• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕಾಂಗ್ರೆಸ್ಸಿಗರೇ ಹಿಂದೂಗಳ ಮನೆಮನೆಯಲ್ಲೂ ಈ ಪ್ರಶ್ನೆಗಳಿಗೆ ಉತ್ತರಿಸಿ

TNN Correspondent Posted On October 6, 2017
0


0
Shares
  • Share On Facebook
  • Tweet It

ಬಿಜೆಪಿಯ ವಿಸ್ತಾರಕ ಕಾರ್ಯಕ್ರಮಕ್ಕೆ ಪ್ರತಿಯಾಗಿ “ಮನೆಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಜಾತಿ ನೋಡಿಯೇ ಕಾರ್ಯಕ್ರಮ ರೂಪಿಸಿರುವ ಕಾಂಗ್ರೆಸ್‌ ಈಗ ಜಾತ್ಯತೀತವಾಗಿ ಮನೆಗೆ ತೆರಳಲು ಸಿದ್ಧತೆ ನಡೆಸಿದೆ. ಮನೆ ಮನೆಗೆ ಬರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಜನ ಕೆಲವು ಪ್ರಶ್ನೆಗಳನ್ನು ಕೇಳಲು ಇಷ್ಟಪಡುತ್ತಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿದೆ.
ನಾನೂ ಗೋಮಾಂಸ ತಿನ್ನುತ್ತೇನೆ ಎಂದು ಮುಖ್ಯಮಂತ್ರಿಯೇ ಹೇಳುತ್ತಾರೆ. ಗೋಮಾಂಸ ಸೇವನೆಯನ್ನು ಹಠಕ್ಕೆ ಬಿದ್ದು ಬೆಂಬಲಿಸಿದ ದರಿದ್ರ ಸರ್ಕಾರ ನಿಮ್ಮದು. ಗೋವುಗಳನ್ನು ಪೂಜಿಸುವ ಲಕ್ಷಾಂತರ ಹಿಂದೂಗಳ ಶ್ರದ್ಧೆ ಘಾಸಿಗೊಳಿಸಿದ ನಿಮಗೆ ಯಾಕೆ ಮನೆಯೊಳಗೆ ಸೇರಿಸಬೇಕು? ನಿಮ್ಮ ಮಾತುಗಳನ್ನು ನಾವು ಯಾಕೆ ಆಲಿಸಬೇಕು? ನಿಮ್ಮ ಸರ್ಕಾರ ನಮ್ಮ ಅಂದರೆ ಹಿಂದುಗಳ ಮಾತಿಗೆ ಎಂದಾದರೂ ಬೆಲೆ ಕೊಟ್ಟಿದೆಯಾ?


