• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಷ್ಟು ದಿನದೊಳಗೆ ಈ ಕೇಸ್ ಮುಗಿಯಲೇಬೇಕು ಎಂದು ಮೋದಿ ಕಾನೂನು ತರುತ್ತಾರಾ!

Hanumantha Kamath Posted On October 31, 2017


  • Share On Facebook
  • Tweet It

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಧರ್ಮಸ್ಥಳದಲ್ಲಿ ಹೇಳಿದ “ಸಮುದ್ರ ಕಡಲೆಕಳೆ” ಬಗ್ಗೆ ನೋಡಲು ಎಷ್ಟು ಜನ ಗೂಗಲ್ ಗೆ ಹೋಗಿ ಸರ್ಚ್ ಮಾಡಿದ್ದೀರಿ. ಒಂದು ರಾಜ್ಯ ತನ್ನಲ್ಲಿರುವ ಪ್ರಾಕೃತಿಕ ಸಂಪನ್ಮೂಲವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದ್ದನ್ನು ನಾವು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಲಹೆ ಅಥವಾ ಅಭಿಪ್ರಾಯ ಎಲ್ಲಿಂದ ಕೂಡ ಬರಲಿ, ಅದು ಭಾರತೀಯ ಜತಾ ಪಾರ್ಟಿಯಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಕೊನೆಗೆ ಜೆಡಿಎಸ್ ಕೊಟ್ಟರೂ ಅದು ನಮ್ಮ ಒಳ್ಳೆಯದಕ್ಕೆ ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕು. ಮೋದಿ ಹೇಳಿದ್ರು ಎಂದು ಸರಿ ಇಲ್ಲ ಒಂದು ವೇಳೆ ರಾಹುಲ್ ಗಾಂಧಿ ಹೇಳಿದಿದ್ದರೆ ಒಪ್ಪಿಕೊಳ್ಳಬಹುದಿತ್ತು. ನನ್ನದಲ್ಲದ ಪಕ್ಷದವರು ಹೇಳಿದ ಕಾರಣ ಅದನ್ನು ಒಪ್ಪಿದರೆ ಸಣ್ಣವರಾಗುತ್ತಿವೆಯೋ ಎಂದು ಅಂದುಕೊಂಡು ಅದನ್ನು ನಿರ್ಲಕ್ಷ್ಯಿಸಿದರೆ ನಷ್ಟ ನಮಗೆ. ಹಾಗೆ ಆಗದಿರಲಿ, ಮುಗ್ಧ, ಶ್ರಮಜೀವಿ ಮೊಗವೀರ ಜನಾಂಗದವರಿಗೆ ಇದನ್ನು ಮನವರಿಕೆ ಮಾಡುವ ಕೆಲಸವನ್ನು ನಾವು ಮಾಡೋಣ. ಆ ಮೂಲಕ ಒಂದಿಷ್ಟು ಸಮಾಜ ಸುಧಾರಣೆ ಕೆಲಸ ನಮ್ಮಿಂದ ಆಗಲಿ. ಭವಿಷ್ಯದಲ್ಲಿ ಸೀವುಡ್ ಫಾರ್ಮಿಂಗ್ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದಾಗ ಅದನ್ನು ಬಳಸಿಕೊಳ್ಳುವ ಕೆಲಸ ಮತ್ತು ಅದಕ್ಕೆ ಸಿದ್ಧತೆ ನಮ್ಮ ಕಡೆಯಿಂದಲೂ ಆಗಬೇಕಾಗಿರುವುದು ಅಗತ್ಯ.
