• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪೇಜಾವರ ಶ್ರೀ ಹಿಂದೂಗಳ ಪರ ಮಾತನಾಡಿದ್ದಾರೆ, ಹಾಗಂತ ಅಲ್ಪಸಂಖ್ಯಾತರನ್ನು ವಿರೋಧಿಸಿಲ್ಲ!

Hanumantha Kamath Posted On November 30, 2017
0


0
Shares
  • Share On Facebook
  • Tweet It

ಭಾರತದ ಸಂವಿಧಾನದಲ್ಲಿ ಇಲ್ಲಿಯ ತನಕ ಯಾವುದೇ ತಿದ್ದುಪಡಿ ಆಗಿಯೇ ಇಲ್ವಾ? ಈ ಪ್ರಶ್ನೆಗೆ ಪೇಜಾವರ ಶ್ರೀಗಳನ್ನು ವಿರೋಧಿಸುವವರು ಏನು ಉತ್ತರ ಕೊಡುತ್ತಾರೆ ಎನ್ನುವ ಕುತೂಹಲ ಇದೆ. ಡಾ| ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದು ಮತ್ತು ಆವತ್ತು ಸಂವಿಧಾನವನ್ನು ರಚಿಸಿದ ಸಮಿತಿಯ ಮುಖ್ಯಸ್ಥರಾಗಿದ್ದವರು ಡಾ|ಬಿ.ಆರ್.ಅಂಬೇಡ್ಕರ್ ಎನ್ನುವುದು ನೂರಕ್ಕೆ ನೂರು ನಿಜ. ಎರಡನೇಯ ಪ್ರಶ್ನೆ ಹಾಗಾದರೆ ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಿದ್ದು ಎಂದು ಯಾವುದಾದರೂ ಬುದ್ಧಿಜೀವಿ ಹೇಳುತ್ತಾರಾ ಎನ್ನುವ ಕುತೂಹಲವೂ ನನಗೆ ಇದೆ. ಒಂದು ವೇಳೆ ಅಂಬೇಡ್ಕರ್ ಒಬ್ಬರೇ ಕುಳಿತು ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದು ಮತ್ತು ಆವತ್ತಿನಿಂದ ಇವತ್ತಿನ ತನಕ ಅದರ ಒಂದೇ ಒಂದು ವಾಕ್ಯವನ್ನು ಆಚೀಚೆ ಮಾಡಿಲ್ಲ ಎನ್ನುವುದೇ ಹೌದಾದರೆ ಪೇಜಾವರ ಶ್ರೀಗಳು ಹೇಳಿದ್ದನ್ನು ಅವರ ವಿರೋಧಿಗಳು ವಿರೋಧಿಸಿದರೆ ಆಗ ಯಾರಿಗೂ ಅಭ್ಯಂತರವಿರಲಿಲ್ಲ.
ಆದರೆ ಪೇಜಾವರ ಶ್ರೀಗಳು ಎಲ್ಲಿ ಕೂಡ ಈಗಿರುವ ಸಂವಿಧಾನವನ್ನು ಬದಲಾಯಿಸಿ ಮತ್ತು ಮೀಸಲಾತಿಯನ್ನು ನಿಲ್ಲಿಸಿ ಎಂದು ಹೇಳಿಲ್ಲ. ಅವರು ಹೇಳಿದ್ದು ಈಗಿರುವ ಸಂವಿಧಾನಕ್ಕೆ ಒಂದಿಷ್ಟು ತಿದ್ದುಪಡಿ ತರಬೇಕು. ತಿದ್ದುಪಡಿ ತರುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯವನ್ನು ಬಹುಸಂಖ್ಯಾತರಿಗೂ ವಿಸ್ತರಿಸಬೇಕು. ಇದರಲ್ಲಿ ಏನು ತಪ್ಪಿದೆ ಎನ್ನುವ ಕಾರಣಕ್ಕೆ ಪೇಜಾವರ ಶ್ರೀಗಳ ಫೋಟೊ ಇರುವ ಪೋಸ್ಟರ್ ಅನ್ನು ಒಬ್ಬ ಕಾಲಿನಿಂದ ತುಳಿಯುತ್ತಿದ್ದಾನೆ. ಪೇಜಾವರ ಶ್ರೀಗಳ ಕಾಲು ಮುಟ್ಟಿ ನಮಸ್ಕರಿಸುವುದೇ ಭಾಗ್ಯ, ಹಾಗಿರುವಾಗ ಅವರ ಫೋಟೋಗೆ ಕಾಲಿನಿಂದ ತುಳಿಯುವುದು ಎಂದರೆ ಅದು ಅನೈತಿಕತೆಯ ಪರಮಾವಧಿ. ಬಹುಸಂಖ್ಯಾತರಲ್ಲಿಯೂ ಬಡವರಿದ್ದಾರೆ. ಅಲ್ಪಸಂಖ್ಯಾತರಲ್ಲಿಯೂ ಸಿರಿವಂತರು ಸಾಕಷ್ಟು ಜನರಿದ್ದಾರೆ. ಆದ್ದರಿಂದ ಧರ್ಮದ ಆಧಾರದ ಮೇಲೆ ಸೌಲಭ್ಯ ಕೊಡುವುದಕ್ಕಿಂತ ಬಹುಸಂಖ್ಯಾತರಲ್ಲಿರುವ ಹಿಂದುಳಿದ ವರ್ಗದವರಿಗೂ, ದಲಿತರಿಗೂ ಸೌಲಭ್ಯ ಸಿಗುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಎನ್ನುವುದು ಹೇಗೆ ತಪ್ಪಾಗುತ್ತದೆ. ಆದರೆ ಈ ಧರ್ಮ ಸಂಸದ್ ಅನ್ನು ವಿರೋಧಿಸುವವರಿಗೆ ಹೇಗಾದ್ರೂ ಮಾಡಿ ಆ ಕಾರ್ಯಕ್ರಮದಲ್ಲಿ ಹುಳುಕು ತೆಗೆಯಲೇಬೇಕಿತ್ತು. ಅದಕ್ಕಾಗಿ ಪೇಜಾವರ ಶ್ರೀಗಳು ಏನು ಹೇಳುತ್ತಾರೆ ಎನ್ನುವುದನ್ನು ಅವರು ಕಾಯುತ್ತಲೇ ಇದ್ದರು. ಪೇಜಾವರ ಶ್ರೀಗಳು ಏನು ಹೇಳಿದರೂ ಅದನ್ನು ತಿರುಚಿ ಸುಳ್ಳು ಸುದ್ದಿ ಹಬ್ಬಿಸಲು ಒಂದು ವರ್ಗ ಕಾಯುತ್ತಲೇ ಇತ್ತು.


