ಭೀಮಾ ಕೋರೆಗಾಂವ್ ವಿಜಯೋತ್ಸವ ದಲಿತರ ಹೆಸರಲ್ಲಿ ಗಲಭೆ ಸೃಷ್ಟಿಸಿದವರು ಕೆಂಪು ಉಗ್ರರು…?
ನಾಗಪುರ (ಮಹಾರಾಷ್ಟ್ರ): ಭೀಮಾ ಕೋರೆಗಾಂವ್ 200ನೇ ವಿಜಯೋತ್ಸವದ ವೇಳೆ ನಡೆದ ಗಲಭೆಗೆ ಆರ್ ಎಸ್ ಎಸ್ ಕಾರಣ, ಬಿಜೆಪಿ ಕಾರಣ, ಬಲಪಂಥೀಯ ಸಂಘಟನೆಗಳು ಕಾರಣ ಎನ್ನುವವರಿಗೆ ಮಹಾರಾಷ್ಟ್ರ ಪೊಲೀಸರು ಆಘಾತಕಾರಿ ಮಾಹಿತಿ ಹೊರ ಹಾಕಿದ್ದಾರೆ. ಗಲಭೆ ಒಂದು ವ್ಯವಸ್ಥಿತ ಸಂಚು, ಪೂರ್ವ ನಿರ್ಧರಿತ ಕಾರ್ಯ ಎಂಬ ಮಾಹಿತಿ ಹೊರಬಿದ್ದಿದೆ. ಕೋರೆಗಾಂವ್ ವಿಜಯೋತ್ಸವದ ಗಲಭೆ ಇಡೀ ಮಹಾರಾಷ್ಟ್ರಕ್ಕೆ ಹಬ್ಬಿತ್ತು. ದಲಿತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಪುಣೆ, ಮುಂಬೈ ಸೇರಿ ನಾನಾ ಕಡೆ ತೀವ್ರ ಪ್ರತಿಭಟನೆ ನಡೆಸಲಾಯಿತು. ನಂತರ ಬಂದ್ ನಡೆಸಿದ್ದರಿಂದ ಇಡೀ ಮಹಾರಾಷ್ಟ್ರ ಸ್ಥಬ್ಧವಾಗಿತ್ತು… ಆದರೆ ಹೀಗೆ ದಲಿತರನ್ನು ಬೀದಿಗಿಳಿಸಿ, ಬೆಚ್ಚನೆ ಮೈ ಕಾಯಿಸಿಕೊಂಡವರು
ಕೆಂಪು ಉಗ್ರರು..!
ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾಂವ್ ಗಲಭೆಗೆ ಮೂಲ ಪ್ರೇರಣೆ ನಕ್ಸಲರ ಬೆಂಬಲಿತ ಸಂಘಟನೆಗಳು ಎಂಬ ಆಘಾತಕಾರಿ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಹೊರಹಾಕಿದ್ದಾರೆ. ಭೀಮಾ ಕೋರೆಗಾಂವ್ ವಿಜಯೋತ್ಸವಕ್ಕೂ ಒಂದು ದಿನ ಮುಂಚೆ ಡಿಸೆಂಬರ್ 31ರಂದು ನಕ್ಸಲ್ ಬೆಂಬಲಿತ ಸಂಘಟನೆಯೊಂದು ಸಭೆ ನಡೆಸಿ, ಗಲಭೆಗೆ ಪ್ರಚೋಧಿಸುವ ಕಾರ್ಯವನ್ನು ಮಾಡಿದೆಯೇ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.
ಹಿಂದುಳಿದ, ದಲಿತ ವರ್ಗಗಳನ್ನು ಮುಂದಿಟ್ಟುಕೊಂಡು, ಲಕ್ಷಾಂತರ ದಲಿತರು ಸೇರುವ ವಿಜಯೋತ್ಸವದ ಸಮಾವೇಶವನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ನಕ್ಸಲರ ಮುಖ್ಯವಾಹಿನಿಯಲ್ಲಿರುವ ಯಲ್ಗಾರ್ ಪರಿಷತ್ ಸಂಚೂ ರೂಪಿಸಿತ್ತು ಎನ್ನಲಾಗಿದೆ. ದಲಿತರಲ್ಲಿ ಬಿಜೆಪಿ ವಿರುದ್ಧ ಧ್ವೇಷ ಬಿತ್ತುವ ಮೂಲಕ ದೊಡ್ಡ ಆಂದೋಲನವನ್ನು ರೂಪಿಸಬೇಕು ಎಂದು ನಿರ್ಧರಿಸಲಾಗಿತ್ತು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರು ಕಲೆ ಹಾಕಿದ್ದಾರೆ.
ಡಿಸೆಂಬರ್ 31 ರಂದೇ ನಡೆದಿತ್ತು ಸಂಚೂ
ಭೀಮಾ ಕೋರೆಗಾಂವ್ ವಿಜಯೋತ್ಸವ ನಡೆಯುವ ಮುನ್ನಾದಿನ ಅಂದರೆ ಡಿಸೆಂಬರ್ 31ರಂದು ನಗರವಾಸಿ ನಕ್ಸಲ್ ಬೆಂಬಲಿಗರ ಸಂಘದ ಸಭೆ ಭೀಮಾ ಕೋರೆಗಾಂವ್ ಸಮೀದಲ್ಲೇ ಇರುವ ಶನಿವಾರವಾಡದಲ್ಲೇ (ಇಲ್ಲಿಂದಲೇ ಗಲಭೆ ಆರಂಭವಾಗಿತ್ತು) ನಡೆದಿತ್ತು. ಆ ಸಭೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಅದರಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಕುರಿತು ಚರ್ಚಿಸಲಾಗಿತ್ತು ಎನ್ನಲಾಗಿದೆ.
