ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆಗೆ ಸಂಧಾನ ಮಾತುಕತೆಗೆ ಮಧ್ಯವರ್ತಿಯಾಗಿ ದಿನೇಶ್ವರ ಶರ್ಮಾ : ರಾಜನಾಥ್
Posted On October 24, 2017
ನ್ಯೂಡೆಲ್ಲಿ : ಕಾಶ್ಮೀರ ಕಣಿವೆಯಲ್ಲಿ ಪಾಕ್ ಪ್ರಚೋದಿತ ಉಗ್ರರರಿಗೆ ನೆರವು ನೀಡುತ್ತಾ ಗಲಭೆ ಎಬ್ಬಿಸುತ್ತಿರುವ ಹುರ್ರಿಯತ್ ಮುಖಂಡರೊಂದಿಗೆ ಸಂಧಾನ ಮಾತುಕತೆ ಕೇಂದ್ರ ಸರ್ಕಾರ ಮುಂದಾಗಿದೆ. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಹುರ್ರಿಯತ್ ಮುಖಂಡರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಶರ್ಮಾರನ್ನು ಸಂವಹನಕ್ಕೆ ತಳ್ಳುತ್ತಿದ್ದಾರೆ. ಇದೊಂದು ಭಾರಿ ಆಶ್ಚರ್ಯಕರ ನಡೆಯಾಗಿದ್ದು ನಿರಂತರ ಸಂವಹನದ ಮೂಲಕ ಕಣಿವೆಯಲ್ಲಿ ಶಾಂತಿ ಸ್ಥಾಪನೆ ನಮ್ಮ ಉದ್ದೇಶ ಎಂದು ಸಚಿವ ರಾಜನಾಥ್ ಹೇಳಿದ್ದಾರೆ.
ಯಾವುದೇ ಪ್ರಾದೇಶಿಕ , ರಾಷ್ಟ್ರೀಯ ಪಕ್ಷಗಳೊಂದಿಗೆ ಮಾತುಕತೆಗೆ ಸರ್ಕಾರ ಸಿದ್ದ. ಅದೇ ರೀತಿ ಜಮ್ಮು-ಕಾಶ್ಮೀರ ಯುವಕರ ಒಳಿತಿಗಾಗಿ ಶರ್ಮಾ ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು ಸರ್ಕಾರ ಕೊಟ್ಟಿದೆ. ಅವರು ಯಾವುದೇ ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸಬಹುದು ಎಂದು ಸಿಂಗ್ ಮುಕ್ತ ಅಧಿಕಾರ ನೀಡಿರುವ ಸ್ಪಷ್ಟನೆ ಕೊಟ್ಟರು.
1979ರ ಐಪಿಎಸ್ ಬ್ಯಾಚ್‍ನ ಅಧಿಕಾರಿಯಾಗಿರುವ ಶರ್ಮಾ, 2014 ರಿಂದ 16ರವರೆಗೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು. ನಂತರ ಅವರನ್ನು ಅಸ್ಸಾಂನಲ್ಲಿ ಉಲ್ಫಾ ಉಗ್ರರ ಶರಣಾಗತಿಗೆ ಸಂಧಾನಕಾರರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತ್ತು. ಕೇರಳದಲ್ಲಿ ಐಸಿಸ್ ನೇಮಕಾತಿ, ಉಗ್ರ ಬುರ್ಹನ್ ವನಿ ಎನ್‍ಕೌಂಟರ್‍ನಲ್ಲಿ ಹತ್ಯೆಯಂಥ ಪ್ರಮುಖ ಬೆಳವಣಿಗೆಗಳು ಶರ್ಮಾ ಅವರ ಗುಪ್ತಚರ ದಳ ಮುಖ್ಯಸ್ಥರಾಗುದ್ದಾಗ ನಡೆದಿದ್ದವು.
- Advertisement -
conferencedineshwargandhihuriyatibintelligenceipskashmirkashmirimodindarahulrajnathseparatistssharmasinghterroryouth
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply