಅಜ್ಞಾನ ನಮಗಿಲ್ಲ. ಆದರೆ ತನ್ನ “ಆಪ್ತ”ಗೆಳತಿ ಗೌರಿ ಲಂಕೇಶ್ ಹತ್ಯೆಯಾದಾಗ ಪ್ರಕಾಶ್ ರಾಜ್ ಅದನ್ನು ಮೋದಿಯೇ ನಿಂತು ಮಾಡಿಸಿದ್ದು ಎನ್ನುವ ರೀತಿಯಲ್ಲಿ ಹೇಳಿದ್ದು ಮಾತ್ರವಲ್ಲ, ತಮಗೆ ಸಿಕ್ಕಿರುವ ಐದು ರಾಷ್ಟ್ರ, ರಾಜ್ಯ ಪ್ರಶಸ್ತಿಯನ್ನು ಹಿಂತಿರುಗಿಸಿ ಅಸಹಿಷ್ಣುತೆ ಮೆರೆಯಲು ಹೊರಟರಲ್ಲ, ಅದಕ್ಕೆ ಏನೂ ಹೇಳುವುದು.
ಒಂದು ರಾಜ್ಯದ ಕಾನೂನು, ಸುವ್ಯವಸ್ಥೆ ನೋಡಬೇಕಾಗಿರುವುದು ಆ ರಾಜ್ಯದ ಗೃಹ ಇಲಾಖೆ. ಗೌರಿಯ ಹತ್ಯೆ ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ. ಈಗ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರಕಾರ. ಅದಕ್ಕೆ ಬೈದರೆ ಪಾಪ ಸಿದ್ಧರಾಮಯ್ಯ ತಪ್ಪು ತಿಳಿದುಕೊಂಡಾರು, ಬೇಜಾರು ಮಾಡಿಕೊಂಡಾರು ಎಂದು ಅಂದುಕೊಂಡ ಪ್ರಕಾಶ್ ರಾಜ್ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ನಿಜ ಹೇಳಬೇಕೆಂದರೆ ಮೋದಿಯವರು ಆನೆಯಿದ್ದ ಹಾಗೆ. ಅವರು ರಾಜಪಥದಲ್ಲಿ ನಡೆಯುವಾಗ ಅಕ್ಕಪಕ್ಕದ ಬೀದಿಗಳಿಂದ ನಾಯಿಗಳು ಬೊಗಳಿದರೆ ಆನೆ ನಾಯಿಗಳನ್ನು ಅಟ್ಟಾಡಿಸಿ ಗಲ್ಲಿಗೆ ನುಗ್ಗುವುದಿಲ್ಲ. ಮೋದಿಯನ್ನು ಹೀನಾಯಮಾನವಾಗಿ ಟೀಕಿಸಿ ಬರೆದ, ಭಾಷಣ ಮಾಡಿದ ಗೌರಿಯನ್ನು ಹಿಡಿದು ಹೊಡೆಯಲು ಮೋದಿ ಆಕೆಯ ಲೆವೆಲ್ಲಿಗೆ ಇಳಿಯಬೇಕಾಗುತ್ತದೆ. ಅದು ಮೋದಿಗೆ ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ. ಕತ್ತಲಾಗುತ್ತಿದ್ದಂತೆ ವಿಜಯ ಮಲ್ಯನ ಬ್ರಾಂಡಿಗೆ ಕೈ ಹಾಕಿ, ಕಿಂಗ್ ಸಿಗರೇಟ್ ಬಾಯಿಗೆ ಇಟ್ಟು, “ಪ್ರಕಾಶಿ”ಸುತ್ತಿರುವ ಯಾರನ್ನಾದರೂ ಮಂಚಕ್ಕೆ ಎಳೆದು ಲೈಟ್ ಆಫ್ ಮಾಡುವವರನ್ನು ಎಡಗಣ್ಣಿನಿಂದ ನೋಡುವಷ್ಟು ಸಮಯ ಮೋದಿಗೆ ಇಲ್ಲ, ಅದೇನಿದ್ದರೂ ಪ್ರಕಾಶ್ ರಾಜ್ ಮಟ್ಟ.
ಈಗ ಉಳಿದಿರುವ ಪ್ರಶ್ನೆ. ಕೋಟ ಶಿವರಾಮ ಕಾರಂತ ಪ್ರಶಸ್ತಿಯ ಹಿಂದಿರುವ ಮನಸ್ಸು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಎಂದು ಎಲ್ಲರಿಗೂ ಗೊತ್ತು. ಸಜ್ಜನ ರಾಜಕಾರಣಿ, ಪ್ರಬುದ್ಧ ವ್ಯಕ್ತಿತ್ವ. ಈಗಲೂ ಸಮಯ ಮೀರಿಲ್ಲ. ಅವರು ಆದಷ್ಟು ಶೀಘ್ರದಲ್ಲಿ ಶಿವರಾಮ ಕಾರಂತರ ಪ್ರಶಸ್ತಿ ಅಪಮೌಲ್ಯ ಆಗುವುದನ್ನು ತಪ್ಪಿಸುತ್ತಾರೆ ಎನ್ನುವ ನಿರೀಕ್ಷೆ ಇದೆ. ಇನ್ನು ಕೊಟತಟ್ಟು ಗ್ರಾಮ ಪಂಚಾಯತ್ ಕೂಡ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಕೆಲವೊಮ್ಮೆ ತಪ್ಪು ಸಂಭವಿಸುತ್ತದೆ. ಆದರೆ ಇಲ್ಲಿ ಸಮಯ ಮೀರಿಲ್ಲ. ಎಲ್ಲರ ಅಪೇಕ್ಷೆಯಂತೆ ಶ್ರೀನಿವಾಸ ಪೂಜಾರಿಯವರು ಈ ಪ್ರಶಸ್ತಿಗಾಗಿ ಅರ್ಹರನ್ನು ಗುರುತಿಸುತ್ತಾರೆ ಎನ್ನುವ ನಂಬಿಕೆ ಇದೆ. ಅದು ಮೀರಿಯೂ ಅವರು ಪ್ರಕಾಶ ರಾಜ್ ಅವರಿಗೆನೆ ಪ್ರಶಸ್ತಿ ಕೊಟ್ಟರೆ ಕೋಟ ಶ್ರೀನಿವಾಸ ಪೂಜಾರಿಯವರು ದೇಶಭಕ್ತ ಕಾರಂತರಿಗೆ ಮಾತ್ರವಲ್ಲ, ಕರಾವಳಿಯ ಸಭ್ಯ, ಪ್ರಜ್ಞಾವಂತ ನಾಗರಿಕರನ್ನು ಅವಮಾನಿಸಿದಂತೆ ಆಗುತ್ತದೆ. ಉಳಿದದ್ದು ಅವರಿಗೆ ಬಿಟ್ಟಿದ್ದು!

0
Shares
  • Share On Facebook
  • Tweet It


Kota Srinivas PoojaryPrakash Rai


Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Naresh Shenoy July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Naresh Shenoy July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search