• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಚಂಪಾ ಅವರೇ ನೀವೇನು ಸಾಹಿತ್ಯ ಸಮ್ಮೇಳನಾಧ್ಯಕ್ಷರೋ, ಕಾಂಗ್ರೆಸ್ ವಕ್ತಾರರೋ?

ನಾಗೇಂದ್ರ ಭಟ್, ಉಡುಪಿ Posted On November 25, 2017
0


0
Shares
  • Share On Facebook
  • Tweet It

ಕುವೆಂಪು…
ಶ್ರೀ ರಾಮಾಯಣ ದರ್ಶನಂ.
ಪೂರ್ಣ ಚಂದ್ರ ತೇಜಸ್ವಿ…
ಪರಿಸರದ ಕತೆ, ಕರ್ವಾಲೋ.
ದ.ರಾ.ಬೇಂದ್ರೆ…
ನಾಕುತಂತಿ…
ಡಾ.ಎಸ್.ಎಲ್.ಭೈರಪ್ಪ…
ಪರ್ವ, ಅನಾವರಣ.
ಡಾ.ಯು.ಆರ್.ಅನಂತಮೂರ್ತಿ…
ಸಂಸ್ಕಾರ…
ಬೀಚಿ…
ತಿಂಮನ ತಲೆ
ಗಿರೀಶ್ ಕಾರ್ನಾಡ್…
ಹೂಂ, ಆಡಾಡ್ತ ಆಯುಷ್ಯ…

ಹತ್ತನೇ ಕ್ಲಾಸಿನ ವಿದ್ಯಾರ್ಥಿಗೆ ಹೀಗೊಂದಿಷ್ಟು ಪ್ರಶ್ನೆ ಕೇಳಿ, ಆತ ಹೀಗೆಯೇ ಉತ್ತರಿಸುತ್ತಾನೆ. ಈ ಮೇಲಿನ ಯಾವುದೇ ಸಾಹಿತಿಗಳ ಸಿದ್ಧಾಂತ, ಭಿನ್ನಾಭಿಪ್ರಾಯ ಏನೇ ಇರಲಿ, ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಏನು ಎಂದರೆ ಯಾರಾದರೂ ಈ ಪ್ರಶ್ನೆಗೆ ಉತ್ತರಿಸುತ್ತಾರೆ. ಆದರೆ ಚಂದ್ರಶೇಖರ್ ಪಾಟೀಲ್ ಅಥವಾ ಚಂಪಾ ಅವರ ಹೆಸರು ಹೇಳುತ್ತಲೇ ಯಾವ ಕೃತಿಯ ನೆನಪಾಗುತ್ತದೆ. ಸಾಹಿತಿ ಎಂದು ಬಿಂಬಿಸಿಕೊಳ್ಳುವ ಅವರು ಇತ್ತೀಚಿಗೆ ಯಾವ ಕೃತಿ ಬರೆದಿದ್ದಾರೆ, ನಿಮಗೆ ಯಾವುದು ನೆನಪಾಗುತ್ತದೆ?

ಆದರೂ ಅವರು ಮೈಸೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು. ಇರಲಿ, ಅವರು ಗೋಕಾಕ್ ಚಳವಳಿಯಲ್ಲಿ ಭಾಗಿ, ಹಲವು ಕೃತಿಗಳ ರಚನೆ, ಕಾಂಗ್ರೆಸ್ ಪರ ಒಲವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಒಪ್ಪಿಕೊಂಡಿರುವ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೂ ಯಾವುದೇ ತಕರಾರಿಲ್ಲ.

ಆದರೆ, ಸಮ್ಮೇಳನಾಧ್ಯಕ್ಷರು ಸಮ್ಮೇಳನದಲ್ಲಿ ಆಡಿದ ಮಾತುಗಳಾದರೂ ಯಾವವು?

