ಕಾಂಗ್ರೆಸ್ ಗಾಂಧಿ ಕುಟುಂಬದ ಆಸ್ತಿಯೆಂದಾದರೇ ಅಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದಾಯಿತಲ್ಲವೇ?
ಹೌದು.. ರಾಹುಲ್ ಗಾಂಧಿ ರಾಜಕೀಯ ಹಿನ್ನೆಲೆ ಕುಟುಂಬದಿಂದಲೇ ಬಂದಿದ್ದಾರೆ. ಅವರಿಗೆ ಕುಟುಂಬದ ಬಲವೇ ಆಸ್ತಿ. ಅದರಲ್ಲಿ ತಪ್ಪೇನಿದೆ. ಅವರಿಗೆ ಅಧಿಕಾರ ನಡೆಸುವ ಅರ್ಹತೆ ಇದೆ. ಅವರು ಅಧ್ಯಕ್ಷರಾಗಲು ಸಕಲ ರೀತಿಯಲ್ಲೂ ಅರ್ಹರು.
ನವಜೋತ್ ಸಿಂಗ್ ಸಿದ್ದು, ಪಂಜಾಬ್ ಕಾಂಗ್ರೆಸ್ ಸಚಿವ.
ಕಾಂಗ್ರೆಸ್ ಒಂದು ರಾಜಕೀಯ ಪಕ್ಷವೇ ಅಲ್ಲ, ಅದು ಒಂದೇ ಕುಟುಂಬದ ಮಾಲೀಕತ್ವದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ. ಅದರ ಪ್ರಕಾರವೇ ಎಲ್ಲವೂ ನಡೆಯಬೇಕು.
ಮನೀಶ್ ತಿವಾರಿ, ಕಾಂಗ್ರೆಸ್ ಹಿರಿಯ ಮುಖಂಡ
ದೇಶವನ್ನು 70 ವರ್ಷಗಳ ಕಾಲ ಆಳಿದ ಪಕ್ಷ ಒಂದು ಕುಟುಂಬದ ಆಸ್ತಿ ಎಂದು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ ಕಾಂಗ್ರೆಸ್ಸಿಗರು.
ಹಾಗಾದರೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಪಕ್ಷಕ್ಕೆ ನಂಬಿಕೆ ಇಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ ಕೈ ಮುಖಂಡರು. ತಮ್ಮಲ್ಲಿ ಸಾಮರ್ಥ್ಯವಿದ್ದರೂ, ಸಂಘಟನೆಯ ಶಕ್ತಿಯಿದ್ದರೂ ನೆಹರು-ಗಾಂಧಿ ಕುಟುಂಬದ ಅಡಿಯಾಳುಗಳಾಗಿರುವುದು ಕಾಂಗ್ರೆಸ್ ನ ಹಿರಿಯ ಮುಖಂಡರ ದುರಂತ ಮತ್ತು ತಳ ಮಟ್ಟದಲ್ಲಿ ಕಾಂಗ್ರೆಸ್ ಗಾಗಿ ಹೋರಾಡುವ ಕಾರ್ಯಕರ್ತರ ದುರಾದೃಷ್ಟ ಎನ್ನಬಹುದು ಅಷ್ಟೇ.
ದೇಶವನ್ನೇ ಆಳಿದ ಪಕ್ಷದಲ್ಲಿ ತಳಮಟ್ಟದ ಒಬ್ಬ ಕಾರ್ಯಕರ್ತನ ಸಣ್ಣ ಅಭಿಪ್ರಾಯ ಬಿಡಿ, ತಮ್ಮಗೆ ಸ್ವಂತ ಪಕ್ಷ ಕಟ್ಟಿ ಅಧಿಕಾರಕ್ಕೆರುವ ಸಾಮರ್ಥ್ಯ ಇರುವ ಅದೆಷ್ಟು ನಾಯಕರು ರಾಹುಲ್ ಗಾಂಧಿಯಂತ ರಾಜಕೀಯ ಅಪ್ರಬುದ್ಧ ರಾಜಕಾರಣಿ ಎದುರು ನಿಲ್ಲಬೇಕು ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಲ್ಲದೇ, ತಮ್ಮ ಮಾನ, ಮರ್ಯಾದೆ, ಘನತೆಯನ್ನು ಒತ್ತೆಯಿಟಂತೆ ಹೊರತು ಬೇರೆನಿಲ್ಲ.
ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಶಾಹ್ಜಾದ್ ಪೂನಾವಾಲರ ಒಂದು ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ಆಗದೇ, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಕ್ರೂರತನಕ್ಕೆ ಇಳಿದಿರುವುದು ಕಾಂಗ್ರೆಸ್ ಪಕ್ಷದ ನಿರಂಕುಶ ಪ್ರಜಾಪ್ರಭುತ್ವ ಎಂದರೆ ಅತಿಶಯೋಕ್ತಿ ಆಗಲಾರದು.
ಅಷ್ಟಕ್ಕೂ ಶಹ್ಜಾದ್ ಪೂನಾವಾಲಾ ಹೇಳಿದ್ದೇನು
- ಕಾಂಗ್ರೆಸ್ ಗೆ ಅರ್ಹರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಿ.
- ಇತರ ಹಿರಿಯ, ಸಾಮರ್ಥ್ಯ ಇರುವ ನಾಯಕರಿಗೆ ಅಧಿಕಾರ ನೀಡಿ
- ಕೇವಲ ಕುಟುಂಬದ ಹೆಸರಲ್ಲಿ ಅಧ್ಯಕ್ಷ ಸ್ಥಾನ ನೀಡಿದರೆ ಹೇಗೆ
- ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು
- ಕೈ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಇತರ ಮುಖಂಡರಿಗೂ ಅವಕಾಶ ನೀಡಿ
- ಕಾಟಾಚಾರಕ್ಕೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಬೇಡಿ
- ಒಂದು ಕುಟುಂಬಕ್ಕೆ ಎಲ್ಲರೂ ಜೋತು ಬೀಳುವುದು ಸರಿಯಲ್ಲ
ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನು ಏಳು ದಶಕ ಆಳಿದ ಪಕ್ಷದಲ್ಲೇ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ ಎಂದಾದ ಮೇಲೆ ಯಾವ ಕಾರಣಕ್ಕೆ ಆ ಪಕ್ಷಕ್ಕೆ ಜನರು ಬೆಲೆ ನೀಡಬೇಕು ಎಂಬ ಪ್ರಶ್ನೆ ಮೂಡಬೇಕಲ್ಲವೇ?, ಪಕ್ಷಕ್ಕಾಗಿ ಮನೆ ಮನೆ ತಿರುಗಿ ಮತ ಯಾಚಿಸಿದ, ಪಕ್ಷದ ಹೋರಾಟಗಳಲ್ಲಿ ಭಾಗವಹಿಸಿ ಏಟು ತಿಂದ ಕಾರ್ಯಕರ್ತನಿಗೆ ಬೆಲೆ ನೀಡದ ಪಕ್ಷಕ್ಕೆ ಯಾವ ಕಾರಣಕ್ಕೆ ಕಾರ್ಯಕರ್ತರು ದುಡಿಯಬೇಕು. ನಿತ್ಯ ಒಂದೇ ಕುಟುಂಬದವರಿಂದ ಆಳಿಸಿಕೊಳ್ಳಬೇಕೆಂಬ ದರ್ದು ಪ್ರಜಾಪ್ರಭುತ್ವಕ್ಕೆ ಸಲ್ಲದು.
1947 ರಿಂದ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಇದೀಗ ರಾಹುಲ್ ಗಾಂಧಿ. ಹಾಂ ರಾಹುಲ್ ಯಶಸ್ವಿಯಾಗದಿದ್ದರೇ ಪ್ರಿಯಾಂಕಾ ಗಾಂಧಿ(ವಾದ್ರಾ). ಒಂದೇ ಕುಟುಂಬದ ಇಷ್ಟು ಜನರ ಕೈಯಲ್ಲಿ ಆಳಿಸಿಕೊಂಡು ಜನರು ಸಹಿಸಿಕೊಂಡಿದ್ದೇ ಹೆಚ್ಚು. ಆದರೆ ಕಾಂಗ್ರೆಸ್ ನ ಹಿರಿಯ ಮುಖಂಡರಿಗೇನಾಗಿದೆ ಅಸಮರ್ಥರ ಎದುರು ಜೀತದಾಳುವಿನಂತೆ ಕೈಕಟ್ಟಿಕೊಂಡು ನಿಲ್ಲುವುದು ತರವೇ? ಅಥವಾ ನಾವು ಗಾಂಧಿ ಕುಟುಂಬದಿಂದಲೇ ಆಳಿಸಿಕೊಳ್ಳಲಷ್ಟೇ ಅರ್ಹರು ಎಂಬ ಮನೋಭಾವವೇ?
Leave A Reply