ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರಿಂದ ಮನೆಕೆಲಸದವರ ಮೇಲೆ ಹಲ್ಲೆ!
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ಗುರುವಾರ ಸಂಜೆ ತನ್ನ ಫ್ಲಾಟಿನಲ್ಲಿ ಕೆಲಸ ಮಾಡುವ ಮನೆ ಕೆಲಸದ ಹೆಂಗಸು ಕಮಲಾ ಎಂಬುವವರ ಮೇಲೆ ಹಲ್ಲೆ ನಡೆಸಿದ ವಿಷಯ ಬೆಳಕಿಗೆ ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಮಲಾ ಅವರು ಕವಿತಾ ಸನಿಲ್ ತಮ್ಮ ಮೇಲೆ ಹೊಡೆದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕವಿತಾ ಸನಿಲ್ ಹೊಡೆದ ಕಾರಣದ ಬಗ್ಗೆ ಕೇಳಿದಾಗ ಅವರ ಮಗಳಿಗೆ ತಾನು ಹೊಡೆದಿದ್ದೇನೆ ಎಂದು ತಮಗೆ ಅವರು ಹಲ್ಲೆ ಮಾಡಿದ್ದಾರೆ ಎಂದು ಕವಿತಾ ಸನಿಲ್ ಹೇಳುತ್ತಿದ್ದಾರೆ. ಆದರೆ ತಾವು ಯಾವ ಮಗುವನ್ನು ಕೂಡ ಹೊಡಿದಿಲ್ಲ. ಕವಿತಾ ಸನಿಲ್ ಮಂಗಳೂರು ನಗರದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ ತಮಗೆ ಗೊತ್ತಿದೆ ಎಂದು ಹೇಳಿದ ಕಮಲಾ ಅವರು ತಾವು ಮನೆಕೆಲಸದವರಾಗಿದ್ದು ದೊಡ್ಡವರ ಮಕ್ಕಳನ್ನು ಹೊಡೆಯುವಂತಹ ಕೆಲಸ ಮಾಡಲು ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ.
ತಾನು ಮತ್ತು ತನ್ನ ಗಂಡ ಕವಿತಾ ಸನಿಲ್ ಅವರು ವಾಸಿಸುವ ಫ್ಲಾಟಿನಲ್ಲಿ ಕೆಲಸ ಮಾಡುತ್ತಿದ್ದು ತನ್ನ ಗಂಡ ಪುಂಡಲೀಕ ಅದೇ ಫ್ಲಾಟಿನಲ್ಲಿ ಕಾವಲುಗಾರರಾಗಿದ್ದಾರೆ. ಕವಿತಾ ಸನಿಲ್ ಹಲ್ಲೆ ಮಾಡಿದ ನಂತರ ಆ ಫ್ಲಾಟಿನಲ್ಲಿ ವಾಸಿಸಲು ಭಯವಾಗಿದ್ದು ತಮಗೆ ರಕ್ಷಣೆ ಬೇಕಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಭಯಪಡುವ ವಾತಾವರಣ ಇದೆ ಎಂದು ಕಮಲಾ ಹೇಳಿದ್ದಾರೆ. ಪುಂಡಲೀಕ ಅವರು ಮಾತನಾಡಿ ತಾವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನವರಾಗಿದ್ದು ಕಳೆದ ಹತ್ತು ತಿಂಗಳಿಂದ ಸಾಗರ್ ಫುಲೇಮಾರ್ ರೆಸಿಡೆನ್ಸಿ ಯಲ್ಲಿ ಕೆಲಸಕ್ಕೆ ಇದ್ದು ಕೆಲಸ ಸರಿಯಾಗಿ ನಿರ್ವಹಿಸುತ್ತಿದ್ದು ಈ ಪ್ರಕರಣ ಆದ ನಂತರ ಅಲ್ಲಿ ಕೆಲಸ ಮಾಡಲು ಹೆದರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.
Leave A Reply