ಆಧಾರ್ ಜೋಡಣೆ ಗಡುವು ಮಾ.31, 2018ಕ್ಕೆ ವಿಸ್ತರಣೆ
ನವದೆಹಲಿ : ಹೊಸದಾಗಿ ಆಧಾರ್‍ಗೆ ನೋಂದಣಿಯಾಗುವವರಿಗೆ ಅನುಕೂಲವಾಗಲು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಗಡುವನ್ನು ಡಿ.31, 2017ರಿಂದ ಮಾ.31, 2017 ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾಗೆ ಈ ಕುರಿತು ಲಿಖಿತದಲ್ಲಿ ಪ್ರಸ್ತಾವನೆಯನ್ನು ಸರ್ಕಾರ ಸಲ್ಲಿಸಿದೆ. ಜತೆಗೆ ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವು ಕೂಡ ಮಾ.31, 2018ಕ್ಕೆ ವಿಸ್ತರಿಸಲಾಗಿದೆ. ಸುಮಾರುಉ 35 ಕೇಂದ್ರ ಸಚಿವಾಲಯಗಳಲ್ಲಿನ 135 ಯೋಜನೆಗಳ ಫಲಾನುಭವಿಗಳಿಗೆ ಹೆಚ್ಚಿನ ಸಮಯಾವಕಾಶ ಇದರಿಂದಾಗಿ ದೊರೆತಂತಾಗಿದೆ.
ಆಧಾರ್ ಮೂಲಕ ಮರುಪರಿಶೀಲನೆ ಇನ್ನೂ ಸುಲಭವಾಗಿಸಲು ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸುವಂತೆ ಸೂಚಿಸಿದೆ. ಎಸ್‍ಎಂಎಸ್‍ಗಳಿಗೆ ಒಟಿಪಿ ಕಳುಹಿಸಿ ತಕ್ಷಣ ಆನ್‍ಲೈನ್ ಮೂಲಕ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಬಗ್ಗೆ ಪರಿಶೀಲನೆಗೆ ಅನುಕೂಲವಾಗುವಂತೆ ಗ್ರಾಹಕ ಸ್ನೇಹಿ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
Leave A Reply