ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬಹಿರಂಗ ಪತ್ರ!
ಮೊದಲಿಗೆ ಮಂಗಳೂರಿನ ಕಾಟಿಪಳ್ಳದ ಅಮಾಯಕ ದೀಪಕ್ ರಾವ್ ಸಾವಿನ ಶ್ರೇಯ ತಮಗೆ ಸಲ್ಲಿಸುತ್ತೇನೆ. ಅವನು ಜಿಹಾದಿ ಹಂತಕರಿಂದ ಬರ್ಬರವಾಗಿ ಕೊಲೆಯಾಗಿ ಇಂದಿಗೆ ಎರಡು ದಿನ.
ಬೇಸರದ ಸಂಗತಿಯೆಂದರೆ ಸಾಂತ್ವನ ಹೇಳುವ ವಿಷಯದಲ್ಲಿ ಯಾವತ್ತಿಗೂ ತಮ್ಮದು ಪಕ್ಷಪಾತ ಎಂಬುದು ಗೊತ್ತಿರುವ ವಿಚಾರವೇ ಆದರೂ ಪರಿಹಾರದಲ್ಲೂ ಪಕ್ಷಪಾತ ಅಂತ ಗೊತ್ತಿರಲಿಲ್ಲ..ಗೋಕಳ್ಳ ಕಬೀರ್ ಸತ್ತಾಗ 50 ಲಕ್ಷದ ವರೆಗೂ ಪರಿಹಾರಕ್ಕಾಗಿ “ಜಾತ್ಯಾತೀತರು” ಒತ್ತಾಯಿಸಿದ್ದರು. ಅಂದು ತಾವೂ ಕೂಡಾ ಭರ್ಜರಿಯಾಗಿಯೇ ಪರಿಹಾರಕ್ಕೆ ಮುಂದೆ ಬಂದಿದ್ದೀರಿ. ಆದರೆ ಇಂದು ಮುಗ್ಧ ಹುಡುಗ ದೀಪು ಅಮಾನುಷವಾಗಿ ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದಾನೆ. ಅಷ್ಟು ದೊಡ್ಡ ಮೊತ್ತದ ಪರಿಹಾರಕ್ಕಾಗಿ ಯಾವ “ಜಾತ್ಯಾತೀತರೂ” ಧ್ವನಿ ಎತ್ತಿಲ್ಲ, ಎತ್ತುವುದೂ ಇಲ್ಲ ಬಿಡಿ. ಹಾಗಂತ ಹಿಂದೂ ಸಮಾಜ ಅಂತಹ ಪರಿಹಾರವನ್ನೇ ನಂಬಿ ಕೂತಿಲ್ಲ. ತಾನೇ ದೀಪು ಕುಟುಂಬಕ್ಕೆ ಆಧಾರವಾಗಿ ನಿಂತಿದೆ.
ಕೇವಲ ಎರಡು ದಿನಗಳಲ್ಲಿ ದೀಪಕ್ ತಾಯಿ ಬ್ಯಾಂಕ್ ಖಾತೆಗೆ ಹಿಂದೂ ಸಮಾಜದಿಂದ ಸಂಗ್ರಹವಾಗಿದ್ದು ಹದಿನೇಳು ಲಕ್ಷದ ನಲವತ್ತ ಮೂರು ಸಾವಿರದ ಎಂಟುನೂರ ಐವತ್ತ ಒಂಬತ್ತು!! (17,43,859) ಸಿದ್ಧರಾಮಯ್ಯನವರೇ, ದೀಪುವಿನ ಪುಟ್ಟ ದೇಹವನ್ನು ನೋಡಿದರೆ ಕೊಲ್ಲುವುದು ಬಿಡಿ, ಹಲ್ಲೆ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ. ಅಂತಹ ದೀಪುವನ್ನು ಬರ್ಬರವಾಗಿ ಕೊಲೆಗೈದು ಬಿಟ್ಟರು ನೀವು ಅಂದು ಕೃಪೆ ತೋರಿದ್ದ ಕೇಸುಗಳನ್ನು ವಾಪಸ್ ಪಡೆದ ಪಿಎಫ್ಐ ಉಗ್ರ ಸಂಘಟನೆಯ ಸದಸ್ಯರು. ಕೊಲೆಯಾಗುವ ತನಕವಷ್ಟೇ ನಡೆದದ್ದು ಹಂತಕರ ಕಾರುಬಾರು. ನಂತರ ಏನಿದ್ದರೂ ರಾಜ್ಯ ಸರ್ಕಾರದ್ದೇ ದರ್ಬಾರು.ದೀಪುವಿನ ಹತ್ಯೆಯಾಗಿದ್ದು ಅವನ ತಾಯಿಗೆ ಬಿಟ್ಟು ಉಳಿದ ಎಲ್ಲರಿಗೂ ಗೊತ್ತಿತ್ತು. ಅಂತಹ ಸಂದರ್ಭದಲ್ಲಿ ಅವನ ಕುಟುಂಬಸ್ಥರಿಗೂ ಯಾವುದೇ ಮಾಹಿತಿ ನೀಡದೇ, ಅನಾಥ ಶವದಂತೆ ಆಂಬುಲೆನ್ಸ್ನಲ್ಲಿ ಬೆಳ್ಳಂಬೆಳಿಗ್ಗೆ ಹೇರಿಕೊಂಡು ಮನೆ ಮುಂದೆ ತಂದು ನಿಲ್ಲಿಸಿ ಬಿಟ್ಟರು ಪೊಲೀಸರು. ಪಾಪ, ದೀಪು ಪೋಷಕರು ಅದೆಷ್ಟು ದಂಗಾಗಿರಬೇಡ!
