ಕಮಲ್ ಹಾಸನ್ ಮುಖಕ್ಕೆ ಮಸಿ ಬಳಿದರೆ 25 ಸಾವಿರ ರು. ಬಹುಮಾನ: ಮುಸ್ಲಿಂ ಯುವಕನ ಘೋಷಣೆ
ಬಲಪಂಥೀಯ ಹಿಂದೂಗಳಿಂದ ಉಗ್ರವಾದ ನಡೆಯುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೊಳಗಾಗಿರುವ ತಮಿಳು ನಟ ಕಮಲ್ ಹಾಸನ್ ಮುಖಕ್ಕೆ ಮಸಿ ಬಳಿದರೆ 25 ಸಾವಿರ ರು. ಬಹುಮಾನ ನೀಡುವುದಾಗಿ ಅಲಿಗಢದ ಮುಸ್ಲಿಂ ಸಂಘಟನೆ ಯುವ ಮುಖಂಡನೊಬ್ಬ ಘೋಷಿಸಿದ್ದಾರೆ.
ಕಮಲ್ ಹಾಸನ್ ರಾಷ್ಟ್ರ ವಿರೋಧಿಯಾಗಿದ್ದು, ಇಂಥ ಹೇಳಿಕೆಗಳ ಮೂಲಕ ಹಿಂದೂ-ಮುಸ್ಲಿಮರ ನಡುವೆ ಕಂದಕ, ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅಲಿಗಢ ಮುಸ್ಲಿಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಆಮೀರ್ ರಷೀದ್ ತಿಳಿಸಿದ್ದಾರೆ.
ಭಾರತ ಹಾಗೊಂದು ವೇಳೆ ಹಿಂದೂ ಉಗ್ರವಾದದಿಂದ ನಲುಗುತ್ತಿದ್ದರೆ ಬೇರೆ ಯಾವ ಧರ್ಮದ ಸಮುದಾಯದವರು ಸಹ ಭದ್ರತೆಯಿಂದ ಜೀವಿಸಲು ಆಗುತ್ತಿರಲಿಲ್ಲ. ಆದರೆ ಕಮಲ್ ಅಂಥವರು ಮಾತ್ರ ಕಂದಕ ಸೃಷ್ಟಿಸುತ್ತಾರೆ. ಇಂಥವರ ನಾಲಗೆ ಕತ್ತರಿಸಬೇಕು ಎಂದು ರಷೀದ್ ಗುಡುಗಿದ್ದಾರೆ.
ಕಮಲ್ ಹಾಸನ್ ರಾಜಕೀಯ ಪ್ರವೇಶಕ್ಕಾಗಿ ಇಂಥ ಗಿಮಿಕ್ ಮಾಡುತ್ತಿದ್ದಾರೆ. ಆದರೆ ಹೀಗೆ ಎರಡು ಧರ್ಮಗಳ ನಡುವೆ ಗಲಭೆ ಸೃಷ್ಟಿಸಿ ಏನೂ ಸಾಧಿಸಲಾಗುವುದಿಲ್ಲ. ಹೇಳಿಕೆ ಖಂಡಿಸಿ ಪ್ರತಿಭಟನೆ ರೂಪವಾಗಿ ಅವರ ಮುಖಕ್ಕೆ ಮಸಿ ಬಳಿದರೆ 25 ಸಾವಿರ ರುಪಾಯಿ ಬಹುಮಾನ ನೀಡುವೆ ಎಂದು ತಿಳಿಸಿದ್ದಾರೆ.
Leave A Reply