ಮೋದಿ ಸರ್ವಾಧಿಕಾರಿ ಎನ್ನುವವರು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಏನೆನ್ನುತ್ತಾರೆ?
ಇದು ಬಿಜೆಪಿಯಲ್ಲಿ ಸಾಧ್ಯ
ಕುಶಭಾಹು ಟಾಕ್ರೆ
ಬಂಗಾರು ಲಕ್ಷ್ಮಣ್
ಕೆ.ಜನ ಕೃಷ್ಣಮೂರ್ತಿ
ವೆಂಕಯ್ಯ ನಾಯ್ಡು
ಎಲ್.ಕೆ.ಆಡ್ವಾಣಿ
ರಾಜನಾಥ್ ಸಿಂಗ್
ನಿತಿನ್ ಗಡ್ಕರಿ
ರಾಜನಾಥ್ ಸಿಂಗ್
ಅಮಿತ್ ಶಾ
ಇದು ಕಾಂಗ್ರೆಸ್ಸಿನಲ್ಲಿ ಮಾತ್ರ ಸಾಧ್ಯ!
ಸೋನಿಯಾ ಗಾಂಧಿ…
ಸೋನಿಯಾ ಗಾಂಧಿ…
ಸೋನಿಯಾ ಗಾಂಧಿ…
ಸೋನಿಯಾ ಗಾಂಧಿ…
ಸೋನಿಯಾ ಗಾಂಧಿ…
ಈಗ ರಾಹುಲ್ ಗಾಂಧಿ…
ಇದು 1998ರಿಂದ ಇದುವರೆಗೆ ದೇಶದ ಎರಡು ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರ ಪಟ್ಟಿ.
ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಿರ್ಧಾರ ಕೈಗೊಂಡರೂ, ಅದರಿಂದ ದೇಶಕ್ಕೆ ಒಳಿತಾಗುತ್ತದೆ ಎಂದು ಗೊತ್ತಿದ್ದರೂ, ಜನರೇ ಅದನ್ನು ಬೆಂಬಲಿಸುತ್ತಾರೆ ಎಂದು ತಿಳಿದಿದ್ದರೂ, ಇದೇ ಕಾಂಗ್ರೆಸ್ಸಿಗರು, ಎಡಬಿಡಂಗಿಗಳು ಮೋದಿ ಒಬ್ಬ ಸರ್ವಾಧಿಕಾರಿ ಎಂದು ಬೊಬ್ಬೆ ಹಾಕುತ್ತಾರೆ. ಏಕಾಭಿಮುಖವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಘೀಳಿಡುತ್ತಾರೆ. ಕಳೆದ 19 ವರ್ಷದಲ್ಲಿ ಒಬ್ಬರೇ ಒಬ್ಬರು, ಅದು ಸೋನಿಯಾ ಗಾಂಧಿ ಮಾತ್ರ ಕಾಂಗ್ರೆಸ್ಸಿನ ಅಧ್ಯಕ್ಷೆಯಾಗಿ ಮೆರಿದ್ದಾರೆ. ಈಗ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಲು ಹೊರಟಿದ್ದಾರೆ. ಇದೇ 19 ವರ್ಷದಲ್ಲಿ 8 ಜನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಅದೂ ಎರಡು ಅವಧಿಗೆ ಆಯ್ಕೆಯಾಗಿದ್ದಾರೆ.
ಆದರೆ, ಕಾಂಗ್ರೆಸ್ಸಿನ ಈ ಸರ್ವಾಧಿಕಾರನ್ನು ಯಾರೂ ಪ್ರಶ್ನಿಸುವುದಿಲ್ಲ. ಕಾಂಗ್ರೆಸ್ ಮಾಡುತ್ತಿರುವುದು ಸರ್ವಾಧಿಕಾರ ಎಂದು ಯಾರೂ ಸೊಲ್ಲೆತ್ತುವುದಿಲ್ಲ. ಬದಲಾಗಿ ರಾಹುಲ್ ಗಾಂಧಿಯೇ ನಮ್ಮ ನಾಯಕ ಎಂದು ಹಲ್ಲು ಗೀಂಜುತ್ತಾರೆ.
ನೀವೇ ಯೋಚಿಸಿ ನೋಡಿ, 19 ವರ್ಷ ಕಾಂಗ್ರೆಸ್ಸಿನ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ತಮ್ಮ ಮಗನನ್ನು ತಂದು ಅಧಿಕಾರಕ್ಕೆ ಕೂರಿಸುತ್ತಿದ್ದಾರೆ. ಅದೂ ಹೇಗೆ, ನಾಮ್ ಕೇ ವಾಸ್ತೆ ನಾಮಪತ್ರ ಸಲ್ಲಿಸಿ, ಯಾರಿಗೂ ಸಲ್ಲಿಸದಂತೆ ನೋಡಿಕೊಂಡು, ರಾಹುಲ್ ಗಾಂಧಿಯವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಯೋಜನೆ ಕಾಂಗ್ರೆಸ್ಸಿನದ್ದು. ಇಂಥಾ ಸರ್ವಾಧಿಕಾರವನ್ನು ಪ್ರಶ್ನಿಸುವ ಧೈರ್ಯ ಒಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲವಲ್ಲ ಎಂಬುದೇ ಬೇಸರದ ಸಂಗತಿ.
