ಗುಪ್ತವಾಗಿ ಪಾಕಿಸ್ತಾನಿ ಅಧಿಕಾರಿಗಳನ್ನು ಭೇಟಿಯಾದರೆ ಕಾಂಗ್ರೆಸ್ಸಿಗರು?
ದೆಹಲಿ: ಈ ಕಾಂಗ್ರೆಸ್ ಮುಖಂಡರಿಗೆ ಇದ್ದಕ್ಕಿದ್ದಹಾಗೆ ಏನಾಗುತ್ತದೆಯೋ ಗೊತ್ತಿಲ್ಲ. ವಿಚಿತ್ರವಾಗಿ ವರ್ತಿಸುತ್ತಾರೆ, ಸರ್ಕಾರಕ್ಕೆ ಮಾಹಿತಿ ಇಲ್ಲದೆ ವೈರಿ ರಾಷ್ಟ್ರದವರ ಜತೆ ಮಾತುಕತೆ ನಡೆಸುತ್ತಾರೆ. ಇದಕ್ಕೆ ಡೊಕ್ಲಾಂ ಗಡಿಯಲ್ಲಿ ಭಾರತ-ಚೀನಾ ಬಿಕ್ಕಟ್ಟು ಸೃಷ್ಟಿಯಾದಾಗ, ಇದೇ ರಾಹುಲ್ ಗಾಂಧಿಯವರು ಗುಪ್ತವಾಗಿ ಚೀನಾ ರಾಯಭಾರಿಗಳನ್ನು ಭೇಟಿ ಮಾಡಿದ್ದು ಇದಕ್ಕೆ ನಿದರ್ಶನ.
ಈಗ ಕಾಂಗ್ರೆಸ್ ಮುಖಂಡರು ಗುಜರಾತ್ ಚುನಾವಣೆ ಮಧ್ಯೆಯೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯಾಗಿದ್ದಾರೆ ಎಂದು ರಿಪಬ್ಲಿಕ್ ಟಿವಿ ಶಂಕೆ ವ್ಯಕ್ತಪಡಿಸಿದೆ.
ಡಿ.6ರಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಖುರ್ಷೀದ್ ಕಸೂರಿ ನೇತೃತ್ವದ ಅಧಿಕಾರಿಗಳನ್ನು ದೆಹಲಿಯಲ್ಲಿರುವ ಅಯ್ಯರ್ ನಿವಾಸದಲ್ಲಿ ಸಭೆ ನಡೆಸಿ ಗುಪ್ತವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಭೆ ನಡೆದಿರುವ ಕುರಿತು ಸಿಕ್ಕಿರುವ ಮಾಹಿತಿ ನಿಜವಾಗಿದ್ದು, ಗುಪ್ತಚರ ಇಲಾಖೆ ಮಾಹಿತಿಯಿಂದ ನಿಖರ ಉತ್ತರ ಸಿಗಲಿದೆ ಎಂದು ಬಿಜೆಪಿ ಮುಖಂಡ ಅಜಯ್ ಅಗರ್ವಾಲ್ ಮಾಹಿತಿ ನೀಡಿದ್ದು ಮಾತುಕತೆ ನಡೆಸಲಾಗಿರುವ ಕುರಿತು ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಗುಜರಾತ್ ಚುನಾವಣೆ ಮಧ್ಯೆಯೇ ಕಾಂಗ್ರೆಸ್ ಮುಖಂಡರು ಪಾಕಿಸ್ತಾನಿ ಅಧಿಕಾರಿಗಳ ಜತೆ ಗುಪ್ತವಾಗಿ ಮಾತುಕತೆ ನಡೆಸಿರುವ ಕುರಿತು ಕೂಡಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಒಟ್ಟಿನಲ್ಲಿ ಚುನಾವಣೆ ವೇಳೆ, ಸರ್ಕಾರಕ್ಕೇ ಮಾಹಿತಿ ಇಲ್ಲದೆ ಕಾಂಗ್ರೆಸ್ ಮುಖಂಡರನ್ನು ಪಾಕಿಸ್ತಾನಿ ಅಧಿಕಾರಿ, ಸಚಿವರ ಜತೆ ಮಾತುಕತೆ ನಡೆಸುವ ಅನಿವಾರ್ಯ ಹಾಗೂ ಬಲವಾದ ಕಾರಣಗಳೇನಿದ್ದವು ಎಂಬುದು ನಿಗೂಢವಾಗಿದ್ದು, ಹಲವು ಅನುಮಾನಗಳಿಗೆ ಈಡುಮಾಡಿದೆ.
Leave A Reply