ಹಿಂದೂ ದೇವಾಲಯಗಳು ಸೋರುತ್ತಿದ್ದರೂ ಸರಿಪಡಿಸದೆ ಅದರ ಹುಂಡಿ ಹಣವನ್ನು ಮಸೀದಿ, ಚರ್ಚಗಳಿಗೆ ಹಂಚಿದ ಸರಕಾರ ನಿಮ್ಮದು. ನಿಮ್ಮನ್ನು ನಂಬಿದರೆ ನಮ್ಮ ದೇವಾಲಯಗಳು ಅಭಿವೃದ್ಧಿ ಸಾಧ್ಯವೇ? ಇರುವ ದೇವಾಲಯಗಳ ಅಭಿವೃದ್ಧಿ ಬಗ್ಗೆ ಗಮನಹರಿಸದೇ, ಇನ್ನಷ್ಟು ದೇವಾಲಯಗಳನ್ನು ಕಬಳಿಸಲು ಸರ್ಕಾರ ಹವಣಿಸಿದೆ. ಮುಂದಿನ ಬಾರಿಯೂ ನಿಮಗೆ ಮತ ನೀಡಿದರೆ ನಮಗೆ ಉಳಿವುಂಟೇ?
ದೇವಸ್ಥಾನಗಳು ಆಮೇಲೆ, ನಿಮ್ಮ ಸರಕಾರದ ಅವಧಿಯಲ್ಲಿ ಹಿಂದೂ ಸಂಘಟನೆಯಲ್ಲಿ ತೊಡಗಿದ್ದ ಹತ್ತು ಜನ ಸಂಘ ಪರಿವಾರದವರ ಕೊಲೆಯಾಗಿದೆ. ಹಿಂದೂ ಸಂಘಟನೆಯ ಯಾವ ಪ್ರಕರಣವನ್ನೂ ನಿಮ್ಮ ಸರ್ಕಾರ ಹಿಂಪಡೆದಿಲ್ಲ. ಆದರೆ ಪಿಎಫ್‌ಐನಂತಹ ಸಂಘಟನೆಯ ವಿರುದ್ಧ ಇದ್ದ ೧೦ಕ್ಕೂ ಹೆಚ್ಚು ಪ್ರಕರಣಗಳನ್ನು ಸರ್ಕಾರ ರದ್ದುಪಡಿಸಿದೆ. ಹೀಗಿರುವಾಗ ನಿಮ್ಮ ಸರಕಾರ ಹಿಂದೂಗಳಿಗೆ ಸುರಕ್ಷಿತ ಅಂತ ನಾನು ಹೇಗೆ ನಂಬಲಿ? ಹಿಂದೂಗಳು, ಹಿಂದುತ್ವ ಉಳಿದರೆ ತಾನೆ ದೇವಾಲಯ? ಎಂಬುದು ನಿಮ್ಮ ಸರಕಾರದ ಧಾಟಿಯೇ?
ಹಿಂದೂ ದೇವರನ್ನ ಅವಮಾನಗೊಳಿಸಿದ, ಅದನ್ನೇ ಪ್ರಮುಖ ಕಾಯಕ ಮಾಡಿಕೊಂಡಿರುವ ಭಗವಾನ್ ಎಂಬ ವ್ಯಕ್ತಿಗೆ ನಿಮ್ಮ ಸರ್ಕಾರ ಬಸವಶ್ರೀ ಪ್ರಶಸ್ತಿ ಕೊಟ್ಟಿತು. ಭಗವಾನ್‌ನಂತಹ ಇನ್ನೂ ಕೆಲವರನ್ನು ಸರ್ಕಾರ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಒಬ್ಬ ಆಸ್ತಿಕನಾದ ಹಿಂದೂವಾಗಿ ಸರ್ಕಾರವನ್ನೇಕೆ ಬೆಂಬಲಿಸಬೇಕು?
