ನನಗಿಂತ ಪ್ರಣಬ್ ಪ್ರಧಾನಿಯಾಗಲು ಹೆಚ್ಚು ಸಮರ್ಥರಿದ್ದರು
>> ಇತಿಹಾಸದ ಸತ್ಯಗಳನ್ನು ಮೌನ ಮುರಿದು ಹೊರಹಾಕಿದ ಮಾಜಿ ಪ್ರಧಾನಿ
>> ಸೋನಿಯಾ ಆದೇಶ ಮೀರದ ಅಸಹಾಯಕತೆ ಬಂಧಿಸಿತ್ತು
ನ್ಯೂಡೆಲ್ಲೀ : ತುಂಬಾ ಮೌನವಾಗಿರುವವರು ತಮ್ಮಲ್ಲಿ ಅನೇಕ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುತ್ತಾರೆ ಎಂಬುದು ಸತ್ಯ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ಶುಕ್ರವಾರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಬಾಯಿಂದ ಗತರಹಸ್ಯವೊಂದು ಹೊರಬಿದ್ದಿದೆ.
” ಯುಪಿಎ ಅವಧಿಯಲ್ಲಿ ಪ್ರಧಾನಿ ಹುದ್ದೆ ನೀಡದಿದ್ದಕ್ಕೆ ಅಸಮಾಧಾನ ಹೊಂದಲು ಪ್ರಣಬ್ ಮುಖರ್ಜಿಯವರಿಗೆ ಎಲ್ಲ ರೀತಿಯ ಹಕ್ಕು ಇದೆ. ಆ ಹುದ್ದೆಗೆ ನನಗಿಂತಲೂ ಅವರು ಹೆಚ್ಚು ಅರ್ಹರಾಗಿದ್ದರು ಕೂಡ. ಆದರೆ ನನ್ನ ಬಳಿಯೂ ಪ್ರಧಾನಿ ಹುದ್ದೆ ಅಲಂಕರಿಸದ ಹೊರತು ದಾರಿ ಇರಲಿಲ್ಲ ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅಣತಿ ಮೀರಲಾಗಲಿಲ್ಲ ಎಂದು ಪರೋಕ್ಷವಾಗಿ ಬೇಸರಿಸಿದ್ದಾರೆ.
ಮುಖರ್ಜಿ ಬರೆದಿರುವ “ಕೋಯಲೀಷನ್ ಇಯರ್ಸ್-1996-2012′ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಂಗ್ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.
ಸೋನಿಯಾ ತಮಗೆ ಪ್ರಧಾನಿಯಾಗಿ ಎಂದು ಆದೇಶಿಸಿದ್ದನ್ನು ಮೀರಲಾಗದ ನನ್ನ ಪರಿಸ್ಥಿತಿ ಪ್ರಣಬ್ ಅವರಿಗೆ ಅರ್ಥವಾಗಿತ್ತು. ಇದರಿಂದ ನಮ್ಮ ಸಂಬಂಧ ಉಳಿದಿದೆ ಎಂದು ಸಿಂಗ್ ಸೂಚ್ಯವಾಗಿ ಹೇಳಿ ಸಭಿಕರನ್ನು ಆಶ್ಚರ್ಯಚಕಿತರಾಗಿಸಿದರು. ಆದರೆ ಈ ಕಾರ್ಯಕ್ರಮದಲ್ಲಿದ್ದ ಕಾಂಗ್ರಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಮಾತ್ರ ಸಂದರ್ಭ ಮುಜುಗರ ತಂದಿಟ್ಟಿತ್ತು.
ಸಿಂಗ್ ಸರಕಾರದ ಭಾಗವಾಗುವುದು ಬೇಡ : ಪ್ರಧಾನಿ ಅಭ್ಯರ್ಥಿಯಾದ ಸಿಂಗ್ ಅವರಿಗಿಂತಲೂ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ರಾಜಕೀಯ ಅನುಭವದಲ್ಲಿ ಪ್ರಣಬ್ ಹಿರಿಯರು. ಇದು ಎಲ್ಲರಿಗೂ ತಿಳಿದಿತ್ತು. ಹಾಗಾಗಿಯೇ ಪ್ರಧಾನಿ ಪ್ರಣಬ್ ಅವರೇ ಆಗುತ್ತಾರೆ ಎಂದು ಎಲ್ಲರೂ ತಿಳಿದಿದ್ದರು. ಆದರೆ ಸೋನಿಯಾ ಲೆಕ್ಕಾಚಾರ ಬೇರೆಯಿತ್ತು ಎಂದು ಮಾಜಿ ರಾಷ್ಟ್ರಪತಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಸಿಂಗ್ ನೇತೃತ್ವದಲ್ಲಿ ಯುಪಿಎ ಸರಕಾರದ ಭಾಗವಾಗಲು ನನಗೆ ಇಚ್ಛೆಯಿರಲಿಲ್ಲ. ಆದರೆ ಸೋನಿಯಾ ಒತ್ತಡದಿಂದ ನಿಮ್ಮ ಅನುಭವ ಸಿಂಗ್ ಅವರಿಗೆ ಅವಶ್ಯಕ ಎಂದು ಪಟ್ಟು ಹಿಡಿದಾಗ ಒಪ್ಪಿ ಸಲಹೆಗಳನ್ನ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Leave A Reply