ನಕ್ಸಲರ ‘ಯಲ್ಗಾರ್ ಪರಿಷತ್’ ಸಂಘಟನೆಯ ಸಭೆ..!
ನಕ್ಸಲರ ಬೆಂಬಲಿತ, ಮಹಾರಾಷ್ಟ್ರದ ನಗರ ಪ್ರದೇಶದಲ್ಲಿ ಮುನ್ನಲೆಯಲ್ಲಿರುವ ಯಲ್ಗಾರ್ ಪರಿಷತ್ ಎಂಬ ಸಂಘಟನೆ ಪ್ರಮುಖರು ಪುಣೆ ಸಮೀಪದ ಶನಿವಾರವಾಡದಲ್ಲಿ ಡಿಸೆಂಬರ್ 31 ರಂದು ಸಭೆ ನಡೆಸಿದ್ದಾರೆ. ಅಲ್ಲಿ ದಲಿತರನ್ನು ಉನ್ನತ ವರ್ಗದ ವಿರುದ್ಧ ಎತ್ತಿಕಟ್ಟಿ ದೊಡ್ಡ ಮಟ್ಟದ ಆಂದೋಲನ ಸೃಷ್ಟಿಸಲು ನಕ್ಸಲ್ ಬೆಂಬಲಿತ ಯಲ್ಗಾರ್ ಪರಿಷತ್ ಸಂಘಟಕರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಪೇಶ್ವೆಗಳ ಹೆಸರಲ್ಲಿ ದಲಿತರನ್ನು ಎತ್ತಿಕಟ್ಟಿ ಗಲಭೆ ಸೃಷ್ಟಿಸುವುದೇ ಸಭೆಯ ಮೂಲ ಉದ್ದೇಶವಾಗಿತ್ತು ಎಂದು ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನವ ಪೇಶ್ವೆಗಳನ್ನು ಹೂತು ಹಾಕಿ..! ಘೋಷಣೆ
‘ಭೀಮಾ ಕೋರೆಗಾಂವ್ ನಲ್ಲಿ ಪಾಠ ಕಲಿಸಿದ್ದೇವೆ, ನವ ಪೇಶ್ವೆಗಳ ಆಡಳಿತವನ್ನು ಹೂತುಹಾಕಬೇಕು’ ಹೀಗೊಂದು ಸಂದೇಶವನ್ನು ನಕ್ಸಲ್ ಬೆಂಬಲಿತ ಯಲ್ಗಾರ್ ಪರಿಷತ್ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಯಲ್ಗಾರ್ ಪರಿಷತ್ ಸಭೆಯಲ್ಲಿ ಭಾಗವಹಿಸಿದ್ದ ನಾಗಪುರದ ಹಿರಿಯ ಕಮ್ಯುನಿಸ್ಟ್ ಸದಸ್ಯೆಯೊಬ್ಬಳನ್ನು ಕೆಲ ತಿಂಗಳ ಹಿಂದೆ ಸೀತಾ ಬುಲ್ದಿ ಠಾಣೆ ಪೊಲೀಸರು ಅವಳ ವಿರುದ್ಧ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಅಧಿಕಾರಿಗಳು ಹೇಳುವ ಪ್ರಕಾರ 15 ದಿನದ ಹಿಂದೆಯೇ ಈ ಯೋಜನೆ ಸಿದ್ಧತೆಯಾಗಿರುವ ಲಕ್ಷಣಗಳು ಇವೆ. ವರ್ಷದ ಹಿಂದೆ ಮಹಾರಾಷ್ಟ್ರದ ಕೈರಲಂಜಿಯಲ್ಲಿ ನಡೆದ ದಲಿತರ ಕುಟುಂಬದ ದಾಳಿಯಾದಾಗಿನಿಂದ ನಕ್ಸಲರು ಪ್ರಚೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಗಲಭೆಯಾಗಲು ನಕ್ಸಲ್ ರ ಪ್ರೇರಣೆ ಸಾಧ್ಯತೆ ಇದೆ. ಅವರು ಜನರ ಭಾವನೆಗಳನ್ನು ಬಳಸಿಕೊಂಡು ಪ್ರಚೋಧನೆ ನೀಡಿ ಗಲಭೆಗೆ ಪ್ರೇರಣೆ ನೀಡಿರುತ್ತಾರೆ.
ಉಮರ್ ಖಲೀದ್ ಎಂಬ ಎಡಬಿಡಂಗಿ
ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಭಾರತವನ್ನು ಒಡೆದು ಹಾಕುತ್ತೇವೆ ಎಂದು ಘೋಷಣೆ ಕೂಗಿದ್ದ ಕಮ್ಯುನಿಸ್ಟ್ ಬೆಂಬಲಿಗ ಕನ್ನಯ್ಯ ಕುಮಾರನ ಸಹಚರ ಉಮರ್ ಖಲೀದ್ ಭಾಗವಹಿಸಿದ್ದ. ಈತ ಭಾಗವಹಿಸಿದಲ್ಲದೇ ಪೊಲೀಸರ ನಿಯಮ ಮೀರಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಚೋಧನಾ ಕಾರಿ ಭಾಷಣ ಮಾಡಿದ್ದ. ಈ ಎಲ್ಲ ಅಂಶಗಳನ್ನು ಗಮನದಲಿಟ್ಟುಕೊಂಡು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
Leave A Reply