ಮಂಗಳೂರಿನಲ್ಲೊಬ್ಬಳು ಸೈನಾ ಸೆಹ್ವಾಲ್!
ಅವಳು ಬ್ಯಾಡ್ ಮೀಟನ್ ಕ್ಷೇತ್ರಕ್ಕೆ ಕಾಲಿಟ್ಟಾಗ ಅವಳು ದೊಡ್ಡವರು ಹಿಡಿಯುವ ರ್ಯಾಕೆಟಿನಷ್ಟು ಕೂಡ ಉದ್ದವಿರಲಿಲ್ಲ. ಏಳು ವರ್ಷದ ವಯಸ್ಸಿಗೆ ಮಕ್ಕಳು ಕೈಯಲ್ಲಿ ಸ್ಕೆಚ್ ಪೆನ್ ಹಿಡಿಯಲು ಒದ್ದಾಡುವ ಸಮಯದಲ್ಲಿ ಆಕೆಯ ಕೈಯಲ್ಲಿ ರ್ಯಾಕೆಟ್ ಇತ್ತು. ಆ ಮಗು ಬೆಳ್ಳಂಬೆಳಗೆ ಮಣ್ಣಗುಡ್ಡೆಯ ಯುಎಸ್ ಮಲ್ಯ ಇನ್ ಡೋರ್ ಸ್ಟೇಡಿಯಂಗೆ ಕಾಲಿಟ್ಟರೆ ಪೋಷಕರೊಂದಿಗೆ ಆಡುವುದನ್ನು ನೋಡಲು ಬಂದಿರಬೇಕು ಎಂದು ಅಂದುಕೊಂಡವರೇ ಹೆಚ್ಚು. ಆದರೆ ಆ ಹುಡುಗಿಯಲ್ಲಿ ಅದೇನೋ ಜೋಶ್ ಇತ್ತು. ಆ ವಯಸ್ಸಿಗೆ ನೈನಾ ಸೆಹ್ವಾಲ್ ಹೆಸರು ಗೊತ್ತಿತ್ತೊ ಇಲ್ವೋ. ಆದರೆ ಕನರ್ಾಟಕ ಅದರಲ್ಲಿಯೂ ಮುಖ್ಯವಾಗಿ ಮಂಗಳೂರಿನಿಂದಲೂ ಓರ್ವ ಸೈನಾ ಹುಟ್ಟಿ ಬರುವ ಘಳಿಗೆಗೆ ಭಗವಂತ ಅಸ್ತು ಎಂದಿದ್ದ. ಹೀಗೆ ರ್ಯಾಕೆಟ್ ಕೈ ಹಿಡಿದು ತನ್ನ ಎದುರಿನ ಆಟಗಾರಳ ಮನಸ್ಸಿನಲ್ಲಿ ಸಣ್ಣನೆಯ ಕಂಪನ ಹುಟ್ಟಿಸಿ, ರಾಷ್ಟ್ರಮಟ್ಟದಲ್ಲಿ ಅಂಡರ್ 13 ನಲ್ಲಿ 17 ನೇ ಸ್ಥಾನಗಳಿಸಿರುವ ಪುಟ್ಟ ಬಾಲೆಯ ಹೆಸರು ಅನನ್ಯ ಜೋಯಿಶಿ.
2005 ರಲ್ಲಿ ಪ್ರೇಮಿಗಳ ದಿನದಂದು ಹುಟ್ಟಿದ ಅನನ್ಯ, ಸುಮಂತ್ ಹಾಗೂ ಶ್ರೀಲತಾ ಅವರ ಮುದ್ದಿನ ಮಗಳು. ಡೊಂಗರಕೇರಿಯಲ್ಲಿರುವ ಕೆನರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ಏಳನೆ ತರಗತಿಯಲ್ಲಿ ಕಲಿಯುತ್ತಿರುವ ಅನನ್ಯಳ ಗುರಿ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವುದು. ಅದಕ್ಕಾಗಿ ಸಾಧಿಸಬೇಕಾಗಿರುವ ಹಾದಿ ಕಠಿಣವೆಂದು ಗೊತ್ತಿದ್ದರೂ ಅನನ್ಯ ಜೋಯಿಶಿ ಈಗ ಕ್ರಮಿಸಿರುವ ಎತ್ತರವನ್ನು ಗಮನಿಸಿದರೆ ಭವಿಷ್ಯದಲ್ಲಿ ಈ ಹುಡುಗಿ ಒಲಿಂಪಿಕ್ಸ್ ಅಂಗಣದಲ್ಲಿ ನಿಂತು ಕೊರಳಿಗೆ ಚಿನ್ನದ ಪದಕ ಏರಿಸಿ, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿಯುವುದು ಅಸಾಧ್ಯವಲ್ಲ ಎಂದು ಅನಿಸುತ್ತದೆ. 