ಅಷ್ಟಕ್ಕೂ, ಕಾಂಗ್ರೆಸ್ಸಿನಲ್ಲಿ ಪಕ್ಷದ ಅಧ್ಯಕ್ಷರಾಗುವ ತಾಕತ್ತು, ಯೋಗ್ಯತೆ ಇಲ್ಲವೇ? ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ನಾಯಕರಿಗೆ ಪಕ್ಷ ಆಳುವ ಸಾಮರ್ಥ್ಯವಿಲ್ಲವೇ?
ಹಾಗೆ ನೋಡಿದರೆ, ಕಾಂಗ್ರಸ್ಸಿನಲ್ಲೂ ಕೆಲವು ಮುಖಂಡರಿದ್ದಾರೆ ಹಾಗೂ ಅವರು ಪಕ್ಷವನ್ನು ಆಳಲು ಸಮರ್ಥರಿದ್ದಾರೆ. ಯಾವಾಗಲೂ ಕಾಂಗ್ರೆಸ್ ದಲಿತರ ಪರ, ದಲಿತರ ಪರ ಎನ್ನುತ್ತದೆ. ಆದರೆ, ಜೀವನವಿಡೀ ಕಾಂಗ್ರೆಸ್ಸಿಗೇ ಮುಡಿಪಾಗಿಟ್ಟ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿದ್ದಾರೆ, ಪಿ. ಚಿದಂಬರಂ ಇದ್ದಾರೆ, ಅಲ್ಪಸಂಖ್ಯಾತ ಗುಲಾಂ ನಬಿ ಆಜಾದ್ ಇದ್ದಾರೆ, ಮನಮೋಹನ್ ಸಿಂಗ್ ಇದ್ದಾರೆ. ಆದರೆ ಇವರೆಲ್ಲರನ್ನೂ ಬಿಟ್ಟು, ಹುರುಳಿಲ್ಲದ ಭಾಷಣ ಮಾಡಿ ನಗೆಪಾಟಲಿಗೀಡಾಗುವ ರಾಹುಲ್ ಗಾಂಧಿಯವರೇ ಕಾಂಗ್ರೆಸ್ಸಿನ ಅಧ್ಯಕ್ಷರಾಗಲು ಹೊರಟಿದ್ದಾರೆ.
ಅಷ್ಟಕ್ಕೂ ನೆಹರೂ ಕಾಲದಿಂದಲೂ, ಕಾಂಗ್ರೆಸ್ ಹಾಗೂ ದೇಶವನ್ನು ಆಳುತ್ತಿರುವುದು ಇದೇ ಕುಟುಂಬ ರಾಜಕಾರಣದ ಕುಡಿಗಳೇ. ನೆಹರೂ ಬಳಿಕ ಇಂದಿರಾ ಗಾಂಧಿ, ಇಂದಿರಾ ಬಳಿ ರಾಜೀವ್ ಗಾಂಧಿ, ರಾಜೀವ್ ಬಳಿಕ ಸೋನಿಯಾ ಗಾಂಧಿ (ಪ್ರತ್ಯಕ್ಷವಾಗಿ ಪಕ್ಷವನ್ನು ಹಾಗೂ ಪರೋಕ್ಷವಾಗಿ ದೇಶವನ್ನು), ಈಗ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಲು ಹೊರಟಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಅವರೇ ಪ್ರಧಾನಿಯೂ ಆಗುತ್ತಾರೆ.
ಆದರೆ ಅದೇ ಬಿಜೆಪಿಯಲ್ಲಿ, ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿಯಾಗುತ್ತಾರೆ. ಟೀ ಮಾರುವವರು ಪ್ರಧಾನಿಯಾಗುತ್ತಾರೆ. ಮತ್ತೆ ಮೋದಿ ಸರ್ವಾಧಿಕಾರಿ ಎಂದು ಬೊಬ್ಬೆ ಹಾಕುತ್ತಾರೆ. ಅತ್ತ ರಾಹುಲ್ ಅನಾಯಾಸವಾಗಿ ಗದ್ದುಗೆ ಏರುತ್ತಾರೆ. ಇಂಥ ಬೌದ್ಧಿಕ ದಿವಾಳಿತನಕ್ಕೆ, ಕಾಂಗ್ರೆಸ್ಸಿನ ಸರ್ವಾಧಿಕಾರವನ್ನು ಪ್ರಶ್ನಿಸದೇ ಇರುವ ಹೇಡಿತನಕ್ಕೆ ಏನೆನ್ನಬೇಕು? ಯಾರನ್ನು ದೂರಬೇಕು?
Leave A Reply