ಮೋದಿ ಟೀಕಿಸುವ ಭರದಲ್ಲಿ ಕಾಂಗ್ರೆಸ್ಸಿನ ಕೊಳಕು ಮನಸ್ಥಿತಿ ಪ್ರದರ್ಶನ!
ದೆಹಲಿ: ಕಾಂಗ್ರೆಸ್ ವಿರೋಧ ಪಕ್ಷವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸಲಿ, ವೈಫಲ್ಯ ಎತ್ತಿ ತೋರಿಸಲಿ. ಅದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ತನ್ನ ಕೊಳಕು ಮನಸ್ಥಿತಿ ಪ್ರದರ್ಶಿಸಿ ಟೀಕೆಗೊಳಗಾಗಿದೆ.
ನರೇಂದ್ರ ಮೋದಿ ಅವರ ಇಂಗ್ಲೀಷ್ ಟೀಕಿಸಲು ಯುವ ಕಾಂಗ್ರೆಸ್ಸಿನ ಆನ್ ಲೈನ್ ಮ್ಯಾಗಜಿನ್ ಯುವ ದೇಶ್ ಮ್ಯಾಗಜಿನ್ ನಲ್ಲಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಬ್ರಿಟನ್ ಪ್ರಧಾನಿ ಥೆರೇಸಾ ಮೇ ನಿಂತಿರುವ ಫೋಟೋ ಪ್ರಕಟಿಸಿದ್ದು, ಅದರಲ್ಲಿ ಮೋದಿ ಅವರು, “ನೋಡಿ ಭಾರತದಲ್ಲಿ ವಿಪಕ್ಷಗಳು ಹೇಗೆ ಮೇಮೆ ಮಾಡುತ್ತಾರೆ” ಎಂದು ಹೇಳುವಂತೆ ಬಿಂಬಿಸಲಾಗಿದೆ. ಅದಕ್ಕೆ ಟ್ರಂಪ್ ಅವರು ಮೇಮೆ ಅಲ್ಲ ಅದು ಮೀಮ್ ಎಂದು ಹೇಳುತ್ತಿರುವಂತೆ, ನೀವು ಹೋಗಿ ಚಹ ಮಾರಿ ಎಂದು ಥೆರೇಸಾ ಮೇ ಹೇಳುವಂತೆ ಕೀಳುಮಟ್ಟದಲ್ಲಿ ಚಿತ್ರಿಸಲಾಗಿದೆ.
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಕಾಂಗ್ರೆಸ್ಸಿನ ಕೆಟ್ಟ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರಸ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ ಕಾರಣ ಬೆದರಿದ ಕಾಂಗ್ರೆಸ್, ಪೋಸ್ಟ್ ಡಿಲೀಟ್ ಮಾಡಿದ್ದಲ್ಲದೇ, ಕ್ಷಮೆ ಕೇಳಿದೆ.
ಪ್ರಸ್ತುತ ನರೇಂದ್ರ ಮೋದಿ ಅವರಿಗೆ ವಿಶ್ವವೇ ಮಾರುಹೋಗಿದ್ದು, ಅವರ ವರ್ಚಸ್ಸು ವಿಶ್ವವ್ಯಾಪಿ ವ್ಯಾಪಿಸಿದೆ. ಕೆಂಪು ಹಾಸು ಹಾಕಿ ಮೋದಿಯವರನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟಿರುವ ಕಾಂಗ್ರೆಸ್ ಮಾತ್ರ ಇಂಥ ಕೊಳಕು ಮನಸ್ಥಿತಿ ಪ್ರದರ್ಶನದಲ್ಲಿ ನಿರತವಾಗಿದೆ.
Leave A Reply