ಜಾತಿ ಭೇದ ಹುಟ್ಟಿಸಿ, ದೇಶದ ನೆಮ್ಮದಿಗೆ ಬೆಂಕಿ ಇಡುತ್ತಿರುವ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ಕಥೆ ಕೇಳಿ
- ಮೀಸಲಾತಿಗೆ ಆಗ್ರಹಿಸಿ ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಹೋರಾಟ: ನೇತೃತ್ವ ಹಾರ್ದಿಕ ಪಟೇಲ್ (ಕಾಂಗ್ರೆಸ್ ಬೆಂಬಲಿಗ)
- ಹಿಂದುಳಿದ ವರ್ಗಗಳಿಗೆ ಮೀಡಲು ನೀಡಲು ಆಗ್ರಹಿಸಿ ಗುಜರಾತ್ ನಲ್ಲಿ ಹೋರಾಟ: ನೇತೃತ್ವ ಅಲ್ಪೇಶ್ ಠಾಕೂರ್ (ಕಾಂಗ್ರೆಸ್ ಶಾಸಕ)
- ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ, ರಕ್ಷಣೆಗೆ ಆಗ್ರಹಿಸಿ ಹೋರಾಟ: ನೇತೃತ್ವ ಜಿಗ್ನೇಶ್ ಮೇವಾನಿ (ಕೈ ಬೆಂಬಲಿತ ಶಾಸಕ)
- ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ: ನೇತೃತ್ವ ಸಚಿವ ವಿನಯ್ ಕುಲ್ಕರ್ಣಿ ಮತ್ತು ಎಂಬಿ ಪಾಟೀಲ್ (ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಸಚಿವರು)
- ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಗಲಾಟೆ, ಪ್ರತಿಭಟನೆ: ಭಾಗವಹಿಸಿದವರು ಕಾಂಗ್ರೆಸ್ ಬೆಂಬಲಿತ ಜಿಗ್ನೇಶ್ ಮೇವಾನಿ ಮತ್ತು ಉಮರ್ ಖಲೀದ್.
ದೇಶದಲ್ಲಿ ಪ್ರಸ್ತುತ ಮುನ್ನಲೆಯಲ್ಲಿರುವ ಎಲ್ಲ ಜಾತಿಯಾಧಾರಿತ ಹೋರಾಟಗಳಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೇಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗುತ್ತಿದೆ ಎಂಬುದಕ್ಕೆ ಈ ಮೇಲೆ ನೀಡಿರುವ ಉದಾಹರಣೆಗಳೇ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಭಾರತದತ್ತ ದೇಶ ದಾಪುಗಾಲು ಇಡುತ್ತಿದ್ದರೆ, ಕಾಂಗ್ರೆಸ್ ಭಾರತದಲ್ಲಿ ಒಗ್ಗಟ್ಟಿನಿಂದ ಇರುವ ಜಾತಿಗಳ ಭಾವನೆಗಳ ಜತೆ ಆಟವಾಡುತ್ತಿದೆ. ಜನರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿ, ದಂಗೆ, ಗಲಭೆ, ಪ್ರತಿಭಟನೆಗಳಿಗೆ ಪ್ರೇರಣೆ ನೀಡುತ್ತಿದೆ ಎಂಬುದಕ್ಕೆ ಈ ಮೇಲೆ ನೀಡಿರುವ ಉದಾಹರಣೆಗಳೇ ಸಾಕ್ಷಿ. ಎಲ್ಲ ಹೋರಾಟಗಳಲ್ಲೂ ಕಾಂಗ್ರೆಸ್ ಪಾಲುದಾರಿಕೆ ವಹಿಸಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ.
ಗುಜರಾತ್ ಚುನಾವಣೆ ವೇಳೆಯಲ್ಲಿ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮೀಸಲಾತಿಗಾಗಿ ಹೋರಾಡಿದವರು, ಕಾಂಗ್ರೆಸ್ ಗೆ ಬೆಂಬಲಿಸಿದರು. ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ 70 ವರ್ಷಗಳಿಂದ ಆಡಳಿತದಲ್ಲಿದ್ದರೂ ದಲಿತರಿಗೆ ಏನನ್ನು ಮಾಡದ ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಮೂಲಕ ತಮ್ಮ ಹೋರಾಟದ ಅಸಲಿಯತ್ತನ್ನು ಸಾಬೀತುಪಡಿಸಿದರು. ಇದೆಲ್ಲವನ್ನು ಗಮನಿಸಿದರೇ ಚುನಾವಣೆಗೆ ಮುನ್ನ ಗುಜರಾತ್ ನಲ್ಲಿ ನಡೆದ ಹೋರಾಟಗಳಿಗೆ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡಿರುವುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕದಲ್ಲಿ ಸಾವಿರಾರು ವರ್ಷದಿಂದ ಒಗ್ಗಟ್ಟಾಗಿರುವ ಹಿಂದೂಗಳ ಮಧ್ಯೆ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಹುಸಿ ತತ್ತ್ವವನ್ನು ಬಿತ್ತಿ ಸಂಘರ್ಷಕ್ಕೆ ಕಾರಣರಾದವರು ಕಾಂಗ್ರೆಸ್ ನ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲ್ಕರ್ಣಿ. ಈ ಇಬ್ಬರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಯಶಸ್ವಿಯಾಗಿ ಮಾಡಿತು. ವೀರಶೈವ, ಲಿಂಗಾಯತ ಎಂದು ಜನರ ಭಾವನೆಗಳೊಂದಿಗೆ ಆಟವಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಈ ಮಟ್ಟದ ಹೀನ ವೃತ್ತಿಗೆ ಇಳಿದುರುವುದು ರಾಷ್ಟ್ರೀಯ ಪಕ್ಷವೊಂದಕ್ಕೆ ತಕ್ಕ ಸಂಪ್ರದಾಯವಲ್ಲ. ಒಗ್ಗಟ್ಟಾಗಿ ಲಿಂಗಾಯತ, ವೀರಶೈವ ಸಮಾಜವನ್ನು ಒಡೆದು ಆಳುವ ನೀತಿ ಬಿಟ್ಟರೇ ಇದರಲ್ಲಿ ಸಾರ್ವಜನಿಕರಿಗೆ ಕಿಂಚಿತ್ತು ಲಾಭವಿಲ್ಲ ಎಂಬುದು ಮಾತ್ರ ಕಠೋರ ಸತ್ಯ.
ಕಾಂಗ್ರೆಸ್ ಮುಕ್ತ ಭಾರವಾಗುವ ಮುನ್ನ ಎಲ್ಲಿಯಾದರೂ ಸಹಿ, ಹೇಗಾದರೂ ಸಹಿ ಪಕ್ಷದ ನೆಲೆ ಉಳಿಸಿಕೊಳ್ಳುಲು ಕೈ ಮುಖಂಡರು ನಾಚಿಕೆ ಬಿಟ್ಟು, ಜನಹಿತ ಮರೆತು ಇಂತಹ ಹೀನ ಕಾರ್ಯಕ್ಕೆ ಇಳಿದಿದ್ದಾರೆ. ಅದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ಇದೇ ಕಾಂಗ್ರೆಸ್ ಬೆಂಬಲಿತ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಕಾಶ್ಮೀರ ಅಜಾದಿ ಗ್ಯಾಂಗಿನ ಉಮರ್ ಖಲೀದ್ ಮರಾಠಿಗರ ಮತ್ತು ದಲಿತರ ನೆಮ್ಮದಿಗೆ ಕೊಳ್ಳಿ ಇಟ್ಟು ಬಂದಿದ್ದಾರೆ. ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
Leave A Reply