ಇತ್ತೀಚೆಗೆ ಶರತ್ ಹತ್ಯೆಯ ವಿಚಾರವಾಗಿ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಕರೆದಾಗ ಅಪರಾಧಿ ಯಾರೇ ಆಗಿರಲಿ, ಹಿಂದೂವೇ ಆಗಿರಲಿ ಎನ್ನುತ್ತಾರೆ. ಅದೇ ಮುಖ್ಯಮಂತ್ರಿಗಳ ಬಾಯಲ್ಲಿ, ಆರೋಪಿ ಮುಸ್ಲಿಮನೇ ಆಗಿರಲಿ ಎಂದು ಯಾಕೆ ಬರಲಿಲ್ಲ? ಹಿಂದೂ ಹೆಸರನ್ನು ಅತ್ಯಂತ ಸುಲಭವಾಗಿ ಹೇಳುವ, ಟೀಕಿಸುವವರ ಬಬಾಯಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಎಂಬ ಪದಗಳು ಯಾಕೆ ಬರುವುದೇ ಇಲ್ಲ? ಇದಕ್ಕೆ ಕಾರಣವೇನು? ಎಲ್ಲಿ ಹಾಗೆ ಹೇಳಿಬಿಟ್ಟರೆ ಅವರು ಮತಗಳು ಬರುವುದಿಲ್ಲ ಎಂಬ ಭಯವೇ? ಇಂತಹ ಓಲೈಕೆಯ ನಿಮ್ಮ ಸರಕಾರ ನಾವು ಹಿಂದೂಗಳು ಮತ ಹಾಕಬೇಕೆ?
ಹಿಂದೂಗಳ ತಾಯಂದಿರನ್ನು sex slave ಎಂದು ಹೇಳಿದ, ತನ್ನ ಪತ್ರಿಕೆಯಲ್ಲಿ ಅವಾಚ್ಯ ಅಶ್ಲೀಲ ಪದಗಳಿಂದಲೇ ಹಿಂದೂ ಮುಖಂಡರನ್ನು ಸಂಭೋದಿಸುತ್ತಿದ್ದ ಪತ್ರಕರ್ತೆಗೆ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಿದ್ದೇಕೆ? ಹಿಂದೂ ಹಾಗೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದರು ಎಂಬುದು ಸರಕಾರ ಗೌರವ ನೀಡಲು ಕಾರಣವೇ? ಅಲ್ಲಿಗೆ ಹಿಂದೂ ವಿರೋಧಿಗಳು ನಿಮಗೆ ಪ್ರಿಯರು ಎಂಬುದನ್ನು ಸರ್ಕಾರ ಘಂಟಾಘೋಶವಾಗಿ ಹೇಳಿದಂತಾಗಲಿಲ್ಲವೇ? ಇಲ್ಲವಾದಲ್ಲಿ ಆಕೆ ಯಾವ ಮಹಾ ಸಾಧನೆ ಮಾಡಿದಳು ಎಂದು ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು? ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸುವುದಕ್ಕೊಂದು ನಿಯಮ ಇಲ್ಲವೇ? ಆಕೆ ದೇಶಕ್ಕಾಗಿ, ರಾಜ್ಯಕ್ಕಾಗಿ ಏನು ಮಾಡಿದ್ದಳು? ನಕ್ಸಲರ ಜತೆ ನಿಕಟ ಸಂಪರ್ಕದಲ್ಲಿದ್ದುದು ದೇಶಪ್ರೇಮದ ಕೆಲಸವೇ?

