ಆಧಾರ್ ಕಡ್ಡಾಯಗೊಳಿಸಿದ್ದ ಕೇಂದ್ರದ ಆದೇಶ ಪ್ರಶ್ನಿಸಿದ್ದೇಕೆ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರೀಂ ತರಾಟೆ
ದೆಹಲಿ: ಕೇಂದ್ರ ಸರ್ಕಾರ ಆಧಾರ್ ಕಡ್ಡಾಯಗೊಳಿಸಿದ್ದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೊರ್ಟ್ ತರಾಟೆಗೆ ತೆಗೆದುಕೊಂಡಿದ್ದು, “ನೀವು ಆಧಾರ್ ಕಡ್ಡಾಯ ಆದೇಶ ಪ್ರಶ್ನಿಸಿದ್ದೇಕೆ” ಎಂದು ಸುಪ್ರೀಂ ಪ್ರಶ್ನಿಸಿದೆ.
ಸೋಮವಾರ ಬಂಗಾಳ ಸರ್ಕಾರದ ಅರ್ಜಿ ಪರಿಶೀಲಿಸಿದ ನ್ಯಾಯಾಲಯ, “ಒಕ್ಕೂಟ ವ್ಯವಸ್ಥೆಯಲ್ಲಿ ಸಂಸತ್ತು ಅಂಗೀಕರಿಸಿ ಹೊರಡಿಸಿದ ಆದೇಶವನ್ನು ಒಂದು ರಾಜ್ಯ ಹೇಗೆ ಪ್ರಶ್ನಿಸುತ್ತದೆ” ಎಂದು ಪ್ರಶ್ನಿಸಿದೆ.
ಹೌದು, ಆಧಾರ್ ಕಡ್ಡಾಯ ನಿಯಮದ ಕುರಿತು ಸ್ಪಷ್ಟೀಕರಣ ಬೇಕು ಎಂಬುದು ನಿಜ. ಆದರೆ ರಾಜ್ಯ ಸರ್ಕಾರವೊಂದು ಕೇಂದ್ರದ ಆದೇಶ ಪ್ರಶ್ನಿಸುವುದು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿದೆ.
“ನಾನು ಯಾವುದೇ ಕಾರಣಕ್ಕೂ ನನ್ನ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದಿಲ್ಲ. ಒಂದು ವೇಳೆ ನನ್ನ ಸಿಮ್ ಸ್ಥಗಿತಗೊಳಿಸುವುದಾದರೆ, ಸ್ಥಗಿತಗೊಳಿಸಲಿ” ಎಂದು ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ಈಗ ಕೋರ್ಟ್ ಪ್ರಶ್ನೆಯಿಂದ ಸರ್ಕಾರ ಮುಜುಗರಕ್ಕೀಡಾಗಿದೆ.
ಇಷ್ಟಲ್ಲದೇ ಕೇಂದ್ರ ಸರ್ಕಾರದ ನೋಟು ನಿಷೇಧ ಹಾಗೂ ಜಿಎಸ್ಟಿಯನ್ನೂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು.
Leave A Reply