ಮನೆ ಮುಂದೆ ಶವ ಬಂದು ನಿಂತಿದ್ದರೆ, ಅಂತ್ಯಸಂಸ್ಕಾರಕ್ಕೆ ಯಾವುದೇ ಸಿದ್ಧತೆ ನಡೆದಿರಲಿಲ್ಲ, ಏಕೆಂದರೆ ದೀಪು ತಾಯಿಗೆ ತನ್ನ ಕರುಳ ಕುಡಿಯನ್ನು ರಸ್ತೆಯಲ್ಲಿ ತಾವು ಕೃಪೆ ತೋರಿದ್ದ ಪಿ.ಎಫ್.ಐ. ಸದಸ್ಯರು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಗೊತ್ತೇ ಇರಲಿಲ್ಲವಲ್ಲ! ಮನೆ ಮುಂದೆ ಬಂದಿರುವ ಶವವನ್ನು ಬಿಸಿಲಲ್ಲಿ ಒಣಗಿಸುವ ಬದಲು ತಾಯಿಗೆ ವಿಷಯ ತಿಳಿಸಿ ವಿಧಿ ವಿಧಾನ ವ್ಯವಸ್ಥೆಗಳನ್ನು ಶುರು ಮಾಡಲಾಯಿತು. ನೆನಪಿಡಿ, ಅಲ್ಲಿಯವರೆಗೆ ದೀಪುವಿನ ಮೃತದೇಹ ಸಾಧಾರಣ ಆಂಬುಲೆನ್ಸ್ ನಲ್ಲಿ ಒಣಗಲಿತ್ತು. ಸ್ಥಳದಲ್ಲಿದ್ದ ಜನ ರೊಚ್ಚಿಗೆದ್ದ ಕಾರಣ ನಂತರ ಹವಾನಿಯಂತ್ರಿತ ಆಂಬುಲೆನ್ಸ್ ನಲ್ಲಿ ದೀಪು ಶವವನ್ನು ಕಾಯಿಸಲಾಯಿತು. ತನ್ನ ಮಗನ ದಾರುಣ ಸ್ಥಿತಿಯನ್ನು ಕಂಡ ಆ ತಾಯಿಗೆ ಉಳಿದದ್ದು ಮಾತು ಬಾರದ ಕಿವಿ ಕೇಳದ ಇನ್ನೊಬ್ಬ ಮಗನನ್ನು ಮಡಿಲಲ್ಲಿ ಹಾಕಿಕೊಂಡು ಅಳುವುದಷ್ಟೇ!ದೀಪುವಿನ ಅಂತ್ಯಸಂಸ್ಕಾರದ ವೇಳೆ ಆತನ ತಮ್ಮನಿಗೆ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ತಿಳಿಸಿ ಹೇಳಲು ಅಲ್ಲಿದ್ದ ಹಿರಿಯರು ಕಷ್ಟ ಪಡುತ್ತಿದ್ದರೆ, ಅಲ್ಲಿ ನೆರೆದಿದ್ದ ಸಾವಿರಾರು ಜನರು ಸುರಿಯುತ್ತಿರುವ ಕಂಬನಿಯನ್ನು ತಡೆಹಿಡಿಯಲು ಕಷ್ಟಪಡುತ್ತಿದ್ದರು ಕೊನೆಪಕ್ಷ ದೀಪುವಿನ ಸಾವಿನ ನಂತರವಾದರೂ ದೀಪುಗೆ ನೆಮ್ಮದಿ ಇತ್ತಾ? ಇಲ್ಲನ್ಯೂಸ್ 18 ನಂತಹ ಚಾನೆಲ್’ಗಳು ದೀಪಕ್ ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದನೇ ಅಂತ ಬ್ರೇಕಿಂಗ್ ನ್ಯೂಸ್ ಬಿತ್ತರಿಸಿದವು. ಅದನ್ನು ವಿರೋಧಿಸಿ ದೀಪು ಸ್ನೇಹಿತರಾದ ನಾವು ಆ ಚಾನೆಲ್’ಗೆ ಫೋನ್ ಮಾಡಿ ಕೇಳಿದರೆ “ನಮಗೆ ಗೃಹ ಇಲಾಖೆಯಿಂದ ಬಂದ ಮಾಹಿತಿ ಅದು, ಬೇಕಾದರೆ ನೀವು ವಿಚಾರಿಸಿಕೊಳ್ಳಿ” ಎಂಬ ಉತ್ತರ ಬಂತು.ತಾನು ಮನೆ ಕಟ್ಟುವಾಗ “ಅತೀ ಕಡಿಮೆಯಲ್ಲಿ ಮರಳು ಎಲ್ಲಿ ಸಿಗುತ್ತದೆ? ಒಂದು ಲೋಡ್ ಮರಳಿಗೆ ಎಷ್ಟಾಗುತ್ತೆ? ಇನ್ನು ಸ್ವಲ್ಪ ದಿನ ಕಾದರೆ ರೇಟ್ ಕಡಿಮೆಯಾಗಬಹುದಾ? ಅಂತೆಲ್ಲಾ ಸ್ನೇಹಿತರ ಮೂಲಕ ಎಲ್ಲ ಕಡೆ ವಿಚಾರಿಸುತ್ತಿದ್ದ ದೀಪುಗೆ ಮರಳು ಮಾಫಿಯಾ ಲಿಂಕ್ ಕೊಟ್ಟ ರಾಜ್ಯ ಸರ್ಕಾರಕ್ಕೆ ಏನು ಹೇಳಬೇಕು?
ತನ್ನ ತಾಯಿ ಹಾಗೂ ತಮ್ಮನನ್ನು ಅತ್ಯಂತ ಕಷ್ಟದಿಂದ ಸಾಕಿ ಸಲಹುತ್ತಿದ್ದ ದೀಪುವನ್ನು ಬರ್ಬರವಾಗಿ ಕೊಂದಂತಹ ಶಾಪ ಕೊಲೆಗಡುಕರಿಗೆ ಸಿಕ್ಕರೆ, ಅಂತಹ ಕೊಲೆಗಡುಕರನ್ನು ಪದೇಪದೇ ಸಂರಕ್ಷಿಸಿಕೊಂಡು ಬರುವಂತಹ ನಿಮಗೂ ಅದರ ಶಾಪದಲ್ಲಿ ಪಾಲು ಇದ್ದೇ ಇದೆ.ಜಿಹಾದಿ ಮನಸ್ಥಿತಿಗಳ ಇಂತಹ ಬರ್ಬರ ಕೊಲೆಗಳಿಗೆ ಹಿಂದೂ ಸಮಾಜ ಉತ್ತರ ಕೊಟ್ಟೇ ಕೊಡುತ್ತದೆ. ಉತ್ತರ ಅಂದರೆ ಮತ್ತೆ ಕೊಲೆಗೆ ಕೊಲೆಯೇ ಅಂತಲ್ಲ, ಕೊಲೆಗೆ ಹೊರತಾಗಿಯೂ ಇತರೆ ರೂಪದಲ್ಲಿಯೂ ಉತ್ತರ ಕೊಡಬಹುದು. ಅದನ್ನು ಇನ್ನು ಕೆಲವೇ ದಿನಗಳಲ್ಲಿ ಕೊಡುತ್ತದೆಯೂ ಕೂಡಾ. ಬದುಕಿದ್ದಷ್ಟು ದಿನ ಯಾರಿಗೂ ಅನ್ಯಾಯ ಮಾಡದಿದ್ದ ದೀಪುವಿಗೆ, ಸಾವಿರ ನಂತರ ಅದೆಷ್ಟು ಅನ್ಯಾಯವಾಗಿ ಹೋಯಿತು. ಇವೆಲ್ಲವನ್ನೂ ನೋಡಿ ದೀಪುವಿನ ಆತ್ಮ ಅದೆಷ್ಟು ರೋಧಿಸುತ್ತಿರಬಹುದು?
ಸಿದ್ಧರಾಮಯ್ಯನವರೇ ಸ್ವಲ್ಪನಾದರೂ ಕರುಣೆ ಬೇಡವೇ?
Leave A Reply