1997ರಲ್ಲಿ ಗೇಲಿ ಮಾಡಿದ ಕಾಂಗ್ರೆಸ್ ಗೆ ಅಟಲ್ ಜೀ ಹೇಳಿದ ಮಾತು ಸಾಕಾರವಾಗಿದೆ, ಅದೇನು ಗೊತ್ತೆ?
ನನ್ನ ಮಾತನ್ನು ನೆನಪಲ್ಲಿ ಇಟ್ಟುಕೊಳ್ಳಿ. ಇಂದು ನಮಗೆ ಕಡಿಮೆ ಸದಸ್ಯರು ಇದ್ದಾರೆ ಎಂದು ಗೇಲಿ ಮಾಡುತ್ತಿದ್ದೀರಿ. ಆದರೆ ಒಂದು ದಿನ ಬರುತ್ತದೆ. ಪೂರ್ಣ ಭಾರತದಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತದೆ. ಇಡೀ ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೇರುತ್ತದೆ. ಆಗ ಇಡೀ ದೇಶ ನಿಮ್ಮನ್ನು ನೋಡಿ ಗೇಲಿ ಮಾಡುತ್ತದೆ…
ಇದು 1997ರಲ್ಲಿ ಮೋಸದಾಟದಿಂದ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಗೇಲಿ ಮಾಡಿದ್ದಾಗ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕೊಟ್ಟ ಉತ್ತರ. ಅವರು ನೀಡಿದ್ದ ಉತ್ತರ ಇಂದು ಸಾಕಾರವಾಗಿದೆ. ಪುಣ್ಯ ಪುರುಷ ಕನಸು ಕಾಣುತ್ತಾನೆ ಎಂದರೇ ಅದರ ಹಿಂದೆ ಬಹುದೂರದೃಷ್ಟಿಯ ಸ್ಪಷ್ಟನೆ ಕಲ್ಪನೆ ಇರುತ್ತೇ. ಅವನಿಗೆ ಆತನ ಸಂಘಟನೆಯ ಬಲ ಗೊತ್ತಿರುತ್ತೇ. ಅದಕ್ಕೆ ಇಲ್ಲವೇ ಇಂದು ಬಿಜೆಪಿ ರಾಷ್ಟ್ರಾಧ್ಯಂತ ರಣಭೇರಿ ಭಾರಿಸುತ್ತಿದೆ. 70 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ.
ದೇಶದಲ್ಲಿ ಕೇವಲ ಒಂದು ಕೈ ಅಂಕಿಯಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಎರಡಂಕಿ ದಾಟದಷ್ಟು ಸದಸ್ಯರು ಸಂಸತ್ ನಲ್ಲಿ ಇದ್ದಾರೆ. ಈ ಸ್ಥಿತಿಗೆ ಬರಲು ಕಾಂಗ್ರೆಸ್ ಜನರಿಗೆ ಮಾಡಿದ ಮೋಸ, ಭ್ರಷ್ಟಾಚಾರ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಅದಕ್ಕೆ ಅಲ್ಲವೇ ಇಡೀ ದೇಶದಿಂದ ಕಾಂಗ್ರೆಸ್ ಮುಕ್ತ ಎಂದು ಅಶ್ವಮೇದ ಕುದುರೆಯಂತೆ ಬಿಜೆಪಿ ನಿರಂತರ ಗೆಲುವು ಸಾಧಿಸುತ್ತಿದ್ದರೇ. ನೆಲೆ ಉಳಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಡುತ್ತಿದೆ.
ದೇಶದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದರೇ, ಕಾಂಗ್ರೆಸ್ ಕೇವಲ 4 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇನ್ನು 2018ರಲ್ಲಿ ಅಲ್ಲೂ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಗೆ ತನ್ನ ಅಸ್ಮಿತೆಯ ಪ್ರಶ್ನೆ ಕಾಡುತ್ತಿದೆ. ಇನ್ನು ಸದಾ ಕೋಮುವಾದಿ ಪಕ್ಷ ಎಂದು ಗೀಳಿಡುತ್ತಿದ್ದ ಕಾಂಗ್ರೆಸ್ ಗೆ ಜನರು ತಕ್ಕ ಉತ್ತರ ನೀಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ 2002ರಲ್ಲಿ ಗೋದ್ರಾ ಹತ್ಯಾಕಾಂಡದ ನಂತರ ಒಂದು ಭಾರಿಯೂ ಗೋದ್ರಾ ಕ್ಷೇತ್ರದಲ್ಲಿ ವಿಜಯ ಸಾಧಿಸದ ಬಿಜೆಪಿ ಇಂದು ಜಯಭೇರಿ ಸಾಧಿಸಿದೆ. ಅಂದರೆ ಜನರು ಬಿಜೆಪಿ ಕೋಮುವಾದಿ ಪಕ್ಷವಲ್ಲ ಅಭಿವೃದ್ಧಿ ಮಾಡುವ ಪಕ್ಷ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ ಎಂದಾಯಿತು.
ಸುಮ್ಮನೇ ಕೋಮುವಾದಿ ಕೋಮುವಾದಿ ಎಂದು ಬೊಗಳೆ ಬಿಡುತ್ತಾ ಕೂತರೇ, ಅಟಲ್ ಜೀ ಹೇಳಿದಂತೆ ಗೇಲಿ ಮಾಡಿಸಿಕೊಳ್ಳಲೂ ಕೂಡ ಕಾಂಗ್ರೆಸ್ ಉಳಿಯದಂತ ಸ್ಥಿತಿ ಬರುತ್ತದೆ. ವಿನಾಕಾರಣ ಆರೋಪಗಳನ್ನು ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿದರೇ ಒಂದು ಹೊತ್ತಿನ ಗಂಜಿಗಾದರೂ ಅನುಕೂಲವಾದಾತು.
Leave A Reply