ಮೋದಿ ನಾಯಕತ್ವದಲ್ಲಿ “ನಾನು ಬಲಿಷ್ಠ” ಎಂದು ಭಾರತ ಸಾರಿದೆ
Posted On October 16, 2017
0

>> ನಮ್ಮ ಗಡಿ ಸುರಕ್ಷಿತವಾಗಿದೆ ಎಂದು ಮನದಟ್ಟಾಗಿ ಚೀನಾ ಹಿಂದಿರುಗಬೇಕಾಯಿತು
>> ಭಾರತದ ಪ್ರತಿಷ್ಠೆಗೆ ಜಗತ್ತು ತಲೆಬಾಗಿದೆ
>> ವೋಟಿಗಾಗಿ ರಾಜಕೀಯ ಮಾಡಿಲ್ಲ. ಸಮಾಜ ಮತ್ತು ದೇಶದ ಏಳಿಗೆಗೆ ಮಾತ್ರ ಬಿಜೆಪಿಯ ರಾಜಕಾರಣ
ನ್ಯೂಡೆಲ್ಲಿ: ನಮ್ಮ ಗಡಿಗಳು ಅತ್ಯಂತ ಸುರಕ್ಷಿತವಾಗಿವೆ ಮತ್ತು ಚೀನಾಗೂ ಈಗ ಅದು ಮನದಟ್ಟಾಗಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಭಾನುವಾರ ಚೀನಾಗೆ ಕುಟುಕಿದ್ದಾರೆ.
ಡೋಕ್ಲಾಂ ಬಿಕಟ್ಟನ್ನು ವೃಥಾ 73 ದಿನಗಳವರೆಗೆ ದೂಡುತ್ತಾ ಕೊನೆಗೂ ಏನೂ ಮಾಡಲಾಗದೆ ರಸ್ತೆ ನಿರ್ಮಾಣ ಕೈಬಿಟ್ಟು ಹತಾಶರಾಗಿ ಹಿಂದುರಿಗಿದ ಚೀನಾ ಸೇನೆಗೆ ಪರೋಕ್ಷವಾಗಿ ಅವರು ಕುಟುಕಿದ್ದಾರೆ.
ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ವಿಶ್ವದಲ್ಲಿ ನಾನೂ ಕೂಡ ಬಲಿಷ್ಠವಾಗಿದ್ದೇನೆ ಎಂದು ತೋರಿಸಿದೆ. ಜಾಗತಿಕ ಮಟ್ಟದಲ್ಲಿ ಇತರೆ ದೇಶಗಳು ಭಾರತದ ಪ್ರತಿಷ್ಠೆಗೆ ತಲೆಬಾಗಿದೆ ಎಂದಿದ್ದಾರೆ.
ಪ್ರತಿದಿನ 5-10 ಉಗ್ರರರನ್ನು ಬಲಿಪಡೆಯುತ್ತೇವೆ: ಪಾಪಿ ಪಾಕಿಸ್ತಾನ ಪ್ರತಿದಿನ ಭಾರತದ ಒಗ್ಗಟ್ಟು ಮುರಿಯಲು ಹಲವಾರು ಸಂಚು ರೂಪಿಸುತ್ತಾ ಬಲ ಪ್ರಯೋಗ ನಡೆಸುತ್ತಿದೆ. ಆದರೆ ನಮ್ಮ ಯೋಧರು ಯಾವುದಕ್ಕೂ ಅಂಜದೆ ಪ್ರತಿ ದಿನ 5-10 ಉಗ್ರರನ್ನು ಸದೆ ಬಡಿದು ಪಾಕ್ ಸಂಚು ವಿಫಲಗೊಳಿಸುತ್ತಿದ್ದಾರೆ ಎಂದು ರಾಜನಾಥ ಹೆಮ್ಮೆಯಿಂದ ಕೊಂಡಾಡಿದ್ದಾರೆ.
Trending Now
ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
August 28, 2025