ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‍ಗೆ ಕ್ಲೀನ್‍ಚಿಟ್
ಭೋಪಾಲ್ : ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ಬಹುಕೋಟಿ ಭ್ರಷ್ಟಾಚಾರ ಹಗರಣದಲ್ಲಿ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೆಸರಿಲ್ಲ. ಮಂಡಳಿ ಅಧಿಕಾರಿಗಳು ಸೇರಿದಂತೆ ಸುಮಾರು 490 ಜನರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಹಗರಣದ ಪ್ರಮುಖ ಸಾಕ್ಷಿ ಎನ್ನಲಾದ ಹಾರ್ಡ್‍ಡಿಸ್ಕ್ ನಲ್ಲಿ “ಸಿಎಂ” ಉಲ್ಲೇಖವಿರುವ ಯಾವುದೇ ಫೈಲ್‍ಗಳಿಲ್ಲ. ಜತೆಗೆ ಹಾರ್ಡ್ ಡಿಸ್ಕ್ ಯಾವುದೇ ರೀತಿಯಲ್ಲಿ ಮಾರ್ಪಾಡಿಗೆ ಒಳಗಾಗಿಲ್ಲ ಎಂದು ಸಿಬಿಐ ತಿಳಿಸಿದೆ, ಇದರಿಂದಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಾಡಿದ್ದ ಸಿಎಂ ಹೆಸರಿನಲ್ಲಿ ಫೈಲ್‍ಗಳಲ್ಲಿ ಭ್ರಷ್ಟಾಚಾರದ ವಿವರಗಳಿವೆ ಎಂಬ ಆರೋಪ ಹುಸಿಯಾದಂತಾಗಿದೆ.
ಮಂಡಳಿಯ ಅಧಿಕಾರಿ ಆರೋಪಿ ನಿತಿನ್‍ನಿಂದ ಸಿಬಿಐ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿತ್ತು.
ವ್ಯಾವಸಾಯಿಕ್ ಪರೀಕ್ಷಾ ಮಂಡಳಿ (ವ್ಯಾಪಂ)ನಿಂದ ನಡೆಯುವ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಂದ ಹಣಪಡೆದು ಅಧಿಕಾರಿಗಳು ಅಕ್ರಮವೆಸಗುತ್ತಿದ್ದ ಜಾಲ 2013ರಲ್ಲಿ ಬಯಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಜು.9, 2015ರಿಂದ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು.
Leave A Reply