ಅತ್ಯಾಚಾರ, ಕೇರಳ ಕಾಂಗ್ರೆಸ್ ಶಾಸಕ ಎಂ. ವಿನ್ಸೆಂಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ತಿರುವನಂತಪುರ: ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಕೇರಳದ ಕಾಂಗ್ರೆಸ್ ಶಾಸಕನ ವಿರುದ್ಧ ದೋಷಾರೋಪ ಪಟ್ಟಿಯನ್ನು ಕೋರ್ಟ್ ಗೆ ಪೊಲೀಸರು ಸಲ್ಲಿಸಿದ್ದಾರೆ. ಪ್ರಥಮ ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಕೋವಲಮ್ ಶಾಸಕ ಎಮ್ ವಿನ್ಸೆಂಟ್ ವಿರುದ್ಧ ಇದೀಗ ಕೇರಳ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಅತ್ಯಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ಶಾಸಕ ಎಮ್ ವಿನ್ಸೆಂಟ್ ರನ್ನು ಬಂಧಿಸಲಾಗಿತ್ತು. ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಜೀವ ಬೆದರಿಕೆ ಕರೆ ಮಾಡಿ ಕಿರುಕುಳ ನೀಡಿದ್ದರಿಂದ, ಸಂತ್ರಸ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು.
1,000 ಪುಟದ ದೋಷಾರೋಪ ಪಟ್ಟಿಯನ್ನು ಜ್ಯುಡಿಸಿಯಲ್ ಮ್ಯಾಜಿಸ್ಟ್ರೆಟ್ ಗೆ ಪೊಲೀಸರು ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿ ಕುರಿತು ರಿಟ್ ಅರ್ಜಿ ಸಲ್ಲಿಸಲು ಜನವರಿ 15ರವರೆಗೆ ಶಾಸಕ ಎಂ. ವಿನ್ಸೆಂಟ್ ಅವರಿಗೆ ಕೋರ್ಟ್ ಅವಕಾಶ ನೀಡಿದೆ. ಇಲ್ಲದಿದ್ದರೇ ಆರೋಪಗಳು ನಿಜ ಎಂದು ಸಾಬೀತಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಶಾಸಕರು ನನಗೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಇದರಿಂದ ಬೇಸತ್ತು ಮಹಿಳೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು. ಆದ್ದರಿಂದ ಶಾಸಕ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಜುಲೈನಲ್ಲಿ ದೂರು ದಾಖಲಾಗಿತ್ತು.
ಜುಲೈ 19ರಂದು ಮಹಿಳೆ ಆತ್ಮಹತ್ಯೆ ಪ್ರಯತ್ನಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಪತಿಯೇ ಶಾಸಕರ ವಿರುದ್ಧ ದೂರು ನೀಡಿದ್ದಾರೆ. ಇದರಿಂದ ಶಾಸಕ ಮಹಿಳೆಗೆ ಕರೆ ಮಾಡಿ, ಬೆದರಿಕೆ ಒಡ್ಡಿದಲ್ಲದೇ, ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಶಾಸಕರು ಮಹಿಳೆಗೆ ಸುಮಾರು 900 ಕರೆಗಳನ್ನು ಮಾಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
Leave A Reply