ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳೇ, ಈ ಮಾತಿನಿಂದ ನಿಮಗೆ ಎಷ್ಟು ನೋವಾಗುತ್ತೋ?

ವಾಷಿಂಗ್ಟನ್: ಪಾಕಿಸ್ತಾನದ ವಿರುದ್ಧ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದರೂ, ಪಾಕ್ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರೂ, ಅಷ್ಟೇ ಏಕೆ, ಭಾರತ ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಗೆದ್ದರೂ ಮುಖ ಗಂಟಿಕ್ಕಿವ, ಪಾಕಿಸ್ತಾನದ ಪರ ಮೃದು ಧೋರಣೆ ಹೊಂದಿರುವ ಭಾರತದಲ್ಲಿರುವ ಕೆಲವರಿಗೆ ಕರಳು ಚುರುಕ್ ಎನ್ನುತ್ತದೆ.
ಹೀಗೆ ಕರಳು ಚುರುಕ್ ಎನಿಸಿಕೊಳ್ಳುವವರಿಗೆ, ಹೊಟ್ಟೆಯಲ್ಲಿ ಬೆಂಕಿ ಹಾಕಿಕೊಳ್ಳುವವರಿಗೆ ಮತ್ತೊಂದು ಕಿಡಿ ಸಜ್ಜಾಗಿದ್ದು, “ಪಾಕಿಸ್ತಾನ ಉತ್ತರ ಕೋರಿಯಾಕ್ಕಿಂತ ಅಪಾಯಕಾರಿ” ಎಂದು ಅಮೆರಿಕದ ಸೆನೆಟ್ ನ ಮಾಜಿ ಅಧ್ಯಕ್ಷ ಲೇರಿ ಪ್ರೆಸ್ಲರ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಅಣ್ವಸ್ತ್ರದ ಮೇಲೆ ಕೇಂದ್ರೀಕೃತ ನಿಯಂತ್ರಣ ಹೊಂದಿಲ್ಲ. ಹಾಗಾಗಿ ಅದು ಉತ್ತರ ಕೋರಿಯಾಕ್ಕಿಂತ ಅಪಾಯಕಾರಿ. ಹಾಗೆ ನೋಡಿದರೆ ಪಾಕಿಸ್ತಾನ ಹಾಗೂ ಉತ್ತರ ಕೋರಿಯಾ ಎರಡೂ ದುಷ್ಟ ರಾಷ್ಟ್ರಗಳು ಎಂದಿದ್ದಾರೆ.
ಪಾಕಿಸ್ತಾನ ಎಂದಿಗೂ ಅಭಿವೃದ್ಧಿಗೆ ಪ್ರಾಧಾನ್ಯ ಕೊಡದೆ ಅಣ್ವಸ್ತ್ರ ಖರೀದಿ ಮಾಡುತ್ತದೆ. ಆದರೆ ಖರೀದಿಸುವ ಆ ಅಣ್ವಸ್ತ್ರದ ಮೇಲೆ ಸರಿಯಾದ ನಿಯಂತ್ರಣ ಹೊಂದಿಲ್ಲ. ಅಮೆರಿಕವೇನೋ ಪಾಕಿಸ್ತಾನಕ್ಕೆ ಅಣ್ವಸ್ತ್ರ ಸರಬರಾಜು ಮಾಡುತ್ತದೆ. ಆದರೆ ದುಷ್ಟ ಪಾಕಿಸ್ತಾನ ಅಮೆರಿಕ ಮೇಲೆ ದಾಳಿ ಮಾಡಲೂ ಹೇಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕಾರಣಗಳಿಂದ ವಿಶ್ವ ಸಮುದಾಯ ಒಗ್ಗೂಡಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕು ಎಂದು ಲೇರಿ ತಿಳಿಸಿದ್ದಾರೆ. ಲೇರಿ ಪ್ರೆಸ್ಲರ್ 1990ರ ಅವಧಿಯಲ್ಲಿ ಅಮೆರಿಕ ಸೆನೆಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
Leave A Reply