ಮತ್ತದೇ ಹಳೆ ರಾಗ, ಗುಜರಾತ್ ಚುನಾವಣೆಗೆ ಮುಂಚೆಯೇ ಕೆಟ್ಟಿತೇ ಕಾಂಗ್ರೆಸ್ ಮತ ಯಂತ್ರ?
ಗುಜರಾತ್ ಚುನಾವಣೆಗೆ ಶನಿವಾರ ಮೊದಲ ಹಂತದ ಚುನಾವಣೆ ಮುಗಿದಿದೆ. ಚುನಾವಣೆ ಆಯೋಗ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಶೇ.68 ರಷ್ಟು ಮತದಾನವಾಗಿದೆ. ಆದರೆ ಕಾಂಗ್ರೆಸ್ ಮುಖಂಡರು ತಮ್ಮ ಹಳೆ ವರಸೆ ಮುಂದುವರಿಸಿದ್ದಾರೆ. ಮತಯಂತ್ರದಲ್ಲಿ ದೋಷವಿದೆ, ಅದರಲ್ಲಿ ಬ್ಲೂಟೂತ್ ಅಳವಡಿಸಿ ಯಾವುದೇ ಪಕ್ಷಕ್ಕೆ ಮತ ನೀಡಿದರೂ ಕೇವಲ ಬಿಜೆಪಿ ಮತ ಹೋಗುವಂತೆ ಷಡ್ಯಂತ್ರ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಹೀಗೆ ತನ್ನ ‘ಕೈ’ಯಲ್ಲಿ ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ಚುನಾವಣೆಗೆ ಮುಂಚೆಯೇ ಭವಿಷ್ಯ ನುಡಿದಿದೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಮಾಡಿರುವ ಆರೋಪ ಕೈ ಪಾಳಯಕ್ಕೆ ಸೋಲಿನ ಸುಳಿವು ಏನಾದ್ರೂ ದೊರಕಿದೆಯಾ ಎಂಬ ಅನುಮಾನ ಮೂಡಿದೆ.
ಯುದ್ಧಕ್ಕೆ ಮುಂಚೆಯೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದಂತಾಗಿದೆ. ಸದಾ ಬಿಜೆಪಿಯ ಬಾಯಿಗೆ ಸಿಲುಕಿ ಒದ್ದಾಡುವ ಕಾಂಗ್ರೆಸ್ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಮುಖಂಡ ಮಣಿಶಂಕರ ಅಯ್ಯರ ಮೋದಿ ಅವರನ್ನು ನೀಚ ವ್ಯಕ್ತಿ ಎಂದು ಹೀಯಾಳಿಸಿದರೇ, ಇನ್ನೊಬ್ಬ ಮುಖಂಡ ಸಲ್ಮಾನ್ ನಿಜಾಮಿ ಮೋದಿ ತನ್ನ ತಂದೆ ಯಾರು ಎಂದು ಕೇಳಿದ್ದಾನೆ. ಇದು ಕಾಂಗ್ರೆಸ್ ಗೆ ತಿರುಗುಬಾಣವಾಗಿದಲ್ಲದೇ, ಬಿಜೆಪಿ ಕೈಪಡೆಯ ಮೇಲೆ ದಾಳಿ ಮಾಡಲು ಪ್ರಬಲ ಅಸ್ತ್ರ ಒದಗಿದೆ.
ಒಂದೇ ಎರಡೇ ಕಾಂಗ್ರೆಸ್ ಮಾಡಿಕೊಂಡಿರುವ ಎಡವಟ್ಟುಗಳು ಅವೆಲ್ಲವನ್ನು ಬಿಟ್ಟು ಕೂಸು ಹುಟ್ಟುವ ಮುನ್ನವೇ ಗಂಡೋ ಹೆಣ್ಣೋ ಎಂದು ನಿರ್ಧರಿಸಿ, ಜಾರಿಕೊಳ್ಳಲು ಕಾಂಗ್ರೆಸ್ ಮತಯಂತ್ರಗಳ ಮೇಲೆ ದೂರು ನೀಡುತ್ತಿದೆ. ಆದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಿರುವ ಚುನಾವಣೆ ಆಯೋಗ ‘ಮತಯಂತ್ರದಲ್ಲಿ ಗೋಲ್ ಮಾಲ್ ಮಾಡಲಾಗಿದೆ ಎಂಬುದು ಆಧಾರರಹಿತ ಆರೋಪ ಎಂದು ಘೋಷಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಜರಾತ್ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ ಗೆ ಪಕ್ಷ ಮತ್ತು ರಾಹುಲ್ ಅಸ್ತಿತ್ವ ಎರಡು ಮುಖ್ಯ. ರಾಹುಲ್ ಗಾಂಧಿ ಮರ್ಯಾದೆ ಉಳಿಸಬೇಕು ಮತ್ತು ಪಕ್ಷದ ಅಸ್ತಿತ್ವ ಉಳಿಸಬೇಕು. ಇದೆ ಮತಯಂತ್ರಗಳನಿಟ್ಟುಕೊಂಡೇ ಪಂಜಾಬ್ ನಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಗೆ ಇದೀಗ ಅದೆ ಮತಯಂತ್ರ ಮತ್ತು ಆಯೋಗದ ಮೇಲೆ ವಿಶ್ವಾಸ ಉಳಿದಿಲ್ಲವಲ್ಲ. ಈ ಇಬ್ಬಂದಿತನ ಜನರಿಗೆ ಅರ್ಥವಾಗದೇ ಇರದೇ?. ಏನಾದರೂ ಸರಿಯೇ ಎಂದು ಇದೀಗ ಚುನಾವಣೆ ಆಯೋಗದ ಮೇಲೆ ಗೂಭೆ ಕೂರಿಸಲು ಹೋದರೆ ಜನರೇನು ಮೂರ್ಖರೆ?. ಇವರ ಹುಚ್ಚು, ಮೊಂಡು ವಾದಗಳನ್ನು ಒಪ್ಪಲು.
Leave A Reply