ಡ್ರೋನ್ ಬಳಕೆಗೆ ಬರಲಿದೆ ಹೊಸ ಕಾನೂನು
Posted On November 2, 2017
ನವದೆಹಲಿ : ಖಾಸಗಿ ಮತ್ತು ವಾಣಿಜ್ಯ ಬಳಕೆ ಉದ್ದೇಶಗಳಿಗಾಗಿ ಭಾರತದಲ್ಲಿ ಡ್ರೋನ್ ತಯಾರಿ, ಮಾರಾಟ ಮತ್ತು ಕಾರ್ಯಚರಣೆಗೆ ಶೀಘ್ರದಲ್ಲಿಯೇ ಹೊಸ ಕಾನೂನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಡ್ರೋನ್‍ಗಳ ತೂಕಕ್ಕೆ ಅನುಗುಣವಾಗಿ ಐದು ವಿಭಾಗಗಳಾಗಿ ವಿಂಗಡಿಸಿ, ಹಾರಾಟ ನಿಯಮಗಳ ಕರಡು ಪ್ರತಿ ಸಿದ್ಧಪಡಿಸಲಾಗಿದೆ.
ಮುಂದಿನ 30 ದಿನಗಳಲ್ಲಿ ಸಚಿವರು ಮತ್ತು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಕಾನೂನು ರಚಿಸುವುದಾಗಿ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಡ್ರೋನ್ ತಯಾರಿಕೆಯ ಉದ್ದಿಮೆ ಮತ್ತು ಭದ್ರತಾ ಹಿತದೃಷ್ಟಿಗಳನ್ನು ಗಮನದಲ್ಲಿರಿಸಿ ವಿದೇಶಗಳಲ್ಲಿನ ನೀತಿಗಳನ್ನು ಅಧ್ಯಯನ ನಡೆಸಲಾಗಿದೆ. ಯಾರ ಖಾಸಗಿತನವನ್ನು ಡ್ರೋನ್ ಬಳಕೆಯಿಂದ ಮತ್ತೊಬ್ಬರು ಕಸಿಯದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದಿದ್ದಾರೆ.
ಎಲ್ಲ ಡ್ರೋನ್‍ಗಳು 200 ಅಡಿಗಿಂತ ಕಡಿಮೆ ಎತ್ತರದಲ್ಲಿ ಮಾತ್ರ ಹಾರಾಡಲು ಅವಕಾಶವಿದೆ. ಕೆಲವು ಸ್ಥಳಗಳನ್ನು ನೋ-ಡ್ರೋನ್ ವಲಯ ಎಂದು ಗುರುತಿಸಿ ಮಾನರಹಿತ ಹಾರಾಟ ವಾಹನ ಚಾಲನೆ ಪರವಾನಗಿ ಅಡಿಯಲ್ಲಿ ನಿಯಂತ್ರಿಸಲು ನಿಯಮ ರೂಪಿಸಲಾಗಿದೆ ಎಂದು ಸಂಕ್ಷಿಪ್ತ ಪರಿಚಯವನ್ನು ಸಚಿವರು ನೀಡಿದ್ದಾರೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply