ಅಲ್ಲಿ ಅತ್ಯಾಚಾರದ ಆರೋಪ, ಇಲ್ಲಿ ಕಾಂಗ್ರೆಸ್ ಉಸ್ತುವಾರಿ
Posted On October 12, 2017
>> ವೇಣುಗೋಪಾಲ್ ವಿರುದ್ಧ ಕೇರಳ ಸಿಎಂ ಪಿಣರಾಯಿ ಸರಕಾರ ಹೂಡಲಿದೆ ಭ್ರಷ್ಟಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕೇಸು
>> ಬಹುಕೋಟಿ ಸೋಲಾರ್ ಹಗರಣದಲ್ಲಿ ಮಾಜಿ ಸಿಎಂ ಉಮ್ಮನ್ ಚಾಂಡಿ ಮತ್ತು 9 ಕಾಂಗ್ರೆಸ್ ಮುಖಂಡರ ವಿರುದ್ಧ ವಿಜಿಲೆನ್ಸ್ ತನಿಖೆ
ತಿರುವನಂತಪುರಂ : ಕೇರಳದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಿಡದೆ ಕಾಡಿದ್ದ ಬಹುಕೋಟಿ ಭ್ರಷ್ಟಾಚಾರದ ಸೋಲಾರ್ ಹಗರಣದ ಭಾಗವಾದ ಕಾಂಗ್ರೆಸ್ ಮುಖಂಡರಿಂದ ನಿರಂತರ ಅತ್ಯಾಚಾರ ಆರೋಪ ಕರ್ನಾಟಕದಲ್ಲಿ ಮನೆಮಾಡಿರುವ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ಗೆ ಮತ್ತೆ ಕಾಡಲಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸೋಲಾರ್ ಹಗರಣದಲ್ಲಿ ಮರುತನಿಖೆಗೆ ನಿವೃತ್ತ ನ್ಯಾ. ಜಿ.ಶಿವರಾಂ ನೇತೃತ್ವದ ಸಮಿತಿ ಶಿಫಾರಸು ಮಾಡಿದ್ದ ವರದಿ ಆಧರಿಸಿ ವಿಜಿಲೆನ್ಸ್ ತನಿಖೆಗೆ ಆದೇಶಿಸಲಿದ್ದಾರ. ಈ ಕುರಿತು ಸ್ವತಃ ಅವರೇ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ, ಮಾಜಿ ಗೃಹ ಸಚಿವ ತಿರುವಾಂಕೂರು ರಾಧಾಕೃಷ್ಣನ್, ಮಾಜಿ ಇಂಧನ ಸಚಿವ ಆರ್ಯದಾನ್ ಮೊಹಮ್ಮದ್ ವಿರುದ್ಧ ಭ್ರಷ್ಟಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರತ್ಯೇಕ ಪ್ರಕರಣಗಳನ್ನು ಸರಕಾರವೇ ದಾಖಲಿದುವುದಾಗಿ ಹೇಳಿದ್ದಾರೆ. ಒಟ್ಟು 10 ಕಾಂಗ್ರೆಸ್ ಮುಖಂಡರನ್ನು ಪಿಣರಾಯಿ ಸೋಲಾರ್ ಹಗರಣ ಎಂಬ ಒಂದೇ ಬಾಣದಿಂದ ರಾಜಕೀಯ ನಿವೃತ್ತಿಗೆ ದೂಡುತ್ತಿದ್ದಾರೆ.
ಸರಿತಾ ನಾಯರ್ ಯಾರು? : ಕೇರಳ ಸರ್ಕಾರದಿಂದ 0ಸೋಲಾರ್ ಉಪಕರಣಗಳ ಅಳವಡಿಕೆ ಗುತ್ತಿಗೆ ಪಡೆದ ಕಂಪನಿ ಮುಖ್ಯಸ್ಥೆ ಸರಿತಾ ನಾಯರ್. ಈಕೆಯನ್ನು ದೆಹಲಿಯ ತಮ್ಮ ಸಚಿವರ ನಿವಾಸದಲ್ಲಿ ವೇಣುಗೋಪಾಲ್ ಕರೆಸಿ, 2011ರಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಷ್ಟಲ್ಲದೇ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಹಗರಣದ ತನಿಖೆ ವೇಳೆ ಬಂಧಿತಳಾಗಿದ್ದಾಗ ಜೈಲಿನಲ್ಲಿ ಆತ್ಮಾವಲೋಕನಕ್ಕಾಗಿ ಬರೆದ ಪತ್ರದಲ್ಲಿ ಸರಿತಾ ಉಲ್ಲೇಖಿಸಿದ್ದರು. ಸಿಎಂ ಉಮ್ಮನ್ ಚಾಂಡಿ, ಮುಖ್ಯಮಂತ್ರಿ ಕಾರ್ಯಾಲಯದ ಸಹಾಯಕರು, ಗೃಹ ಸಚಿವ, ವೇಣುಗೋಪಾಲ್ ಸೇರಿದಂತೆ 10ಕ್ಕೂ ಹೆಚ್ಚು ಸಚಿವರು ಸರಿತಾ ಮೊಬೈಲ್ ನಿರಂತರ ಕರೆಮಾಡಿರುವ ವಿವರಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿ ಸೋಲಾರ್ ಹಗರಣ ಸೆಕ್ಸ್ ರ್ಯಾಕೆಟ್ ಸ್ವರೂಪ ಪಡೆದಿತ್ತು. ತಮ್ಮನ್ನು ಬಳಸಿಕೊಂಡಿದ್ದಲ್ಲದೇ ಸೋಲಾರ್ ಹಗರಣವನ್ನು ತಮ್ಮ ತಲೆಗೆ ಕಟ್ಟಲು ಮುಖಂಡರು ಸಂಚು ಮಾಡಿದ್ದಾರೆ ಎಂದು ಸರಿತಾ ಆರೋಪಿಸಿದ್ದರು. ಸರಿತಾ ವಿರುದ್ಧ ವೇಣುಗೋಪಾಲ್ ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ದಾರೆ.
- Advertisement -
chandycmcongresskarnatakakeralakuttymodinairndaoomenpinarayipoliticiansrapesaritascamsexsolarteam solarupavenugopalvijayan
Trending Now
ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು - ಸಚಿನ್ ಪೈಲೆಟ್
November 22, 2024
ದುಬೈಗೆ ಹೊರಡುವ ಯೋಚನೆ ಇದ್ದರೆ ಈ ನಿಯಮ ಕಡ್ಡಾಯ!
November 22, 2024
Leave A Reply