ತಾವೊಬ್ಬ ಕನ್ನಡದ ಕಾರ್ಯಕ್ರಮದಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂಬುದನ್ನೇ ಮರೆತ ಚಂದ್ರಶೇಖರ್ ಪಾಟೀಲ್ ಅವರು ಸಮ್ಮೇಳನಕ್ಕೆ ಗೈರು ಹಾಜರಾದ ತನ್ವೀರ್ ಸೇಠ್ ಸರಿಯಿಲ್ಲ. ಹಾಗಾಗಿ ಅವರನ್ನು ಸಂಪುಟದಿಂದ ಕೈ ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಸೂಚಿಸಿದ್ದಾರೆ. ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವ ವಿಷಯದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರಧಾನಿಯವರೇ ನೀವು ಗುಜರಾತಿಗಷ್ಟೇ ಪ್ರಧಾನಿ ಅಲ್ಲ, ದೇಶಕ್ಕೇ ಪ್ರಧಾನಿ.

ಹೇಳಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಸಮ್ಮಳನದ ಅಧ್ಯಕ್ಷರೇ ಹೀಗೆ ಮಾತನಾಡುವುದು ಸರಿಯಾ? ಅವರ ಅಭಿಪ್ರಾಯ ಹೇಳುವುದಕ್ಕೂ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇರುವ ಸಂಬಂಧವೇನು? ಅಷ್ಟಕ್ಕೂ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವ ವಿಚಾರ ಯಾವುದು? ಮೋದಿ ಅವರಿಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಯಾವ ನಂಟು? ಅಷ್ಟಕ್ಕೂ ಚಂದ್ರಶೇಖರ್ ಪಾಟೀಲ್ ಅವರಿಗೆ ಏನಾಗಿದೆ?

ಮೊದಲಿಗೆ ತನ್ವೀರ್ ಸೇಠ್ ಅವರಿಂದಲೇ ವಿಚಾರ ಮಂಡಿಸೋಣ. ತನ್ವೀರ್ ಸೇಠ್ ಯಾವುದೋ ಕಾರಣದಿಂದ ಸಾಹಿತ್ಯ ಸಮ್ಮೇಳನಕ್ಕೆ ಗೈರು ಹಾಜರಾಗಿರಬಹುದು, ಅದು ಅವರದ್ದೇ ತಪ್ಪಾಗಿರಬಹುದು. ಆದರೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಿ ಎಂದು ಹೇಳಲು ಚಂಪಾ ಅವರು ಯಾರು? ಮುಖ್ಯಮಂತ್ರಿಯವರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆ ಮೇಲೆ ಮನವಿ ಮಾಡಲು ಏನು ಸಂಬಂಧ? ಚಂದ್ರಶೇಖರ ಪಾಟೀಲರೇನು ಕಾಂಗ್ರೆಸ್ಸಿನ ಮುಖಂಡರೋ ಅಥವಾ ಹೈಕಮಾಂಡೋ?

ಇನ್ನು ನರೇಂದ್ರ ಮೋದಿ ಅವರ ವಿಷಯಕ್ಕೆ ಬರೋಣ. ನರೇಂದ್ರ ಮೋದಿ ಅವರು ಗುಜರಾತಿಗಷ್ಟೇ ಪ್ರಧಾನಿಯಾದಂತೆ ವರ್ತಿಸಿದ್ದು ಯಾವಾಗ? ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 32 ರುಪಾಯಿ ಪಾವತಿಸುತ್ತಿರುವುದು ಕರ್ನಾಟಕಕ್ಕೋ, ಗುಜರಾತಿಗೋ? ಅಲ್ಲಾ ಸ್ವಾಮಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೋದಿ ಅವರನ್ನು ಟೀಕಿಸುವ ದರ್ದಾದರೂ ಏನು ನಿಮಗೆ?

