ಷಡ್ಯಂತ್ರ ಮೆಟ್ಟಿ ನಿಂತ ಪ್ರಧಾನಿ ಮೋದಿ ಸದಾ ಸುಖಿಗಳು, ನಿಮ್ಮದೆಂಥ ಅತೃಪ್ತ ಆತ್ಮ ಪ್ರಕಾಶ ರೈ?
ನಮಸ್ಕಾರ ಪ್ರಧಾನಿಗಳಿಗೆ ಸಂತೋಷವಾಗಿದ್ದೀರಾ? ಗೆಲುವು ಸಾಧಿಸಿದಕ್ಕೆ ಅಭಿನಂದನೆ. ನಿಮಗೆ ನಿಜಕ್ಕೂ ಸಂತೋಷವಾಗಿದೆಯಾ? 150 ಸ್ಥಾನ ಗೆಲ್ಲುವ ಮಾತನಾಡುತ್ತಿದ್ದೀರಿ. ಈಗ ಏನಾಯಿತು? ನಿಮ್ಮ ವಿಕಾಸ ಸಿದ್ಧಾಂತ ಎಲ್ಲಿ ಹೋಯಿತು?. ಪಾಕಿಸ್ತಾನ, ಧರ್ಮ, ಜಾತಿಗಿಂತಲೂ ಭಾರತದಲ್ಲಿ ದೊಡ್ಡ ಸಮಸ್ಯೆಗಳಿವೆ. ವಿಭಜನೆಯ ರಾಜಕೀಯ ಉಪಯೋಗವಿಲ್ಲ. ಗ್ರಾಮ ಭಾರತದ ಬಡವರು, ರೈತರನ್ನು ಕಡೆಗಣೆಸಿದ್ದೀರಿ. ಅವರ ಕೂಗು ಜೋರಾಗಿದೆ. ನಿಮಗೆ ಕೇಳಿಸುತ್ತಿದೆಯಾ?
ಹೀಗೆ ಬಹುಭಾಷಾ ನಟ ಪ್ರಕಾಶ ರೈ ಎಂಬಾತ ತನ್ನ ಎಡಬಿಡಂಗಿ ಪ್ರಶ್ನೆಯನ್ನು ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ರನಲ್ಲಿ ಕೇಳಿದ್ದಾರೆ. ಆದರೆ ಅವರಿಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಕೋಟ್ಯಂತರ ಭಾವನೆಗಳಿಗೆ ಬೆಲೆ ಕೊಡಬೇಕು ಎಂಬ ಸಣ್ಣ ಪರಿಜ್ಞಾನವೂ ಇಲ್ಲದಿರುವುದು ದುರಂತ. ಒಂದು ಪಕ್ಷ 22 ವರ್ಷಗಳಿಂದ ಆಡಳಿತ ನಡೆಸುತ್ತೇ, ಮತ್ತೇ ಅದೇ ಅಧಿಕಾರಕ್ಕೆ ಬರುತ್ತೇ ಎಂದರೆ ಜನ ಆ ಪಕ್ಷದ ಮೇಲೆ ಇಟ್ಟಿರುವ ಪ್ರೀತಿ ಎಂತಾದ್ದಿರಬೇಕು. ಆ ಪಕ್ಷ ಮಾಡಿರುವ ಕಾರ್ಯಗಳೆಂಥಾದ್ದು ಎಂಬ ಸಣ್ಣ ಪರಿಜ್ಞಾನವೂ ಇಲ್ಲದೇ ಹೋಯಿತೇ ಮಿಸ್ಟರ್ ಪ್ರಕಾಶ್ ರಾಜ್?
ಪ್ರಧಾನಿ ಸೋತರು ಸಂತೋಷವಾಗಿ ಇರುತ್ತಾರೆ. ಯಾಕೆಂದರೆ ಮೋದಿ ಜನರ ಅಭಿವ್ಯಕ್ತಿಗೆ ಬೆಲೆ ನೀಡುತ್ತಾರೆ. ಜನರಿಗೆ ನಾವೇನು ಕೊರತೆ ಮಾಡಿದ್ದೀವಿ ಎಂಬುದನ್ನು ಕಂಡುಕೊಂಡು ಜನರ ಬಳಿ ಹೋಗಲು ಬಯಸುತ್ತಾರೆ. ಆದರೆ ನಿಮ್ಮಂತ ಅತೃಪ್ತ ಆತ್ಮಗಳೇ ನೋಡಿ ಗೆದ್ದರೂ, ಸೋತರೂ ಗಂಟಲೂ ಕಿರುಚಿಕೊಂಡು ಗೊಳೋ ಅಂಥ ರೋಧಿಸುತ್ತೀರಿ.
