• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದರೆ ಪಕ್ಷ ಸೇರಬಲ್ಲೆ- ಅನುಪಮಾ ಶೆಣೈ

Abdul Gaffur, Katipalla Posted On October 6, 2017


  • Share On Facebook
  • Tweet It

ಒಂದೂವರೆ ವರ್ಷಗಳ ಹಿಂದೆ ಆಗಿನ ಬಳ್ಳಾರಿಯ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ರಣಕಹಳೆ ಮೊಳಗಿಸಿ, ರಾಜ್ಯ ಸರಕಾರವನ್ನು ಟೀಕಿಸಿ, ಸರಕಾರಿ ಉದ್ಯೋಗದಲ್ಲಿ ಇರುವ ಮಹಿಳೆಯರಿಗೆ ರಾಜ್ಯ ಸರಕಾರದ ಸಚಿವರು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ನೋವು ವ್ಯಕ್ತಪಡಿಸಿ ಪೊಲೀಸ್ ಇಲಾಖೆಗೆ ರಾಜೀನಾಮೆ ಬಿಸಾಡಿ ಹೊರಬಂದವರು ಅನುಪಮಾ ಶೆಣೈ. ಕಳೆದ ಒಂದೂವರೆ ವರ್ಷಗಳಿಂದ ಅವರು ಲೈಮ್ ಲೈಟ್ ನಲ್ಲಿ ಇರಲಿಲ್ಲ. ರಾಜ್ಯದ ಜನರು ಬಹುತೇಕ ಅವರನ್ನು ಮರೆತುಬಿಟ್ಟಿದ್ದರು. ಈಗ ಅನುಪಮಾ ಶೆಣೈ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ ಎಂದು ಘೋಷಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬರಲು ಸಿದ್ಧರಾಗಿ ನಿಂತಿದ್ದಾರೆ.
ಈ ವಾರ ಬೇರೆ ಬೇರೆ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಅವರ ನೇರಪ್ರಸಾರದ ಸಂದರ್ಶನ ಪ್ರಸಾರವಾಗಿದೆ. ಒಂದು ಚಾನೆಲ್ ನಲ್ಲಿ ಅವರಿಗೆ ಕರೆ ಮಾಡಿದ ವೀಕ್ಷಕರೊಬ್ಬರು ನೀವು ಬಿಜೆಪಿಗೆ ಸೇರಿದರೆ ಒಳ್ಳೆಯದು ಎಂದು ಕೊಟ್ಟ ಸಲಹೆಗೆ “ಅಲ್ಲಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರೆ ಬಿಜೆಪಿ ಸೇರುತ್ತೇನೆ” ಎಂದು ಹೇಳಿದ್ದಾರೆ. ಹಾಗೆ ಇನ್ನೊರ್ವ ವೀಕ್ಷಕರೊಬ್ಬರು ಕರೆ ಮಾಡಿ ನೀವು ಬೇರೆ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಗೆ ಸೇರಬಹುದಲ್ಲ ಎಂದು ಹೇಳಿದಾಗ ಬರುವ ಚುನಾವಣೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆನೆ ಟಿಕೇಟ್ ಕೊಟ್ಟರೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದಾರೆ.
ತನಗೆ ಕಾಂಗ್ರೆಸ್ ವಿರೋಧಿಯಲ್ಲ, ತಾನು ಸೇವೆಯಲ್ಲಿದ್ದಾಗ ಕಾಂಗ್ರೆಸ್ ಮುಖಂಡರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದೆ. ಅವರು ಕೂಡ ನನ್ನೊಂದಿಗೆ ಚೆನ್ನಾಗಿಯೇ ಇದ್ದರು ಎಂದು ಹೇಳಿರುವ ಅನುಪಮಾ ಶೆಣೈ, ಕಾಂಗ್ರೆಸ್ಸನ್ನಾದರೂ ಅವರು ಮಾಡಿದ ತಪ್ಪುಗಳಿಗೆ ಕ್ಷಮಿಸಬಹುದು. ಆದರೆ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿದ್ದಾಗ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅನುಪಮಾ ಶೆಣೈ ನಂತರ ಯು ಟರ್ನ್ ತೆಗೆದುಕೊಂಡು ಪರಮೇಶ್ವರ್ ನಾಯ್ಕ್ ನಾನು ಅಂದುಕೊಂಡಷ್ಟು ಕೆಟ್ಟವರಲ್ಲ ಎಂದು ಹೇಳಿ ಮಾಧ್ಯಮಗಳನ್ನೇ ಆಶ್ಚರ್ಯಗೊಳಿಸಿದ್ದರು. ರಾಜೀನಾಮೆ ಕೊಡುವಾಗ ಕಾಂಗ್ರೆಸ್ ಅನ್ನು ಟೀಕಿಸಿದ್ದ ಅನುಪಮಾ ಶೆಣೈ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಮ್ಮನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದರು. ರಾಜೀನಾಮೆ ಕೊಟ್ಟ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಪ್ರಮುಖರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದರು. ಅದೇ ಅನುಪಮಾ ಶೆಣೈ ಮೊನ್ನೆ ಒಂದು ವಾಹಿನಿಯಲ್ಲಿ ವೀಕ್ಷಕರೊಬ್ಬರ ಸಲಹೆಗೆ ಉತ್ತರಿಸುವಾಗ ಕಲ್ಲಡ್ಕದಲ್ಲಿ ಕೋಮುಗಲಭೆಯಾಗಿ ತಿಂಗಳುಗಟ್ಟಲೆ ವ್ಯಾಪಾರಿಗಳಿಗೆ ವ್ಯವಹಾರಕ್ಕೆ ದಕ್ಕೆಯಾಗಿದೆ, ನಾನು ಜಿಎಸ್ ಬಿ, ನಮ್ಮ ಸಮುದಾಯದಲ್ಲಿ ಹೆಚ್ಚಿನವರು ವ್ಯಾಪಾರದಲ್ಲಿ ಇದ್ದಾರೆ, ಹೀಗೆ ಅಂಗಡಿಗಳು ಹಲವು ದಿನ ಬಂದ್ ಆದರೆ ನಮ್ಮ ಗತಿ ಏನು ಎಂದು ತನ್ನ ಸಮುದಾಯದ ಪರವಾಗಿ ಮಾತನಾಡಿ ಬಿಜೆಪಿಗೆ ಸೇರಿ ಎಂದು ವೀಕ್ಷಕರೊಬ್ಬರು ಕೊಟ್ಟ ಸಲಹೆಗೆ ತಿರುಗಿ ಮಾತನಾಡುವ ಮೂಲಕ ತಮ್ಮ ಕೋಪ ಪ್ರದರ್ಶಿಸಿದ್ದಾರೆ.
ಇವರ ಆವೇಶ ನೋಡಿ ಕಕ್ಕಾಬಿಕ್ಕಿಯಾದ ಆ ವೀಕ್ಷಕ ನಾನು ಹೀಗೆ ಹೇಳಿದ್ದು ಎಂದು ಸಮಾಧಾನಪಡಿಸಲು ನೋಡಿದರೆ ಮುಂದುವರೆದು ಅನುಪಮಾ ಶೆಣೈ, ಅಲ್ಲಿ ಗಲಾಟೆಯಾಗಲು ನೀವೆ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಪರ ಮಾತನಾಡಿದ ವೀಕ್ಷಕನಿಗೆ ಇರಿಸುಮುರುಸು ಮಾಡಿದ್ದಾರೆ. ತಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹೇಳಿರುವ ಅನುಪಮಾ ಶೆಣೈ, ಒಂದು ಚಾನಲ್ ನಲ್ಲಿ ತಮಗೆ 60 ಸೀಟ್ ಕನಿಷ್ಟ ಗೆಲ್ಲಬಹುದು ಎನ್ನುವ ವಾತಾವರಣ ಇದೆ ಎಂದಿದ್ದಾರೆ. ಅವರು ಯಾವಾಗ ಕಾಂಗ್ರೆಸ್ಸನ್ನು ಟೀಕಿಸುತ್ತಾರೆ, ಯಾವಾಗ ಬಿಜೆಪಿಯನ್ನು ಬೈಯುತ್ತಾರೆ, ಯಾವಾಗ ಆರ್ ಎಸ್ ಎಸ್ ಅನ್ನು ಹೊಗಳುತ್ತಾರೆ, ಯಾವಾಗ ಕಲ್ಕಡ್ಕ ಘಟನೆಗಳನ್ನು ಬಿಜೆಪಿ ಮೇಲೆ ಹಾಕುತ್ತಾರೆ ಎಂದು ತಿಳಿಯದೇ ಜನರು ಕಕ್ಕಾಬಿಕ್ಕಿಯಾಗಿದ್ದಾರೆ!

  • Share On Facebook
  • Tweet It


- Advertisement -
anupama shenoy


Trending Now
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Abdul Gaffur, Katipalla June 30, 2022
ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
Abdul Gaffur, Katipalla June 29, 2022
Leave A Reply

  • Recent Posts

    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
  • Popular Posts

    • 1
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 2
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 3
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 4
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 5
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search