ಷಾ ಪುತ್ರನ ಕಂಪೆನಿ ವಿರುದ್ಧ ಅಪಪ್ರಚಾರ, ವೆಬ್‍ಸೈಟ್ ವಿರುದ್ಧ 100 ಕೋಟಿಗೆ ಮಾನನಷ್ಟ ಮೊಕದ್ದಮೆ
ಅಹಮದಾಬಾದ್ : ಅಮಿತ್ ಷಾ ಪುತ್ರ ಜಯ್ ಷಾ ಒಡೆತದ ಟೆಂಪಲ್ ಎಂಟರ್‍ಪ್ರೈಸಸ್ ಕಂಪೆನಿ ಕಳೆದ ಮೂರು ವರ್ಷಗಳಲ್ಲಿ 16000 ಪಟ್ಟು ಅಧಿಕ ವಹಿವಾಟು ದಾಖಲಿಸಿದೆ. ಅದೂ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರು.6230 ಕೋಟಿ ನಷ್ಟದಲ್ಲಿದ್ದ ಕಂಪೆನಿ ದಿಢೀರ್ 2015-16ನೇ ಸಾಲಿನಲ್ಲಿ ರು.80.5 ಕೋಟಿ ವಹಿವಾಟು ನಡೆಸಿದೆ ಎಂಬ ವಿವರದೊಂದಿಗೆ ಲೇಖನ ಬರೆದಿರುವ ವೆಬ್‍ಸೈಟ್ ಮಾನನಷ್ಟ ಮೊಕದ್ದಮೆ ಭೀತಿ ಎದುರಿಸುತ್ತಿದೆ. ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಲಾಗುತಿದೆ ಎಂದು ಜಯ್ ಷಾ ವೆಬ್ ಸೈಟ್ ಮಾಲೀಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲು ತಯಾರಿ ನಡೆಸಿದ್ದಾರೆ. ರಿಜಿಸ್ಟ್ರಾರ್ ಆಫ್ ಕಂಪೆನಿಸ್‍ಗೆ ಸಲ್ಲಿಕೆಯಾಗಿರುವ ದಾಖಲೆಗಳ ಪ್ರಕಾರ ಎಂದು ತನ್ನ ಲೇಖನಕ್ಕೆ ಆಧಾರ ಒದಗಿಸಿರುವ ವೆಬ್‍ಸೈಟ್ ಲೇಖನ ಹಿಡಿದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತ್ತು.
ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಕಪಿಲ್ ಸಿಬಲ್ “ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ಜಯ್ ಕಂಪೆನಿಗಳ ತನಿಖೆಗೆ ಪ್ರಧಾನಿ ಆದೇಶಿಸಲಿ’ ಎಂದು ಸವಾಲು ಎಸೆದಿದ್ದರು.
ಪೀಯೂಷ್ ಗೋಯೆಲ್ ಇಂಧನ ಸಚಿವರಾಗಿದ್ದಾಗ ಜಯ್ ಷಾ ಕಂಪೆನಿಗೆ ಸಾರ್ವಜನಿಕ ಉದ್ದಿಮೆ ಐಆರ್‍ಇಡಿಎ ಮೂಲಕ ರು. 10.35 ಕೋಟಿ ಸಾಲ ಮಂಜೂರು ಮಾಡಿದ್ದರು ಎಂದು ತಿಳಿದುಬಂದಿದೆ.
Leave A Reply