1971ರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಈಗ ಸೇಡು ತೀರಿಸಿಕೊಳ್ಳುತ್ತಾನಂತೆ ಈ ಹಫೀಜ್!
ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಪಾಕಿಸ್ತಾನಿ ಉಗ್ರರಿಗೆ ಭಾರತ ಎಷ್ಟು ಪೆಟ್ಟು ನೀಡಿದರೂ, ಪಾಠ ಕಲಿಸಿದರೂ, ಅದು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮತ್ತೆ ಭಾರತದ ವಿರುದ್ಧ ಗುಟುರು ಹಾಕುವ ಚಾಳಿ ಮತ್ತೆ ಸಾಬೀತುಪಡಿಸಿದೆ.
1971ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ) ವನ್ನು ಮುಕ್ತಿಗೊಳಿಸಲು ಪಾಕಿಸ್ತಾನವನ್ನು ಸೋಲಿಸಿದ ದಿನವಾದ ಭಾರತ ಹಾಗೂ ಬಾಂಗ್ಲಾದೇಶಿಯರು ಡಿ.16ರಂದು “ವಿಜಯ ದಿವಸ” ಆಚರಿಸಿದ ಹಿನ್ನೆಲೆಯಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ಮಾತನಾಡಿದ್ದು, 1971ರಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದಕ್ಕಾಗಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ತಿಳಿಸಿದ್ದಾನೆ.
1971ರ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದೆ. ಹಾಗಾಗಿ ನಾವು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹಫೀಜ್ ಸಯೀದ್ ಹೇಳಿದ್ದಾನೆ.
ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ. ಹಫೀಜ್ ಸಯೀದ್ ಗೆ ಪಾಕಿಸ್ತಾನದಲ್ಲೇ ಭದ್ರ ನೆಲೆಯಿಲ್ಲವಾಗಿದ್ದು, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಲ್ಲದೆ ಈತನ ವಿರುದ್ಧ ಅಮೆರಿಕ ಸಹ ತೊಡೆತಟ್ಟಿದ್ದು, ಭಾರತದ ಮೇಲೆ 2008ರಲ್ಲಿ ದಾಳಿ ಮಾಡಿ 166 ಜನರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ, ಸಯೀದ್ ನನ್ನು ಹಿಡಿದುಕೊಟ್ಟರೆ 10 ಮಿಲಿಯನ್ ಡಾಲರ್ ನೀಡುವುದಾಗಿ ಅಮರಿಕ ಘೋಷಿಸಿದೆ. ಅಲ್ಲದೆ ಈತನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಂತೆ ಹಾಗೂ ಗೃಹಬಂಧನದಿಂದ ಮುಕ್ತಿಗೊಳಿಸದಂತೆ ಪಾಕಿಸ್ತಾನಕ್ಕೆ ಅಮೆರಿಕ ಆಗ್ರಹಿಸಿದೆ.
Leave A Reply