ಮೋದಿಯವರು ಮೊನ್ನೆ ಧರ್ಮಸ್ಥಳದಲ್ಲಿ ಮಾತನಾಡುವಾಗ ಹಿಂದಿನ ಪ್ರಧಾನ ಮಂತ್ರಿಯೊಬ್ಬರು ಸ್ವತ: ಒಪ್ಪಿಕೊಂಡ ಒಂದು ನಗ್ನಸತ್ಯವನ್ನು ನಮಗೆ ನೆನಪಿಸಿದರು. ಅವರು ರಾಜೀವ್ ಗಾಂಧೀಯವರ ಹೆಸರು ಹೇಳಲಿಲ್ಲವಾದರೂ ರಾಜೀವ್ ಗಾಂಧಿಯವರು ಹಿಂದೊಮ್ಮೆ ಹೇಳಿದ್ದ ಮಾತನ್ನು ಸ್ಮರಿಸಿದರು. ರಾಜೀವ್ ಗಾಂಧಿ ಆವತ್ತು ಹೇಳಿದ “ದೆಹಲಿಯಿಂದ ಒಂದು ಯೋಜನೆಗೆ ಒಂದು ರೂಪಾಯಿ ಬಿಡುಗಡೆಯಾದರೆ ಅದು ಹಳ್ಳಿಗೆ ಮುಟ್ಟುವಾಗ ಹದಿನೈದು ಪೈಸೆ ಮಾತ್ರ ಉಳಿಯುತ್ತದೆ.” ಆದರೆ ಕಳೆದ ಮೂರುವರೆ ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಒಂದು ರೂಪಾಯಿ ಬಿಡುಗಡೆಯಾದರೆ ಅದರ ಸಂಪೂರ್ಣ ಮೊತ್ತ ಅಭಿವೃದ್ಧಿಗೆ ವಿನಿಯೋಗವಾಗುತ್ತಿದೆ ಎಂದು ಮೋದಿ ಮೊನ್ನೆ ಹೇಳಿದ್ದಾರೆ. ಮೋದಿಯವರೇ ನೀವು ಹೇಳಿದ್ದು ಅದೇನೋ ಸರಿ ಇರಬಹುದು. ಹಣವನ್ನು ಪೂರ್ತಿಯಾಗಿ ಅಭಿವೃದ್ದಿಗೆ ಬಳಕೆಯಾಗುವಂತೆ ಅಧಿಕಾರಿಗಳು ಬಳಸುತ್ತಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೆ ನನಗೆ ಅಷ್ಟರಲ್ಲಿಯೇ ತೃಪ್ತಿಯಾಗುವುದಿಲ್ಲ. ನನ್ನ ನಿರೀಕ್ಷೆಗಳು ಬೇರೆ ಕೂಡ ಇವೆ.
ಮೋದಿಯವರು ದೇಶದ ಕಾನೂನಿನಲ್ಲಿ ಬದಲಾವಣೆ ತರಬೇಕು. ಅಂದರೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಇರಬಹುದು ಅಥವಾ ಭಾರತೀಯ ಸಿವಿಲ್ ಪ್ರೊಸಿಡ್ಜರ್ ಕೋಡ್ ಇರಬಹುದು. ಅದರಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಒಂದು ಪ್ರಕರಣ ಇಂತಿಂಷ್ಟೇ ದಿನಗಳೊಳಗೆ ಮುಗಿಯಲೇಬೇಕು ಎಂದು ಕಾನೂನು ತರಬೇಕು. ಮೋದಿ ಬೀದರ್ ನಲ್ಲಿ ಭಾಷಣ ಮಾಡುವಾಗ ಒಂದು ಮಾತು ಹೇಳಿದ್ರು ” ನಾನು ಪ್ರಧಾನಿಯಾದ ತಕ್ಷಣ ಮೊದಲು ಯಾವೆಲ್ಲ ಪ್ರಮುಖ ಕಾಮಗಾರಿಗಳು ಆಮೆಗತಿಯಲ್ಲಿ ಹೋಗುತ್ತಿವೆ ಎನ್ನುವುದರ ಪಟ್ಟಿ ತರಿಸಿ ನೋಡಿದೆ. ಅದರ ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದೆ. ಇಂತಿಂತಹ ಯೋಜನೆ ಎಷ್ಟು ದಿನಗಳೊಳಗೆ ಮುಗಿಯುತ್ತೆ ಎಂದೆ. ಅದಕ್ಕೆ ಅಧಿಕಾರಿಗಳು ಬೇಗ ಮುಗಿಯುತ್ತೆ ಸರ್ ಎಂದರು. ಆದರೆ ನಾನು ಆ ಬೇಗ ಎನ್ನುವುದನ್ನು ದಿನಾಂಕ, ತಿಂಗಳು, ವರ್ಷದೊಂದಿಗೆ ಹೇಳಿ ಎಂದೆ. ಆ ಕಾರಣದಿಂದ ಬೀದರ್-ಗುಲ್ಬಗ್ರಾ ರೈಲ್ವೆ ಟ್ರಾಕ್ ಒಂದೂವರೆ ದಶಕದಿಂದ ಮಲಗಿತ್ತು, ಬಳಿಕ ವೇಗ ಪಡೆದುಕೊಂಡು ಈಗ ಮುಗಿದಿದೆ” ಎಂದರು. ನಾನು ಈಗ ಹೇಳುವುದು ಅದೇ. ಯೋಜನೆ ಮಾತ್ರ ಬೇಗ ಮುಗಿದರೆ ಆಗುವುದಿಲ್ಲ. ಇವತ್ತು ನಮ್ಮ ನ್ಯಾಯಾಲಯದಲ್ಲಿ ಅಸಂಖ್ಯಾತ ಕೇಸುಗಳು ಮುಂದೂಡಲ್ಪಡುತ್ತಾ ಅದರಲ್ಲಿ ಸಿಕ್ಕಿಕೊಂಡಿರುವ ನಾಗರಿಕರು ಒದ್ದಾಡುತ್ತಾ ಇರುತ್ತಾರೆ. ಇದರಿಂದ ಅವರ ಸಮಯ, ಶಕ್ತಿ ವೇಸ್ಟ್, ಅದರೊಂದಿಗೆ ನ್ಯಾಯಾಲಯದ ಸಮಯ, ಶಕ್ತಿ ಟೋಟಲ್ ವೇಸ್ಟ್. ಇದರಿಂದ ಆಗುವಂತದ್ದು ಏನೂ ಇಲ್ಲ. ಆದ್ದರಿಂದ ಮೋದಿಯವರು ಒಂದು ನಿಯಮ ಮಾಡಿ ” ಇಂತಿಂತಹ ಪ್ರಕರಣಗಳು ಇಷ್ಟು ದಿನಗಳೊಳಗೆ ಮುಗಿಯಲೇಬೇಕು” ಎಂದು ಕಾನೂನು ತರಲಿ. ಎಷ್ಟೋ ಪ್ರಕರಣಗಳಲ್ಲಿ ತೀರ್ಪು ಬಂದಿರುವಾಗ ಅದನ್ನು ಅನುಭವಿಸುವವರು ಇರುವುದಿಲ್ಲ. ಕೆಲವರು ಒಳಗೆ ಸುಮ್ಮಸುಮ್ಮನೆ ಕೊಳೆಯುತ್ತಿರುತ್ತಾರೆ. ಇನ್ನೊಂದಿಷ್ಟು ಜನ ಸುಳ್ಳು ಆರೋಪ ಹೊತ್ತುಕೊಂಡು ಹೊರಗೆ ಒದ್ದಾಡುತ್ತಿರುತ್ತಾರೆ. ಅದೇ ಸೆಲೆಬ್ರಿಟಿಗಳಿಗಾದರೆ ಎಂತಹುದೇ ಆರೋಪ ಇರಲಿ, ತಕ್ಷಣ ಬೇಲ್ ಸಿಕ್ಕಿಬಿಡುತ್ತದೆ. ನಂತರ ಕೇಸ್ ಮುಗಿಯುವುದೇ ಇಲ್ಲ. ಕೇಸ್ ಮುಗಿಯುವಾಗ ಅಲ್ಲಿ ನ್ಯಾಯ ಪಡೆದುಕೊಳ್ಳಬೇಕಿರುವವರು ಉಳಿದಿರುವುದಿಲ್ಲ. ಹಾಗೆ ಆಗದ ಹಾಗೆ ಮೋದಿ ಕಾನೂನು ತರುತ್ತಾರಾ!

  • Share On Facebook
  • Tweet It


- Advertisement -
modi law cases


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search