ಅಂತವರಿಗೆ ಒಂದು ವಿಷಯ ಗ್ಯಾರಂಟಿ ಇತ್ತು. ಮೂರು ದಿನಗಳ ಧರ್ಮ ಸಂಸದ್ ನಲ್ಲಿ ಪೇಜಾವರ ಶ್ರೀಗಳು ಏನಾದರೊಂದು ಹೇಳಿಯೇ ಹೇಳುತ್ತಾರೆ. ಏನೂ ಮಾತನಾಡದೆ ಸುಮ್ಮನೆ ಕೂರುವ ಜಾಯಮಾನ ಅವರದ್ದಲ್ಲ. ಅದರಲ್ಲಿಯೂ 1985 ರ ಬಳಿಕ ಉಡುಪಿಯಲ್ಲಿ ಆಗುತ್ತಿರುವ ಧರ್ಮ ಸಂಸದ್ ಇದು. ನೆರೆದ ಲಕ್ಷೊಪಲಕ್ಷ ಜನರನ್ನು , ಸಂತರನ್ನು ನೋಡಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಹಿಂದೂಗಳ ಪರವಾಗಿ ಏನಾದರೊಂದು ಹೇಳುತ್ತಾರೆ ಎನ್ನುವ ನಿರೀಕ್ಷೆ ಸಹಜವಾಗಿತ್ತು. ಅದರಂತೆ ಶ್ರೀಗಳು ಸಂವಿಧಾನವನ್ನು ತಿದ್ದುಪಡಿ ಮಾಡಿ ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರಿಗೆ ಕೊಡುತ್ತಿರುವ ಸೌಲಭ್ಯ ವಿಸ್ತರಿಸಿ ಎಂದಿದ್ದಾರೆ.
ಆವತ್ತು ಸಂವಿಧಾನ ರಚನೆಯಾಗುವಾಗ ಭಾರತದ ಸ್ಥಿತಿ ಹೇಗಿತ್ತು ಮತ್ತು ಮುಂದಿನ ಐವತ್ತು ವರುಷಗಳಲ್ಲಿ ಭಾರತದ ಆಡಳಿತ, ನೀತಿ, ನಿಯಮಗಳು, ಕಾನೂನು ಹೇಗಿರಬೇಕು ಮತ್ತು ಹೇಗಿದ್ದರೆ ಒಳ್ಳೆಯದು ಎನ್ನುವ ಸಂಕಲ್ಪ ಇಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿತ್ತು. ಆವತ್ತಿನಿಂದ ಇವತ್ತಿನ ತನಕ ಅದೇ ಸಂವಿಧಾನವನ್ನು ನಮ್ಮ ಸಂಸದರು ಅನೇಕ ಬಾರಿ ತಿದ್ದಿ ತೀಡಿದ್ದಾರೆ. ಹಾಗಿರುವಾಗ ಬಹುಸಂಖ್ಯಾತರಲ್ಲಿ ಇರುವ ಬಡವರನ್ನು ಕೂಡ ದೃಷ್ಟಿಯಲ್ಲಿಟ್ಟು ಇನ್ನೊಮ್ಮೆ ತಿದ್ದಿದರೆ ಅದರಿಂದ ಸಮಾಜದ ಕಲ್ಯಾಣವಾಗುತ್ತದೆ ವಿನ: ಬೇರೆ ಏನೂ ತೊಂದರೆ ಇಲ್ಲ.
ಇನ್ನು ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಆ ಕಮಿಟಿಯಲ್ಲಿ ಇದ್ದ ಇಬ್ಬರು ಸದಸ್ಯರು ಮಂಗಳೂರಿನವರು. ಹೇಗೆ ಒಂದು ಕ್ರಿಕೆಟ್ ಅಥವಾ ಯಾವುದೇ ತಂಡದಲ್ಲಿ ಕಪ್ತಾನ ಮಾತ್ರ ಇದ್ದರೆ ಗೆಲುವು ಸಾಧ್ಯವಾಗುವುದಿಲ್ಲವೋ ಹಾಗೆ ಸಂವಿಧಾನ ರಚಿಸುವಾಗ ವಿವಿಧ ಗಣ್ಯರ ಭಾಗವಹಿಸುವಿಕೆಯಿಂದ ಇಂತಹ ಬಲಿಷ್ಟ ಸಂವಿಧಾನ ನಮಗೆ ಸಿಕ್ಕಿದೆ. ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಿದ್ದು ಎಂದು ಹೇಳಿದರೆ ಸ್ವತ: ಅಂಬೇಡ್ಕರ್ ಅವರು ಕೂಡ ಒಪ್ಪುತ್ತಿದ್ದರೋ ಇಲ್ವೋ?