ಅಷ್ಟಕ್ಕೂ ಬಿಜೆಪಿಗೆ ಸ್ಥಾನಗಳು ಕಡಿಮೆಯಾಗಲು ಅಭಿವೃದ್ಧಿ ವಿಷಯ ಮಾನದಂಡವಾಗಿರಲಿಲ್ಲ. ಸಮಾಜವನ್ನು ಒಡೆದು ಆಳುವ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಎಂಬ ಹಾರಾಟಗಾರರಿಂದ. ಜನರನ್ನು ಜಾತಿಯ ಸಂಕೋಲೆಗೆ ಸಿಲುಕಿಸಿ ಸೆಳೆಯಲು ನಡೆಸಿದ್ದ ಕಸರತ್ತು ಫಲ ನೀಡಿಲ್ಲ. ಜನ ಅಭಿವೃದ್ಧಿಗೆ ಮತ ನೀಡುತ್ತಾರೆ. ನಿಮ್ಮಂತವರು ಮತ್ತು ನೀವು ಬೆಂಬಲಿಸುವ ಸಿದ್ರಾಮ್ ಖಾನ್ ನಂತವರು ಜಾತಿ, ಧರ್ಮಗಳ ಮಧ್ಯೆ ಭೇದ ಹುಟ್ಟಿಸಿ ಮತ ಬುಟ್ಟಿಗೆ ಕೈ ಹಾಕುತ್ತಾರೆ. ಭೇದ ಹುಟ್ಟಿಸಿ ಮತ ಪಡೆಯುವವರಿಗೆ ಜನರು ನೀಡುವ ಉತ್ತರ ಏನು ಅಂತಾ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಸಾಬೀತುಪಡಿಸಿದೆ.
ಕಾಂಗ್ರೆಸ್ ಸೇರಿ ಪ್ರಕಾಶ ರೈ ಬೆಂಬಲಿಸುವ ಎಲ್ಲರೂ ಚರ್ಚ್ ನಿರ್ದೇಶನ, ಹಿಂದುಳಿದ ನಾಯಕರ, ದಲಿತ ಮುಖಂಡನ, ಪಾಟೀದಾರ್ ಹೋರಾಟಗಾರ ಎಲ್ಲರೂ ಶತಃ ಶತ ಪ್ರಯತ್ನಿಸಿದರೂ ಮತ್ತು ಜಿಎಸ್ ಟಿ ಮತ್ತು ನೋಟ್ಯಂತರ ಜಾರಿ ನಂತರವೂ ಜನರು ಮೋದಿಗೆ ಬೆಂಬಲಿಸುತ್ತಾರೆ ಎಂದರೆ ಅದರ ತಾಕತ್ತು ಏನೆಂಬುದನ್ನು ಅರ್ಥಮಾಡಿಕೊಳ್ಳಲೇಬೇಕು.
ಜನರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿ ಹೋರಾಟಕ್ಕಿಳಿದಿ ನಿಮ್ಮ ಬೆಂಬಲಿಗ ಪಕ್ಷಗಳಿಗೂ ಒಮ್ಮೆ ಒಂದು ಪ್ರಶ್ನೆಯನ್ನು ಕೇಳಿ… ಅದೇಕೆ ಮೋದಿ ಒಬ್ಬರೇ ನಿಮ್ಮ ಕಣ್ಣಿಗೆ ಬೀಳುತ್ತಾರೆ. ನಿಮ್ಮ ಕಣ್ಣಿಗೆ ಸ್ವಚ್ಛಂದವಾಗಿ ಉಸಿರಾಡುವ ಕೇರಳದಲ್ಲಿ ಬೀಳುತ್ತಿರುವ ಅಮಾಯಕರ ಹೆಣಗಳ ಬಗ್ಗೆ ನಿಮ್ಮ ಪ್ರಶ್ನೆ ಇಲ್ಲ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಿಮಗೆ ಸಮಸ್ಯೆ ಕಾಣುವುದಿಲ್ಲವೇ?
ಪ್ರಧಾನಿ ನರೇಂದ್ರ ಮೋದಿ ಸದಾ ಸಂತೋಷವಾಗಿರುತ್ತಾರೆ.. ಅವರು ಜನರ ಸಂತೋಷದಲ್ಲಿ ತಮ್ಮ ಸಂತೋಷ ಕಂಡುಕೊಳ್ಳುತ್ತಾರೆ.. ನಿಮ್ಮಂತ ಅತೃಪ್ತ ಆತ್ಮಗಳೇ ನೋಡಿ. ಸದಾ ಗೀಳಿಡುತ್ತವೇ.
Leave A Reply