• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಒಂದು ಊಟಕ್ಕೆ 10 ಲಕ್ಷ ಖರ್ಚು ಮಾಡುವ ಸಿದ್ದರಾಮಯ್ಯ ಅವರೇ ಈಗೆಲ್ಲಿ ಹೋಯಿತು ನಿಮ್ಮ ಸಮಾಜವಾದ..?

ವಿಜಯ್ ಪ್ರಕಾಶ್, ಮೈಸೂರು Posted On December 26, 2017


  • Share On Facebook
  • Tweet It

ಬಡವರು ಬಂದು, ಸಮಾಜವಾದಿ, ಸರಳ ಜೀವಿ ಎಂದು ಸದಾ ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವುದು ಒಂದು ತಿನ್ನುವುದು ಒಂದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯಮಂತ್ರಿಯವರ ಜೀವನ ಶೈಲಿಯೇ ಸಾಕ್ಷಿಯಾಗಿ ನಿಲ್ಲುತ್ತದೆ. ವರ್ಷದ ಹಿಂದೆ ಬೃಹತ್ ಮೊತ್ತ ವಾಚ್ ಕಟ್ಟಿಕೊಂಡು ಮೆರೆದಾಡಿದ ಸಿಎಂ ಸಿದ್ದರಾಮಯ್ಯ ಆ ಪ್ರಕರಣಕ್ಕೊಂದು ಕ್ಲೀನ್ ಚೀಟ್ ಕೊಡಿಸಿ ಸುಮ್ಮನಾಗಿದ್ದರು.

ಸಿದ್ದರಾಮಯ್ಯ ಅವರ ಜೀವನ ಶೈಲಿಯಿಂದಲೇ ಅವರ ಮಾತಿಗೂ ಕೃತಿಗೂ ವ್ಯತ್ಯಾಸವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕೋಟ್ಯಂತರ ಜನರ ಪ್ರತಿನಿಧಿಯಾಗಿ, ರಾಜ್ಯದ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವಾಗ ಸಿಎಂ ಸಿದ್ದರಾಮಯ್ಯ ಅವರು ಒಂದು ಊಟಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಎಂದರೇ ಅದೆಂಥಾ ದುರುಳತನವಿರಬೇಕು, ಅದೆಂಥಾ ಭೂರಿ ಭೋಜನವಿರಬೇಕು ಎಂಬುದು ಯೋಚಿಸಬೇಕಾದದ್ದೆ.

ಬಡವರಿಗೆ ಅನ್ನಭಾಗ್ಯ ನೀಡುತ್ತೇನೆ ಎಂದು ಹೇಳಿ ಅದನ್ನು ಸರಿಯಾಗಿ ಜಾರಿ ಮಾಡದೆ, ಅದರಲ್ಲೂ ಕಳಪೆ ಮಟ್ಟದ ಆಹಾರ ವಿತರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಆಡಳಿತ ನಡೆಸುವವರಿಗೊಂದು, ಜನರಿಗೊಂದು ನೀತಿ ಎಂಬಂತೆ ವರ್ತಿಸುತ್ತಿರುವುದು ದುರಂತ.

ನವ ಕರ್ನಾಟಕ ನಿರ್ಮಾಣ ಯಾತ್ರೆ ವೇಳೆ ಕಲಬುರಗಿಯ ಐವಾನ್ ಶಾ ಹಿ ಅತಿಥಿ ಗೃಹದಲ್ಲಿ 10 ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಊಟ ಮಾಡಿದ್ದಾರೆ ಎಂದರೇ ಎಂಥವರಿಗೂ ಅಚ್ಚರಿ ಮತ್ತು ಸಿದ್ದರಾಮಯ್ಯ ಅವರು ಸದಾ ಹೇಳು ಸಮಾಜವಾದಿ ಸಿದ್ಧಾಂತ, ಬಡತನದಿಂದ ಬಂದವನು ಎಂಬ ಹೇಳಿಕೆಗಳು ಕೇವಲ ನಾಟಕೀಯ ಎಂದಾಯಿತಲ್ಲವೇ?

ಡಿಸೆಂಬರ್ 16 ರಂದು ರಾತ್ರಿ ಸಿಎಂ ಭೋಜನ ಕೂಟಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬೆಳ್ಳಿ ತಟ್ಟೆಯಲ್ಲಿ ಭೋಜನ ವ್ಯವಸ್ಥೆ ಮಾಡಿದ್ದಾಗಿ ಬಿಜೆಪಿ ಮುಖಂಡ ರಾಜಕುಮಾರ್ ಪಾಟೀಲ್ ಆರೋಪಿಸಿದ್ದಾರೆ. ಈ ಆರೋಪ ಇದೀಗ ರಾಜ್ಯದ ಜನರಲ್ಲಿ ಹೊಸ ಅನುಮಾನ ಸೃಷ್ಟಿಸಿದ್ದು, ಸರ್ಕಾರದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ದುರಳತನಕ್ಕೆ ಇಳಿದಿರುವ ಸಿದ್ದರಾಮಯ್ಯ ಮತ್ತು ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ಭಾರಿ ಆಕ್ರೋಶ ಕೇಳಿ ಬಂದಿದೆ.

ಇನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಅವರಿಂದ ಬಂಗಾರದ ಕಿರೀಟ, ಬೆಳ್ಳಿ ಖಡ್ಗವನ್ನು ಬಹಿರಂಗ ಸಮಾವೇಶದಲ್ಲಿ ಪಡೆದ ಸಿದ್ದರಾಮಯ್ಯ ಅವರಿಗೆ ಸಮಾಜವಾದ ನೆನಪಾಗಲಿಲ್ಲವೇ ಅಥವಾ ಇವರದ್ದು ಬರೀ ಡೋಂಗಿ ಸಮಾಜವಾದವೇ ಎಂಬ ಅನುಮಾನ ಮೂಡದೇ ಇರದು.

ತಮ್ಮ ಮನೆಯ ಬಿಸ್ಕೆಟ್ ಗೆ ಲಕ್ಷ ಲಕ್ಷ ಸರ್ಕಾರದಿಂದ ಪಡೆಯುವ ಸಿದ್ದರಾಮಯ್ಯ ಸೋಗಲಾಡಿತನ ಪದೇ ಪದೆ ಸಾಬೀತಾಗುತ್ತಿದೆ. ಬಹಿರಂಗ ಸಮಾವೇಶದಲ್ಲಿ ಚಿನ್ನದ ಕಿರೀಟವನ್ನು ನಿರಾಕರಿಸಿ, ಅಫಜಲಪುರ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸೌಲಭ್ಯ ಕಲ್ಪಿಸಿ ಎಂದು ಹೇಳುವ ದೊಡ್ಡ ಗುಣ ಮುಖ್ಯಮಂತ್ರಿ ತೋರದೇ, ಹಲ್ಲು ಕಿರಿದು ಕಿರೀಟ್ ಹಾಕಿಕೊಂಡು ಬಂದು ಸಮಾಜವಾದವನ್ನು ಮಾತಾಡಿದರೇ ನಂಬಲು ಜನರೇನು ಮೂರ್ಖರೇ?.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ವೈಭವದ ಜೀವನ ನಡೆಸಲು ಎಲ್ಲ ರೀತಿಯಿಂದಲೂ ಅರ್ಹರಿದ್ದೀರಿ. ಆದರೆ ಸಾರ್ವಜನಿಕರ ಹಣದಲ್ಲಿ, ನಿತ್ಯ ಹಸಿವಿನಿಂದ ಬಳಲುತ್ತಿರುವ ಬಡವರ ಕಣ್ಣೀರ ಒರೆಸುವ ಹಣದಲ್ಲಿ, ಜನರು ಬೆವರು ಸುರಿಸಿ ದುಡಿದ ಹಣದಲ್ಲಿ ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರೇ ನಿಮಗೆ ದುರ್ಗತಿ ಬರುವುದು ನಿಶ್ಚಿತ. ಡೋಂಗಿ ಸಮಾಜವಾದವನ್ನು ಹೇಳುವುದನ್ನು ಬಿಟ್ಟು, ಸರಳ ಜೀವನ ನಡೆಸಿ ಸರ್ವರಿಗೂ ಮಾದರಿಯಾಗಿ. ಮಾದರಿಯಾಗದೇ ಹೋದರೆ ಹೋಯಿತು.. ಜನರ ಹಣ ನುಂಗಿ ಬಡವರಿಗೆ ಮಾರಿಯಾಗಬೇಡಿ.. ಇದೇ ರಾಜ್ಯದ ಜನ ನಿಮ್ಮಲ್ಲಿ ಕೇಳುವ ಮನವಿ.

  • Share On Facebook
  • Tweet It


- Advertisement -


Trending Now
ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
ವಿಜಯ್ ಪ್ರಕಾಶ್, ಮೈಸೂರು June 9, 2023
ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
ವಿಜಯ್ ಪ್ರಕಾಶ್, ಮೈಸೂರು June 9, 2023
Leave A Reply

  • Recent Posts

    • ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
  • Popular Posts

    • 1
      ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • 2
      ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • 3
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 4
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 5
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search