ಅಷ್ಟಕ್ಕೂ ನರೇಂದ್ರ ಮೋದಿ ಅವರೇಕೆ ಇವಾಂಕಾ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಯಾವುದೇ ಮುಂದಾಲೋಚನೆಯಿಲ್ಲದೆ, ದೇಶಕ್ಕೆ ಒಳಿತಾಗದೆ ಇರುವಂಥದ್ದಾದರೇ ಸಣ್ಣ ಕೆಲಸವೂ ಮಾಡುವುದಿಲ್ಲ. ಕಳೆದ ಜೂನ್ ನಲ್ಲಿ ಅಮೆರಿಕಕ್ಕೆ ತೆರಳಿದ್ದ ಮೋದಿ ಅವರು ಇವಾಂಕಾ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು. ಸಾಮಾನ್ಯವಾಗಿ ಯಾವುದೇ ದೇಶದ ಪ್ರಧಾನಿ ಇನ್ನೊಂದು ದೇಶದ ಅಧ್ಯಕ್ಷ ಅಥವಾ ಪ್ರಧಾನಿಯನ್ನು ಆಹ್ವಾನಿಸುವುದು ವಾಡಿಕೆ. ಆದರೆ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾರನ್ನು ಆಹ್ವಾನಿಸಿದ್ದು ವಿಶೇಷ ಹಾಗೂ ಹಲವು ಪ್ರಶ್ನೆ ಸಹ ಮೂಡಿಸಿದ್ದವು. ಆದರೆ ಹೈದರಾಬಾದಿನಲ್ಲಿ ಮೂರು ದಿನ ನಡೆಯುತ್ತಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗ ಸಭೆಗೆ ಇವಾಂಕಾ ಟ್ರಂಪ್ ಬಂದಿದ್ದು ಭಾರತಕ್ಕೆ ಅನುಕೂಲವಾಗುವ ಲಕ್ಷಣ ಗೋಚರಿಸಿವೆ. ಇವಾಂಕಾ ಸಹ ಮೋದಿ ಅವರನ್ನು, ಆಡಳಿತವನ್ನು ಕೊಂಡಾಡಿದ್ದಾರೆ. ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗುವ ಮಾತುಗಳನ್ನಾಡಿದ್ದಾರೆ.
ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಬಿಟ್ಟು, ಇವಾಂಕಾರನ್ನೇ ಕರೆದಿದ್ದೇಕೆ? ಇವಾಂಕಾ ಭಾರತಕ್ಕೆ ಬರಲು ಉತ್ಸಾಹ ತೋರಿದ್ದೇಕೆ? ಜಾಗತಿಕ ಉದ್ಯಮಶೀಲತಾ ಸಮ್ಮೇಳನಕ್ಕೂ, ಇವಾಂಕಾರಿಗೂ ಏನು ಸಂಬಂಧ? ಇದರಿಂದ ಭಾರತಕ್ಕೇನು ಲಾಭ? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ…
-
ಜಾಗತಿಕ ಉದ್ಯಮಶೀಲತಾ ಸಮ್ಮೇಳನ (ಜಿಇಎಸ್) ಸ್ಥಾಪನೆಯಾದ ಬಳಿಕ, ಅಂದರೆ ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾ, ಅದರಲ್ಲೂ ಭಾರತದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಜಗತ್ತಿನ 1500 ಉದ್ಯಮಿಗಳು ಇದರಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ಬಹುತೇಕರು ಅಮೆರಿಕದವರೇ ಇದ್ದಾರೆ. ಹಾಗಾಗಿ ಇವಾಂಕಾ ಟ್ರಂಪ್ ಬಂದರೆ ಉದ್ಯಮ ಬೆಳವಣಿಗೆಗೆ ಅಮೆರಿಕ ಬೆಂಬಲ, ಸಹಕಾರ ಸಿಗುತ್ತದೆ. ಹಾಗಾಗಿಯೇ ಮೋದಿ ಇವಾಂಕಾರನ್ನು ಆಹ್ವಾನಿಸಿದ್ದು.
-
ಅಷ್ಟೇ ಅಲ್ಲ, ಇಡೀ ಸಮ್ಮೇಳನ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಟ್ರಂಪ್ ಅವರಿಗೆ ಇವಾಂಕಾ ಟ್ರಂಪ್ ಭಾರತದ ಸಾಮರ್ಥ್ಯದ ಬಗ್ಗೆ ಹೇಳದೇ ಇರುವುದಿಲ್ಲ. ಅಮೆರಿಕ ಜತೆ ಉತ್ತಮ ಸಂಬಂಧ ವೃದ್ಧಿಸಲು ಇದು ಅನುಕೂಲಕರ.
-
ಮಹಿಳೆಯರು ಮೊದಲು, ಎಲ್ಲರಿಗೂ ಸಮಾನ ಆದ್ಯತೆ ಎಂಬ ಘೋಷವಾಕ್ಯದಂತೆ ಈ ಬಾರಿಯ ಸಮ್ಮೇಳನ ನಡೆಯುತ್ತಿದೆ. ಸುಮಾರು 127 ದೇಶಗಳ ಮಹಿಳಾ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇವಾಂಕಾ ಟ್ರಂಪ್ ಸ್ವತಃ ಉದ್ಯಮಿಯಾಗಿರುವುದರಿಂದ ಭಾರತದ ಮಹಿಳೆಯರಿಗೂ ಸ್ಫೂರ್ತಿಯಾಗಬಲ್ಲರು.
-
ಇವಾಂಕಾ ಟ್ರಂಪ್ ಡೊನಾಲ್ಡ್ ಟ್ರಂಪ್ ಅವರ ಪುತ್ರಿಯಷ್ಟೇ ಅಲ್ಲ, ರಾಜಕೀಯ ಸಲಹೆಗಾರ್ತಿಯೂ ಆಗಿದ್ದಾರೆ. ಈ ಸಮ್ಮೇಳನದಲ್ಲಿ ಮೋದಿ ಇವಾಂಕಾರಿಂದ ಮೆಚ್ಚುಗೆ ಪಡೆದಿದ್ದು, ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದ್ದಾರೆ.
ಈ ಎಲ್ಲ ಅಂಶ ಹಾಗೂ ಮುಂದಾಲೋಚನೆ ಇಟ್ಟುಕೊಂಡೇ ಮೋದಿ ಅವರು ಇವಾಂಕಾ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದರು. ಅದಕ್ಕೆ ಪ್ರತಿಫಲವಾಗಿ ಇವಾಂಕಾ ಟ್ರಂಪ್ ಸಹ ಮೋದಿ ಅವರ ಆಡಳಿತ ಮೆಚ್ಚಿದ್ದಾರೆ. ಮೋದಿ ಇಷ್ಟವಾಗಲು ಇದಕ್ಕಿಂತ ಇನ್ನೇನು ಕಾರಣ ಬೇಕು ಹೇಳಿ.
Leave A Reply