ಭೈರಪ್ಪ ಹೇಳಿದ ಕಡೆ ಕಣ್ಣುಮುಚ್ಚಿ ಸಹಿ ಹಾಕುವ ಹಣಕಾಸು ಅಧಿಕಾರಿ ಬೇಕಾಗಿದ್ದಾರೆ!
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಭೈರಪ್ಪನವರ ಗುರು ಕೆ ಎಸ್ ರಂಗಪ್ಪ. ಹಿಂದಿನ ರಾಜ್ಯಪಾಲರಿಗೆ ಲಂಚಕೊಟ್ಟು ಭೈರಪ್ಪನವರನ್ನು ಮಂಗಳೂರು ವಿವಿಗೆ ಕರೆದುಕೊಂಡು ಬಂದ ಬ್ರೋಕರ್ ಕೂಡ ಇವರೇ. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದ ಕೆಎಸ್ ಒಯುವನ್ನು ನೀರಿನಲ್ಲಿ ಮುಳುಗಿಸಿ ಶತಮಾನ ಕಂಡ ರಾಜ್ಯದ ಪ್ರತಿಷ್ಟಿತ ಮೈಸೂರು ವಿವಿಯನ್ನು ಕೂಡ ನುಂಗಿ ನೀರು ಕುಡಿದ, ನೂರಾರು ಕೋಟಿ ದೋಚಿದ, ಮುಂದಿನ ಚುನಾವಣೆಯಲ್ಲಿ ಎಂಎಲ್ ಎ ಆಗಲು ಸಿದ್ಧವಾಗಿ ಕುಳಿತಿರುವ, ಮಾಜಿ ಪ್ರಧಾನಿ ದೇವೆಗೌಡರ ಬೀಗರೆಂಬ ಕಾರಣಕ್ಕೆ ಬದುಕುಳಿದ ಬ್ರಹ್ಮಾಂಡ ಭ್ರಷ್ಟಾಚಾರಿ ಈತ. ಪರಪ್ಪನ ಅಗ್ರಹಾರದಲ್ಲಿ ಎಂದೋ ಇರಬೇಕಾದಷ್ಟು ಹಗರಣಗಳನ್ನೇ ತನ್ನ ಆಭರಣಗಳನ್ನಾಗಿಸಿಕೊಂಡ ಅಸಾಮಿ. ಈ ಬಗ್ಗೆ ಈಗಾಗಲೇ ಎಫ್ ಐ ಆರ್ ಕೂಡ ಆಗಿದೆ. ಇಂತಹ ವ್ಯಕ್ತಿಯ ಶಿಷ್ಯ ಹೇಗಿರಬಹುದು? ನೀವೆ ಊಹಿಸಿ. ಇಬ್ಬರೂ ವಿಜ್ಞಾನ ಪ್ರಾಧ್ಯಾಪಕರಾಗಿದ್ದೂ ಆತ ಕೆಮಿಸ್ಟ್ರಿ. ಇವರು ಭೂಗರ್ಭ ಶಾಸ್ತ್ರ ಪಿಎಚ್ ಡಿ ವಿದ್ಯಾರ್ಥಿಗಳಿಂದ ಪ್ರಬಂಧ ಬರೆಸಿ, ಅವರಿಗೆ ನೇಮಕಾತಿ ಭಾಗ್ಯ ಕರುಣಿಸಿ ಅವರ ಪ್ರತಿಭೆಯಿಂದ ವಿದೇಶದಲ್ಲಿಯೇ ವಿಲಾಸಿ ಜೀವನ ನಡೆಸಿದರು. ಕಂಡಕಂಡವರಿಗೆ ದಂಬಾಲು ಬಿದ್ದು, ಹಣಕೊಟ್ಟು ಪ್ರಶಸ್ತಿ ಸ್ವೀಕರಿಸಿದ ದೋಚಪ್ಪನವರು.