ಇನ್ನು ಮನ್ ಕೀ ಬಾತ್ ಬಗ್ಗೆ ಮಾತನಾಡಿದ್ದೀರಿ. ಸ್ವಾತಂತ್ರ್ಯ ಬಂದು 70 ವರ್ಷವಾಗುತ್ತ ಬಂದರೂ ಯಾವ ಪ್ರಧಾನಿ ಮೂರು ವರ್ಷ ರೇಡಿಯೋದಲ್ಲಿ ಮಾತನಾಡಿ, ಜನರ ಜತೆ ಸಂಪರ್ಕ ಮಾಡಿದ್ದಾರೆ? ಯಾವ ಪ್ರಧಾನಿ ದೇಶದ ಪ್ರತಿಯೊಂದು ವಿಷಯದ ಬಗ್ಗೆ ಚರ್ಚಿಸಿದ್ದಾರೆ? ಮಾತೇ ಆಡದ ಪ್ರಧಾನಿ ಇದ್ದಾಗ ನೀವೂ ಮಾತೇ ಆಡಲಿಲ್ಲ. ಈಗ ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಬೆಸೆದಾಗ, ಅಕ್ಟೋಬರ್ ನಲ್ಲಿ ಜನ ಖಾದಿ ಖರೀದಿಸಿ ಖಾದಿ ಉದ್ಯಮ ಬೆಳೆಸಿ ಎಂದು ಕರೆ ನೀಡಿದಾಗ ದೇಶದ ಜನ ಖಾದಿ ಖರೀದಿಸಿದರು. ಮಹಿಳಾ ಕ್ರಿಕೆಟಿಗರನ್ನು, ಸಾಧಕರನ್ನು, ತಮಗೆ ಬರೆದ ಪತ್ರಗಳನ್ನು ಓದಿ ಮೋದಿ ಮನ್ ಕೀ ಬಾತ್ ನಲ್ಲಿ ಜನರ ಮನ ಗೆದ್ದಿದ್ದಾರೆ. ಈ ವಿಷಯ ಹೇಗೆ ಉಪಯೋಗಕ್ಕೆ ಬಾರದಾದೀತು ಚಂಪಾ ಅವರೇ? ಮೋದಿ ಅವರ ಮನ್ ಕೀ ಬಾತ್ ಉಪಯೋಗವಾಗಿಲ್ಲ ಎಂದಾದರೆ, ನೀವು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಂತು ಮೋದಿ ಅವರ ವಿರುದ್ಧ ಮಾತನಾಡುವುದರಿಂದ ಏನು ಉಪಯೋಗ? ನೀವೇನು ಸಾಹಿತ್ಯ ಸಮ್ಮೇಳನಾಧ್ಯಕ್ಷರೋ, ಕಾಂಗ್ರೆಸ್ ವಕ್ತಾರರೋ?

ಖಂಡಿತವಾಗಿಯೂ ಚಂಪಾ ಅವರಿಗೆ ಮೋದಿ ಅವರನ್ನು ಟೀಕಿಸುವ, ಸಿದ್ಧಾಂತ ಒಪ್ಪದೇ ಇರುವ ಎಲ್ಲ ಹಕ್ಕುಗಳೂ ಇವೆ. ಆದರೆ ಅದಕ್ಕೊಂದು ವೇದಿಕೆ ಬೇಡವೇ? ಸಮಯ, ಸಂದರ್ಭ ಬೇಡವೇ? ಮುಂದೆ ಸಾವಿರಾರು ಜನ ನೆರೆದರೆ, ವೇದಿಕೆ ಮೇಲೆ ಕೈಗೊಂದು ಮೈಕು ಸಿಕ್ಕರೆ, ಏನು ಬೇಕಾದರೂ ಮಾತನಾಡುತ್ತೀರಾ ಚಂಪಾ ಅವರೇ?

