ಕೇಜ್ರಿವಾಲ್ ಎಂಬ ಅಪ್ರಬುದ್ಧ ರಾಜಕಾರಣಿಯ ಅಂತರಗದ ನಕಾರಾತ್ಮಕ ಸಂಗತಿಗಳು ಇಲ್ಲಿವೆ ಕೇಳಿ…
ಹಲವು ದಿನಗಳಿಂದ ದೇಶದ ಜನರಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಲ್ಲಿಗೆ ಹೋಗಿದ್ದಾರೆ. ದೇಶದಲ್ಲಿ ಹಲವು ಮಹತ್ತರ ಘಟನೆಗಳು ನಡೆದರೂ ಏಕೆ ಮಾತಾಡುತ್ತಿಲ್ಲ ಎಂದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಕೇಜ್ರಿವಾಲ್ ಮತ್ತೆ ಹಾಸ್ಯಾಸ್ಪದ ಹೇಳಿಕೆಯನ್ನೇ ನೀಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.
‘ಭಾರತದಲ್ಲಿ 70 ವರ್ಷದಿಂದ ಐಸಿಸ್ ಮಾಡದ ಕಾರ್ಯವನ್ನು ಭಾರತೀಯ ಜನತಾ ಪಾರ್ಟಿ ಮಾಡಿದೆ’ ಎಂದು ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಆದರೆ 70 ವರ್ಷದಿಂದ ಐಸಿಸ್ ಭಾರತದಲ್ಲಿ ಇತ್ತಾ? ಐಸಿಸ್ ಭಾರತದಲ್ಲಿ ನೆಲೆಯೂರಲು ತಿಣುಕಾಡುತ್ತಿದೆ.. ಐಸಿಸ್ ಪಕ್ಕೆಲುಬನ್ನು ಆರಂಭದಲ್ಲೇ ಮುರಿದಿರುವ ಕೇಂದ್ರ ಸರ್ಕಾರದ ಕ್ರಮಗಳು ಈ ಅರವಿಂದ್ ಕೇಜ್ರಿವಾಲ್ ಎಂಬ ಮಹಾಶಯನಿಗೆ ತಿಳಿಯದೇ ಹೋಯಿತೇ? ಎಂಬ ಪ್ರಶ್ನೆಗಳಿ ಕೇಜ್ರಿವಾಲ್ ಆ್ಯಂಡ್ ಗ್ಯಾಂಗ್ ಉತ್ತರಿಸಬೇಕು.
ಐಸಿಸ್ ಉಗ್ರ ಸಂಘಟನೆ ವಿಶ್ವದೆಲ್ಲೆಡೆ ನಿತ್ಯ ಸಾವಿರಾರು ಮುಗ್ದ ಜನರ ಜೀವ ತೆಗೆಯುತ್ತಿದೆ. ಅಂತಹ ಭಯೋತ್ಪಾದಕ ಸಂಘಟನೆಯನ್ನು ಬಿಜೆಪಿಯಂತಹ ರಾಷ್ಟ್ರವಾದಿ ಪಕ್ಷಕ್ಕೆ ಹೋಲಿಸಿರುವುದು ಅರವಿಂದ್ ಕೇಜ್ರಿವಾಲ್ ಅವರ ಬೌದ್ಧಿಕ ದಿವಾಳಿತನವಲ್ಲದೇ, ಮಾನಸಿಕ ಸ್ಥಿಮಿತ ಕಳೆದುಕೊಂಡ ಒಬ್ಬ ಅಪ್ರಬುದ್ಧ ರಾಜಕೀಯ ನಾಯಕನ ಹೇಳಿಕೆ.
ಬಿಜೆಪಿಯನ್ನು ವಿರೋಧಿಸಲು ದೇಶದ ಸಮಸ್ಯೆಗಳು, ದೇಶದಲ್ಲಿನ ಯಾವುದೇ ಉದಾಹರಣೆಗಳು ಕೇಜ್ರಿ ಕಣ್ಣಿಗೆ ಕಾಣಲಿಲ್ಲವೇ?. ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಕೇಂದ್ರ ಸರ್ಕಾರದ ಕೊರಳು ಪಟ್ಟಿಹಿಡಿದು ಕೇಳಿದರೇ ಅದಕ್ಕೆ ಒಂದು ಅರ್ಥವಿರುತ್ತದೆ. ಅದಲ್ಲವನ್ನು ಬಿಟ್ಟು, ವಿಶ್ವಕ್ಕೆ ಕಂಟಕವಾಗಿರುವ ಐಸಿಸ್ ನ ನಡು ಮುರಿಯುತ್ತಿರುವ ಮೋದಿ ಸರ್ಕಾರದ ವಿರುದ್ಧ ವಿನಾಕಾರಣ ಬಾಯಿ ಚಪಲ ತೀರಿಸಿಕೊಳ್ಳಲು ದೇಶದ ಮರ್ಯಾದೆ ತೆಗೆಯುವಂತ ಹೇಳಿಕೆ ನೀಡುತ್ತಿರುವುದು ದುರಂತ.