ಇನ್ನು ಆಗ ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದು ಮಹಾತ್ಮ ಗಾಂಧಿ ಎಂದು ಹೇಳಲಾಗುತ್ತದೆ. ಹಾಗಾದರೆ ಗಾಂಧೀಜಿ ಒಬ್ಬರೇ ಕಾಂಗ್ರೆಸ್ಸನ್ನು ಸ್ಥಾಪಿಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಹೇಳಿದರೆ ತಪ್ಪಾಗಲ್ವ? ಜವಾಹರ್ ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯ್ ಪಟೇಲ್, ಅಂಬೇಡ್ಕರ್, ಸರೋಜಿನಿ ನಾಯ್ಡು, ಲಾಲಾ ಲಕಪತ್ ರಾಯ್. ಲಾಲ್ ಬಹುದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೀಗೆ ಸಾವಿರಾರು ನಾಯಕರು, ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದೆಲ್ಲ ಟೀಮ್ ವರ್ಕ್. ಸಂವಿಧಾನ ಕೂಡ ಹಾಗೆಯೇ.
ಪೇಜಾವರ ಶ್ರೀಗಳನ್ನು ಹೇಗಾದರೂ ಮಾಡಿ ಹಣಿಯಬೇಕು ಎಂದು ಕಾಯುತ್ತಿದ್ದವರನ್ನು ಏನೂ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಧಾರ್ಮಿಕವಾಗಿ ಧರ್ಮ ಸಂಸದ್ ನಿಂದ ಮುಸ್ಲಿಮರಿಗೆ ಏನೂ ಹಾನಿಯಾಗಿಲ್ಲ. ಧರ್ಮ ಸಂಸದ್ ಗೆ ಆಗಮಿಸುವವರಿಗೆ ಮುಸ್ಲಿಂ ಮುಖಂಡರೇ ಅಲ್ಲಲ್ಲಿ ಪಾನೀಯದ ವ್ಯವಸ್ಥೆ ಮಾಡಿದ್ದರು. ಇದು ಸೌಹಾರ್ದತೆಯ ಸಂಕೇತವಲ್ಲದೆ ಬೇರೆ ಏನು? ಒಟ್ಟಿನಲ್ಲಿ ರಾಜಕೀಯ ಕನ್ನಡಕ ಹಾಕಿ ನೋಡುವವರಿಗೆ ಮಾತ್ರ ಪೇಜಾವರ ಶ್ರೀಗಳ ಹೇಳಿಕೆ ತಿರುಚುವುದಷ್ಟೇ ಕೆಲಸ.

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search