ಜಾತಿರಾಜಕಾರಣ ಮಾಡುವುದರಲ್ಲಿ ಭೈರಪ್ಪನವರು ಎತ್ತಿದ ಕೈ. ಅವರ ನಿಪುಣತೆಯಿರುವುದೇ ಅದರಲ್ಲಿ. ಮಂಗಳೂರಿಗೆ ಬಂದ ಕೂಡಲೇ ಇಲ್ಲಿದ್ದ ಸ್ಥಳೀಯರಿಗೆ ದಂಬಾಲು ಬಿದ್ದು ಒಕ್ಕಲಿಗರ ಸಂಘದಲ್ಲಿ ಸನ್ಮಾನ ಮಾಡಿಸಿಕೊಂಡರು. ವಿವಿಯಲ್ಲಿ ನಾಗಪ್ಪ ಗೌಡ, ಪುರುಷೋತ್ತಮ ಗೌಡ, ಕಿಶೋರ್ ಕುಮಾರ್ ಇವರನ್ನು ಬಿಟ್ಟರೆ ಯಾರನ್ನೂ ಕೂಡ ತನ್ನ ಅಂತರಂಗಕ್ಕೆ ಸೇರಿಸಿಕೊಂಡಿಲ್ಲ. ಅನಂತರ ದಲಿತರನ್ನು ತುಳಿಯಲು ಮತ್ತೊಬ್ಬ ದಲಿತರನ್ನು ಬಳಸಿಕೊಳ್ಳುವುದು, ಬ್ರಾಹ್ಮಣರನ್ನು ತುಳಿಯಲು ಮತ್ತೊಬ್ಬ ಬ್ರಾಹ್ಮಣನನ್ನು ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ತನ್ನ ವಿರೋಧಿ ಎಂದು ಭಾವಿಸಿ ಪಿಎಲ್ ಧರ್ಮರವರನ್ನು ಮುಸುಕಾಗಿಸಲು ಉದಯ ಬಾರ್ಕೂರ್ ರನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿ ನೇಮಿಸಿದರು.
ಅತ್ಯುತ್ತಮ ಹಣಕಾಸು ಅಧಿಕಾರಿ ಎಂಬ ಪ್ರಸಿದ್ಧಿ ಪಡೆದ ಯಡಪಡಿತ್ತಾಯರನ್ನು ಮುಳುಗಿಸಲು ಅದೇ ಸಮುದಾಯದ ಶ್ರೀಪತಿ ಕಲ್ಲೂರಾಯರನ್ನು ನೇಮಿಸಿದರು. ದಾಕ್ಷಿಣ್ಯ ಸ್ವಭಾವವೇ ಭೈರಪ್ಪನವರಿಗೆ ಬೇಕಾದ ಅರ್ಹತೆ. ಕಲ್ಲೂರಾಯರು ಹಣಕಾಸು ಅಧಿಕಾರಿಯಾಗಿ ಸಾಧ್ಯವಾದಷ್ಟು ಸಹಿಹಾಕಿದರು. ಕೊನೆಗೆ ತಾನು ಜೈಲಿಗೆ ಹೋಗಬೇಕಾದ ಪ್ರಮೇಯ ಬರಬಹುದು ಎಂದು ನಯವಾಗಿ ತಿರಸ್ಕರಿಸಿದರು. ತಿರಸ್ಕರಿಸಿದ ಮಾರನೇ ದಿನವೇ ಅವರು ಔಟ್. ಭೈರಪ್ಪ ತೋರಿಸಿದ ಕಡೆ ಸಹಿ ಹಾಕುವ ಯಾವ ಹಣಕಾಸು ಯಾವ ಪ್ರಾಧ್ಯಾಪಕನೂ ಹಣಕಾಸು ಅಧಿಕಾರಿಯಾಗಿ ಸಿಗಲಿಲ್ಲ. ಕೊನೆಗೆ ಪ್ರಾಧ್ಯಾಪಕರು ಯಾರೂ ಒಪ್ಪಿಕೊಳ್ಳದ ಕಾರಣದಿಂದ ಹಂಪನಕಟ್ಟೆ ಕಾಲೇಜಿನಿಂದ ಒಬ್ಬರು ಸಹ ಪ್ರಾಧ್ಯಾಪಕರನ್ನು ಕರೆದು ಹಣಕಾಸು ಅಧಿಕಾರಿಯನ್ನಾಗಿ ನೇಮಿಸಿಕೊಂಡರು. ಸಾಮಾನ್ಯವಾಗಿ ಕಾಮರ್ಸ್ ಅಥವಾ ಎಕನಾಮಿಕ್ಸ್ ಹಿನ್ನಲೆಯವರನ್ನು ಹಣಕಾಸು ಅಧಿಕಾರಿಯನ್ನಾಗಿ ನೇಮಿಸುವುದು ಕ್ರಮ. ಆಗ ಈ ನೇಮಿಸಿದ್ದು ಒಬ್ಬ ಪೊಲಿಟಿಕಲ್ ಸೈನ್ಸ್ ಪ್ರಾಧ್ಯಾಪಕನನನ್ನು. ಕಾರಣ ಅವರು ಜ್ಯೂನಿಯರ್. ಅವರ ದಬಾಯಿಸಿ ಸಹಿ ಹಾಕಿಸಬಹುದು. ಆದರೆ ಈಗಾಗಲೇ ಅಡಿಟ್ ಅಬ್ಜೆಕ್ಷನ್ ಗಳ ಸುರಿಮಳೆನೆ ಇದೆ
Leave A Reply