ಒಂದೆಡೆ ರಾಷ್ಟ್ರವಾದಿಗಳಿಗೆ ಮತ ನೀಡಬೇಡಿ, ರಾಷ್ಟ್ರವಿರೋಧಿಗಳಿಗೆ ಮತ ನೀಡಿ ಎಂದು ಪತ್ರ ಬರೆಯುವ ಚರ್ಚಿನ ಫಾದರ್ ಗಳು ಇನ್ನೊಂದೆಡೆ, ಅಸಹಿಷ್ಣುತೆ ಇದೆ ಎಂದು ವಿಶ್ವ ಸಮುದಾಯದ ಮುಂದೆ ಭಾರತದ ಮಾನ ತೆಗೆಯುವ ಕೊಳಕು ಪಕ್ಷಗಳು. ಇವೆಲ್ಲದ ಸವಾಲುಗಳನ್ನು ಎದುರಿಸಿಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವವೇ ಭಾರತದ ಎದುರು ಮಂಡಿಯೂರುವಂತ ಕಾರ್ಯ ನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಲಯದ ನ್ಯಾಯ ಮೂರ್ತಿಗಳ ಆಯ್ಕೆಯಲ್ಲಾದ ಐತಿಹಾಸಿಕ ಗೆಲುವು, ಕೇಂದ್ರ ಸರ್ಕಾರದ ನೋಟ್ಯಂತರ, ಜಿಎಸ್ ಟಿ ಜಾರಿ ಕುರಿತು ಶ್ಲಾಘನೀಯ ವರದಿಗಳು, ಕಾಶ್ಮೀರದಲ್ಲಿ ಅಂಡು ಸುಟ್ಟುಕೊಂಡು ಕುಳಿತಿರುವ ಅಜಾದಿ ಗ್ಯಾಂಗ್ ಅಷ್ಟೇ ಏಕೆ ದೇಶವನ್ನು 70 ವರ್ಷದಿಂದ ಬಡತನ ಮುಕ್ತ ಭಾರತ ಮಾಡುತ್ತೇವೆ, ಮಾಡುತ್ತೇವೆ ಎನ್ನುತ್ತಲೇ ಬಡತನದಲ್ಲೇ ಬದುಕಿಸಿದ್ದ ಪಕ್ಷಕ್ಕೆ ಪಾಠ ಕಲಿಸಿದ್ದು ಸಣ್ಣ ಸಾಧನೆಯೇ ಹೀಗೆ ಸಾಗುತ್ತದೆ ಸಾಧನೆಗಳ ಪಟ್ಟಿ.
ಅದನ್ನು ಶ್ಲಾಘೀಸುವುದು ಬೇಡ. ಕೇಜ್ರಿವಾಲ್ ಅವರು ತೆಪ್ಪಗಿದ್ದರು ಸಾಕು. ಮಾತನಾಡುವುದೇ ಆದರೆ ಕೆಲವಾದರೂ ಸಕಾರಾತ್ಮಕ ಸಲಹೆ, ಟೀಕೆಗಳನ್ನು ಮಾಡಿ. ಕೆಲಸಕ್ಕೆ ಬಾರದ ಟೀಕೆಗಳನ್ನು ಮಾಡಿ, ನಿಮ್ಮ ರಾಜಕೀಯ ಘನತೆ (ಅದು ಉಳಿದಿದ್ದರೆ)ಯನ್ನಾದರೂ ಉಳಿಸಿಕೊಳ್ಳಿ.
ಹೀಗೆ ನಿತ್ಯ ಎಡಬಿಡಂಗಿ ಹೇಳಿಕೆಗಳನ್ನು ನೀಡುತ್ತಾ ಹೋದರೆ. ಹೊಸ ನಿರೀಕ್ಷೆ ಇಟ್ಟುಕೊಂಡು ಮತ ನೀಡಿದ ಜನರೇ ನಿಮಗೆ ಪೊರಕೆಯಿಂದ ಗುಡಿಸಿದಂತೆ ಹೇಳ ಹೆಸರಿಲ್ಲದಂತೆ ಮನೆಗೆ ಕಳುಹಿಸಿ ಬಿಟ್ಟಾರು ಎಚ್ಚರ..!
ಚಾರುಕೀರ್ತಿ
Leave A Reply