ನಿಮ್ಮ ಸರ್ಕಾರದ ಪ್ರತಿನಿಧಿಗಳೆ ಅಧಿಕೃತವಾಗಿ ಧರ್ಮ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಲಿಂಗಾಯಿತರು ಮತ್ತು ವೀರಶೈವರು, ಅದಕ್ಕೊಂದು ಪ್ರತ್ಯೇಕ ಧರ್ಮ ಎಂದು ವಿವಾದ ಎಬ್ಬಿಸಿದ್ದೇ ನೀವು. ನಿಮ್ಮ ಸಚಿವರಾದ ಎಂ.ಬಿ. ಪಾಟೀಲ್ ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ನಾಳೆ ವೋಟಿಗಾಗಿ ಸಮಾಜದ ಸಾಮರಸ್ಯಕ್ಕೆ ಬೆಂಕಿ ಹಚ್ಚಲೂ ನೀವು ಹಿಂಜರಿಯಲಾರಿರಿ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೆ? ಇದೇ ಕೆಲಸವನ್ನು ಮುಸ್ಲಿಮರ ಸುನ್ನಿ- ಸಲಫಿ ವಿಷಯದಲ್ಲಿ ಮಾಡಲು ನೀವು ಸಿದ್ಧರಿದ್ದೀರಾ?
ಮೌಢ್ಯ ನಿಷೇಧ ಕಾಯ್ದೆಯಲ್ಲಿ ನೀವು ಕೇವಲ ಹಿಂದೂ ಧರ್ಮದ ಆಚರಣೆಯನ್ನಷ್ಟೇ ಪ್ರಶ್ನಿಸುತ್ತೀರಿ. ಬೇರೆ ಧರ್ಮದ ಆಚರಣೆಗಳ ವಿಷಯ ಬಂದಾಗ ಅವುಗಳನ್ನು ತೇಲಿಸಿಬಿಟ್ಟಿದ್ದೀರಿ. ಬೇರೆ ಧರ್ಮದ ಅಂಧಾಚರಣೆಗಳನ್ನು ಸ್ಪಷ್ಟವಾಗಿ ಹೆಸರು ನಮೂದಿಸಲೂ ನಿಮಗೆ ಹೆದರಿಕೆಯೇ? ಹೀಗಿರುವಾಗ ನೀವು ಹಿಂದೂ ವಿರೋಧಿಯಲ್ಲ ಅಂತ ಹೇಗೆ ನಂಬುವುದು?
ನಿಮ್ಮ ಆಡಳಿತ, ಯೋಜನೆಗಳ ಬಗ್ಗೆ ಬಹಳಷ್ಟು ಪ್ರಶ್ನೆಗಳಿವೆ. ಪ್ರತಿಯೊಂದು ಯೋಜನೆಯಲ್ಲೂ ಜಾತಿ ಹುಡುಕಿದರೆ. ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಾತಿ ಜಾತಿಗಳ ನಡುವಿನ ದ್ವೇಷ ಇನ್ನಷ್ಟು ಹೆಚ್ಚಿದೆ. ರಾಜ್ಯಾದ್ಯಂತ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ಈ ರೀತಿಯ ಆಡಳಿತದಿಂದ ಜಾತ್ಯತೀತ ಆಡಳಿತ ಸಾಧ್ಯವೇ? ಹಿಂದೂಗಳನ್ನು ಒಡೆಯಲು ನಿಮ್ಮ ಸರಕಾರ ಈ ರೀತಿ ಜಾತಿಗಳನ್ನು ಬಳಸಿಕೊಂಡಿದೆ. ಕೆಲವು ಜಾತಿಗಳನ್ನು ಓಲೈಸುವುದು, ಇನ್ನು ಕೆಲವು ಜಾತಿಗಳನ್ನು ದ್ವೇಷಿಸುವ ಮೂಲಕ, ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಯತ್ನಿಸಿದೆ. ಹೀಗೆ ಮಾಡಿದರೆ ಜಾತಿ ವ್ಯವಸ್ಥೆ ನಶಿಸುವ ಬದಲು ಇನ್ನಷ್ಟು ಬಲವಾಗುತ್ತದೆ. ಅದೇ ನಿಮ್ಮ ಸರ್ಕಾರಕ್ಕೆ ಬೇಕಾಗಿರುವುದಾ? ಯಾಕೆಂದರೆ ಜಾತಿ ಮೂಲಕ ಹಿಂದೂಗಳ ಒಗ್ಗಟ್ಟು ಮುರಿಯಬಹುದು ಎಂಬುದು ನಿಮ್ಮ ಸರ್ಕಾರದ ಆಲೋಚನೆಯಾ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ ಮನೆಮನೆಗಳಿಗೆ ಹೋಗುವುದೊಳಿತು. ಇಲ್ಲವಾದಲ್ಲಿ ನಿಮ್ಮ ಸರ್ಕಾರದ ಪಾಪಕರ್ಮಗಳು ಮನೆಮನೆಯಲ್ಲೂ ನಿಮ್ಮನ್ನು ಕಾಡಿಯಾವು.

0
Shares
  • Share On Facebook
  • Tweet It


congresshindu


Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಯುಟಿ ಖಾದರ್ ಅಥವಾ ಬಿಎಂ ಫಾರೂಕ್ ಯಾರಾಗಲಿದ್ದಾರೆ ದಕ್ಷಿಣ ಕನ್ನಡದ ಉಸ್ತುವಾರಿ!!
May 31, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search