ಚಂದ್ರಶೇಖರ್ ಪಾಟೀಲರೇ, ನೀವು ಸಾಂಸ್ಕೃತಿಕ ರಾಜಧಾನಿಯಲ್ಲಿ ಆಯೋಜಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಇಡೀ ಕನ್ನಡಿಗರ ಪ್ರತಿನಿಧಿಯಾಗಿ ನೀವು ಸಮ್ಮೇಳನದ ವೇದಿಕೆ ಮೇಲೆ ಕುಳಿತಿದ್ದೀರಿ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಅಲ್ಲೇ ಪಕ್ಕದಲ್ಲಿರುವ ಸಿದ್ದರಾಮಯ್ಯ ಅವರಿಗೆ ಮುಚ್ಚದಿರಿ ಎಂದು ತಿವಿಯಿರಿ. ಕನ್ನಡ ಕಡ್ಡಾಯಗೊಳಿಸಿ, ಪ್ರಾಥಮಿಕ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಪ್ರೇರೇಪಿಸಿ, ಬೆಂಗಳೂರಿನ ಎಂಎನ್ ಸಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ನೀವು ಆಗ್ರಹಿಸಿದ್ದರೆ, ಕನ್ನಡದ ಬಗ್ಗೆ ಮಾತನಾಡಿದ್ದರೆ, ನಿಮ್ಮ ಸಿದ್ಧಾಂತ ಏನೇ ಇದ್ದರೂ, ನಿಮ್ಮ ಮಾತುಗಳನ್ನು ಒಪ್ಪುತ್ತಿದ್ದೆವು.

ಆದರೆ, ನೀವೇ ಒಬ್ಬ ರಾಜಕಾರಣಿಯಂತೆ, ಮೋದಿ ವಿರೋಧಿಯಂತೆ, ಕಾಂಗ್ರೆಸ್ಸಿನ ಹೈಕಮಾಂಡಿನಂತೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ವೇದಿಕೆ ಮೇಲೆ ಮಾತನಾಡಿದರೆ ಅದು ಹೇಗೆ ಸರಿಯಾದೀತು? ಸಮ್ಮೇಳನ ಉದ್ದೇಶ ಹೇಗೆ ಈಡೇರೀತು? ಮೊದಲಿನಿಂದಲೂ ಕ್ರಾಂತಿ ಕ್ರಾಂತಿ ಎಂದು ಬಂದು, ಈಗ ವೇದಿಕೆ ಮೇಲೆ ನಿಂತು ಆಕಾಶದ ಕಡೆ ಮುಖ ಮಾಡಿ ವಾಂತಿ ಮಾಡಿದರೆ ಏನಾದೀತು ಎಂಬ ಕನಿಷ್ಠ ಅರಿವೂ ನಿಮಗಿಲ್ಲವೇ? ಹೆಮ್ಮೆಯ ದ.ರಾ.ಬೇಂದ್ರೆ ಅವರಿಗೆ ಜ್ಞಾನಪೀಠ ಬಂದು ಇಡೀ ನಾಡೇ ಸಂಭ್ರಮಪಟ್ಟಾಗ, ನೀವು ಅವರಿಗೆ ಕೊಡಬೇಕಿತ್ತು ಕೊಟ್ಟರು ನಂಜು ಕಾರಿದಾಗಲೇ ನಿಮ್ಮ ಬಗೆಗಿನ ಗೌರವ ಕಡಿಮೆಯಾಗಿತ್ತು. ಈಗ ಮತ್ತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಷಯಾಂತರ ಮಾಡಿ ನಿಮ್ಮ ಮೇಲಿನ ಗೌರವವನ್ನು ನೀವೇ ಕಳೆದುಕೊಂಡಿದ್ದೀರಿ. ಇಂಥ ಬೌದ್ಧಿಕ ವಿಚಲಿತವಾದಕ್ಕೆ ಏನೆನ್ನಬೇಕು? ನೀವೇ ಉತ್ತರಿಸಿ.

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
ನಾಗೇಂದ್ರ ಭಟ್, ಉಡುಪಿ September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
ನಾಗೇಂದ್ರ ಭಟ್, ಉಡುಪಿ September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search