2014 ರಲ್ಲಿ ಬೆಂಗಳೂರಲ್ಲಿ ನಡೆದ ರಾಜ್ಯಮಟ್ಟದ ಅಂಡರ್ 13 ನಲ್ಲಿ ಸೆಮಿಫೈನಲ್, 2016 ರ ಗ್ಲುಕೋಬಿವಿಟಾ ವೈಟ್ ಪಿಕಾಕ್ ರಾಜ್ಯಮಟ್ಟದಲ್ಲಿ ಅಂಡರ್ 13 ಸೆಮಿ ಫೈನಲ್, ಹೊನ್ನಳ್ಳಿ ರಾಜ್ಯ ಜೂನಿಯರ್ ನಲ್ಲಿ ವಿನ್ನರ್, ಗೋಲ್ಡನ್ ಗೇಟ್ ಹಾಲ್ ಹಾಕ್ ನಲ್ಲಿ ಸೆಮಿಫೈನಲ್, ಐಜಿ ಕ್ಲಬ್ ಜ್ಯೂನಿಯರ್, ಸಬ್ ಜ್ಯೂನಿಯರ್ ನಲ್ಲಿ ರನ್ನರ್ ಅಪ್, ಯೋನಿಕ್ಸ್ ರಾಜ್ಯ ಚಾಂಪಿಯನ್ ಶಿಪ್ ನಲ್ಲಿ ರನ್ನರ್ ಅಪ್, ಖೇಳೋ ಇಂಡಿಯಾ ರಾಜ್ಯ ಆಯ್ಕೆ ಸ್ಪಧರ್ೆಯಲ್ಲಿ ವಿನ್ನರ್, ಮಣಿಪಾಲದ ಬ್ಯಾಡ್ ಮಿಟನ್ ಸ್ಪೋರ್ಟ ಕ್ಲಬ್ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ವಿನ್ನರ್, ಮಾನಸ ಗಂಗೋತ್ರಿಯಲ್ಲಿ ನಡೆದ ಮೈಸೂರು ಜಿಲ್ಲಾ ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ವಿನ್ನರ್ ಹೀಗೆ ಪದಕಗಳು ಅನನ್ಯ ಅವರನ್ನು ಹುಡುಕಿ ಬಂದಿವೆ.
ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಂಡರ್ 13 ಸ್ಪಧರ್ೆಯಲ್ಲಿ ಭಾಗವಹಿಸುತ್ತಿರುವ ಅನನ್ಯ, ಅಗಸ್ಟ್ ನಲ್ಲಿ ಜೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪಧರ್ೆಗೆ ತಯಾರಿಯನ್ನು ನಡೆಸುತ್ತಿದ್ದಾರೆ. ತನ್ನ ಸಾಧನೆಗೆ ಮುಖ್ಯ ಕೋಚ್ ಜ್ಞಾನೇಶ್ ಸಾಲಿಯಾನ್ ಅವರನ್ನು ನೆನೆಯುವ ಅನನ್ಯ ಅದರೊಂದಿಗೆ ಸಹಾಯಕ ಕೋಚ್ ಮನೀಶ್ ಮಾಚಯ್ಯ ಅವರ ಸಹಕಾರವನ್ನು ಕೂಡ ಸ್ಮರಿಸುತ್ತಾರೆ. ಈ ಕ್ಷೇತ್ರದಲ್ಲಿ ಫಿಟ್ ಆಗಿರಲು ತನಗೆ ಸಲಹೆಗಳನ್ನು ನೀಡುತ್ತಿರುವ ಯತೀಶ್ ಸಾಲಿಯಾನ್ ಅವರಿಗೆ ಕೃತಜ್ಞತೆ ಸಲ್ಲಿಸಲು ಆಕೆ ಮರೆಯುವುದಿಲ್ಲ. ಅನನ್ಯ ಜೋಯಿಶಿಯವರ ಕ್ರೀಡಾ ಸಾಧನೆಗೆ ಬೆಂಗಾವಲು ಆಗಿ ನಿಂತು ಪ್ರೋತ್ಸಾಹ ಕೊಡಲು ಜಿಎಸ್ ಬಿ ಸ್ಫೋಟರ್್ ಎಸೋಸಿಯೇಶನ್ ಮುಂದೆ ಬಂದಿದ್ದು ಆಕೆಯ ಯಶಸ್ಸಿಗೆ ಅದರ ಸರ್ವ ಪದಾಧಿಕಾರಿಗಳು ಶುಭ ಕೋರಿದ್ದಾರೆ
Leave A Reply