ನೇಪಾಳದ ಹಿಂದು ದೇವಾಲಯ ಪುನರ್‍ನಿರ್ಮಾಣಕ್ಕೆ ಅಮೆರಿಕದಿಂದ ರೂ. 65 ಲಕ್ಷ ನೆರವು
Posted On October 17, 2017
0
ಕಾಠ್ಮಂಡು : ನಮ್ಮ ದೇವಸ್ಥಾನಗಳನ್ನು ಭಾರತೀಯರಾದ ನಾವು ಕಡೆಗಣಿಸುತ್ತೇವೆ. ಯಾವುದೋ ಧರ್ಮ, ದೇಶದ ಸಂಸ್ಕøತಿಗೆ ಮಾರುಹೋಗಿ ಸನಾತನ ಆಚರಣೆಗಳಿಗೆ ಮೂಗು ಮುರಿಯುತ್ತೇವೆ. ಆದರೆ ನೇಪಾಳದ ಪ್ರಸಿದ್ಧ ಚಾರ್ ನಾರಾಯಣ ದೇವಸ್ಥಾನ ಪುನರ್‍ನಿರ್ಮಾಣಕ್ಕೆ ಅಮೆರಿಕ 65 ಲಕ್ಷ ರೂ. ನೀಡಿದೆ. ಸಂಸ್ಕøತಿ ರಕ್ಷಣೆಗೆ ರಾಯಭಾರ ನಿಧಿ ಅಡಿಯಲ್ಲಿ ಅಮೆರಿಕ ರಾಯಭಾರ ಕಚೇರಿಯಿಂದ 65 ಲಕ್ಷ ಕಾಠ್ಮಂಡು ಕಣಿವೆ ಸಂರಕ್ಷಣೆ ಟ್ರಸ್ಟ್ಗೆ ವರ್ಗಾವಣೆಗೊಂಡಿದೆ.

1566ರಲ್ಲಿ ಕಟ್ಟಲಾಗಿದ್ದ ದೇವಸ್ಥಾನ ನೇವಾರಿ ನಿರ್ಮಾಣ ಶೈಲಿಯ ಅಪರೂಪದ ಯಾತ್ರಾ ಸ್ಥಳವೂ ಹೌದು. 2015ರಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪನದಲ್ಲಿ ಚಾರ್ ನಾರಾಯಣ ದೇವಸ್ಥಾನಕ್ಕೆ ಭಾರಿ ಹಾನಿಯಾಗಿತ್ತು. ಸಂಪೂರ್ಣ ಪ್ರಾಂಗಣ ಕುಸಿದು, ಗೋಡೆಗಳೆಲ್ಲ ಬಿರುಕುಬಿಟ್ಟಿದ್ದವು. ಸುಮಾರು 9 ಸಾವಿರ ನೇಪಾಳಿಯರು ಮೃತರಾಗಿದ್ದರು.
Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
January 20, 2026









