” ಪೈಕಾ ಬಿದ್ರೋಹಾ ” ಇನ್ಮುಂದೆ ಭಾರತದ ಮೊದಲ ಸ್ವಾಂತಂತ್ರ್ಯ ಸಂಗ್ರಾಮ
Posted On October 24, 2017
>> ಇದುವರೆಗೂ 1857ರ ಸಿಪಾಯಿ ದಂಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎನ್ನಲಾಗಿತ್ತು
>> ನಾಲ್ಕು ದಶಕಗಳ ಮುನ್ನವೇ ಗಜಪತಿಯ ಸೇನಾ ಭಟರು ಬ್ರಿಟಿಷರ ವಿರುದ್ಧ ಸೆಣೆಸಿದ್ದರು
ಭುವನೇಶ್ವರ : 1817ರ ಪೈಕಾ ದಂಗೆ ಭಾರತದ ಮೊಟ್ಟಮೊದಲು ಸ್ವಾತಂತ್ರ್ಯ ಸಂಗ್ರಾಮ ಎಂದು ಕೇಂದ್ರ ಸರ್ಕಾರ ಘೋಷಿಸಲಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನೇ ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ದೇಶಾದ್ಯಂತ ಇದರ ಪ್ರಚಾರಕ್ಕೆ ಕೇಂದ್ರ ಸರ್ಕಾರ 200 ಕೋಟಿ ರೂ, ಅನುದಾನ ನೀಡಿದೆ.
ಪೈಕಾಗಳು ಯಾರು ?
1817ರಲ್ಲಿ ನಡೆದ ಈ ಕ್ರಾಂತಿಗೆ ಕಾರಣರು ಪೈಕಾಗಳು. ಒಡಿಶಾದ ಗಜಪತಿ ರಾಜನ ಆಡಳಿತದಲ್ಲಿ ಯುದ್ಧದ ಸಂದರ್ಭ ರಾಜನಿಗೆ ಇವರು ನೆರವಾಗುತ್ತಿದ್ದರು. ಬಾಕ್ಸಿ ಜಗಂಢೂ ಬಿದ್ಯಾಧರ ಎಂಬ ನಾಯಕನ ನೇತೃತ್ವದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮೊದಲು ಹೋರಾಟ ನಡೆಸಿತ್ತು ಈ ಗುಂಪು. ಇದನ್ನು ಪೈಕಾ ಬಿದ್ರೋಹ ಅಥವಾ ದಂಗೆ ಎಂದು ಕರೆಯಲಾಗಿತ್ತು.
ಸಿಪಾಯಿ ದಂಗೆಗಿಂತ ನಾಲ್ಕು ದಶಕಗಳ ಮುಂಚೆಯೇ ಪೈಕಾಗಳ ಹೋರಾಟ ನಡೆದಿತ್ತು. ಇದನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು.
- Advertisement -
18181718575057ambedkarbidrohbidrohacentralcongressdangefreedomgandhigovernmentindiajavdekarmovementmuseumnaveenndanehruodishaorissapaikapatnaikrahulrebellionsepoysoniastruggleupa
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply