• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಗೌರಿ ಜನ್ಮದಿನಾಚರಣೆ ಸಂಭ್ರಮದ ಸಮಾರಂಭವಾಗಿದ್ದು ಏಕೆ ಗೊತ್ತಾ..?

ತೇಜಸ್ವಿ ಪ್ರತಾಪ, ಮೈಸೂರು Posted On January 30, 2018
0


0
Shares
  • Share On Facebook
  • Tweet It

29 ಜನವರಿ 2018

ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನಾಚರಣೆ ಮಾಡಲು ‘ನಾನು ಗೌರಿ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ನೀವು ಬನ್ನಿ ನಾಳೆಗಳಿಗೆ ನೆಮ್ಮದಿ ಎರೆಯೋಣ’ ಎಂಬ ಘೋಷವಾಕ್ಯದೊಂದಿಗೆ ನಾನು ಗೌರಿ ದಿನ ಆಚರಿಸಲು ಸ್ವಯಂ ಘೋಷಿತ ಬುದ್ಧಿಜೀವಿಗಳ ದಂಡು ಅಲ್ಲಿ ಸೇರಿತ್ತು. ಆದರೆ ಇವರ್ಯಾರಿಗೂ ಗೌರಿ ಲಂಕೇಶ್ ಬರಹ, ಬದುಕು, ಜೀವನದ ಕುರಿತು ಒಂದೊಳ್ಳೆ ಚರ್ಚೆ, ಸಂವಾದ, ಸ್ಮರಣೆ ಮಾಡುವ ಪುರುಸೊತ್ತು ಇಲ್ಲದಂತೆ ವರ್ತಿಸಿದರು.

ಗೌರಿ ಬದುಕು, ಬರಹ, ಜೀವನದ ಕುರಿತು ಚರ್ಚೆ ನಡೆಯಬೇಕಾದ ವೇದಿಕೆ ದೇಶಾದ್ಯಂತ ಜನರು ಇದರ ಸಹವಾಸ ಸಾಕು ಎಂದು ದೂರ ಓಡಿಸುತ್ತಿರುವ ಕಾಂಗ್ರೆಸ್ ಪಕ್ಷದ ವೇದಿಯಾಗಿ ಮಾರ್ಪಟ್ಟಿತ್ತು. ವೇದಿಕೆ ಮೇಲೆ ಹಾಜರಿದ್ದ  ದೇಶವನ್ನು ಇಬ್ಬಾಗ ಮಾಡುತ್ತೇನೆ ಎನ್ನುವ ಗ್ಯಾಂಗಿನ ಕನ್ನಯ್ಯ, ತನಗೆ ಇರುವೆ ಕಚ್ಚಿದರೂ ಮೋದಿ ಅವರನ್ನು ಪ್ರಶ್ನಿಸುವ ಎಡಬಿಡಂಗಿ ನಟ ಪ್ರಕಾಶ್ ರಾಜ್, ಕಾಂಗ್ರೆಸ್ ಆಡಳಿದ ರಾಜ್ಯದ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿ ಕೆಲವು ಕಮ್ಮಿನಿಷ್ಠರ ಗ್ಯಾಂಗು ಇಡೀ ಕಾರ್ಯಕ್ರಮದಲ್ಲಿ ರಾರಾಜಿಸಿತ್ತು.

ಇಡೀ ಕಾರ್ಯಕ್ರಮದಲ್ಲಿ ಗೌರಿಯನ್ನು ನೆನಪಿಸಿ ದುಖಿಸಿ, ಅತ್ತವರು ಮಾತ್ರ ಕವಿತಾ ಲಂಕೇಶ್. ಉಳಿದವರ್ಯಾರ ಮುಖದಲ್ಲೂ ಆ ದುಖಃದ ಸಣ್ಣ ಎಳೆಯೂ ಕಾಣಲಿಲ್ಲ. ಯಾಕೆಂದ್ರೆ ಅವರ್ಯಾರಿಗೂ ಗೌರಿ ನೆನಪು ಬೇಕಿರಲಿಲ್ಲ. ಅವರ ಪ್ರತಿ ಮಾತಿನಲ್ಲಿ ಬರಬೇಕಿದ್ದಿದ್ದು ಗೌರಿ ಲಂಕೇಶ್, ಆದರೆ ಎಲ್ಲರ ಬಾಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷದ ಮಾತುಗಳು.

ಒಬ್ಬರೂ ಗೌರಿಯನ್ನು ಸ್ಮರಿಸಲಿಲ್ಲ. ಅವರೆಲ್ಲರ ಮಾತಿನಲ್ಲೂ ಕಾಂಗ್ರೆಸ್ ಗೆಲ್ಲಿಸಿ, ಮೋದಿಯನ್ನು ಸೋಲಿಸಿ ಎಂದು ಬಾಯಿ ಬಡೆದುಕೊಳ್ಳಲು ಶುರು ಮಾಡಿದರು. ಇನ್ನು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಯಾರನ್ನೋ ಮೆಚ್ಚಿಸಲು ಇಡೀ ವಿಶ್ವವೇ ಆದರದ ಆಹ್ವಾನ ನೀಡುತ್ತಿರುವ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಪ್ರವೇಶಕ್ಕೆ ಬಿಡಬಾರದು ಎಂದು ಘೋಷಿಸಿಬಿಟ್ಟರು. ಅಲ್ಲಿಗೆ ಇಡೀ ಸಮಾರಂಭದ ಧ್ಯೇಯವೇನು ಎಂಬುದು ಸ್ಪಷ್ಟವಾಯಿತು.

ಗೌರಿ ಹೆಸರಲ್ಲಿ ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳಲಾಯಿತೇ..?

ಇಡೀ ಕಾರ್ಯಕ್ರಮದಲ್ಲಿ ಒಬ್ಬರೂ ಗೌರಿ ಹತ್ಯೆಗೆ ಕಾರಣರಾದವರನ್ನು ನಾಲ್ಕು ತಿಂಗಳಾದರೂ ಬಂಧಿಸಲು ವಿಫಲರಾಗಿರುವ ಸಿದ್ದರಾಮಯ್ಯ ಆಡಳಿತದ ವಿರುದ್ಧ ಮಾತನಾಡಲಿಲ್ಲ. ಯಾರೂ ತನಿಖೆ ಯಾವ ಹಂತದಲ್ಲಿದೆ ಎಂದು ಬಲವಾಗಿ ಪ್ರಶ್ನಿಸಲಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಒಂದು ಬಲಿಷ್ಠವಾದ ಆರೋಪ ಮಾಡಲಿಲ್ಲ. ನಾಳೆಗಳ ನೆಮ್ಮದಿ ಎನ್ನುವವರ ಬಾಯಿಯಲ್ಲಿ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ವ್ಯವಸ್ಥೆಯ ಅರಿವು ಮೂಡಲಿಲ್ಲ. ಇದೇ ಅಲ್ಲವೇ ಇವರ ಎಡಬಿಡಂಗಿತನಕ್ಕೆ ಸಾಕ್ಷಿ.

ಎಂ.ಎಂ ಕಲ್ಬುರ್ಗ, ಗೌರಿ ಲಂಕೇಶ್ ಇಬ್ಬರ ಹತ್ಯೆಯ ತನಿಖೆಯನ್ನು ಶೀಘ್ರಗತಿಯಲ್ಲಿ ನಡೆಸಿ, ಆರೋಪಿಗಳನ್ನು ಬಂಧಿಸಬೇಕಾದ ಸರ್ಕಾರದ ವಿರುದ್ಧ ಮಾತಾಡುವ ಬದಲು ಮೋದಿ ವಿರುದ್ಧ ಬೊಗಳಿದ್ದ ಇವರ ನಿಜ ಬಣ್ಣ, ಇವರ ಗುರಿ ಗೌರಿಯಲ್ಲ ಮೋದಿ ಎಂಬುದು ಸ್ಪಷ್ಟವಾಗಿತ್ತು.

ಜನ್ಮದಿನವಲ್ಲ, ವಿಧಾನಸಭೆ ಚುನಾವಣೆ ಅವರ ಗುರಿ

ಬಿಜೆಪಿಗೆ ಮತ ನೀಡಬೇಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು, ಮೋದಿ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಬೇಡಿ ಎಂದು ಪ್ರತಿಯೊಬ್ಬರು ಭಾಷಣದಲ್ಲೂ ಬಿಜೆಪಿ ವಿರುದ್ಧ ಧ್ವೇಷ ಕಾರುತ್ತಿದ್ದರೂ ಅವರ ಒಲವು ನಿಲುವು ಬಹಿರಂಗವಾದವರು. ಇವರಿಗೆ ಗೌರಿ ಸಾವಿಗಿಂತ ಪ್ರಸ್ತುತ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆಯೇ ಗುರಿ ಎಂಬುದು ಸ್ಪಷ್ಟವಾಯಿತು. ಅದಕ್ಕೆ ಸಿದ್ದರಾಮಯ್ಯ ಮತ್ತು ತುಕ್ಡೆ ಗ್ಯಾಂಗಿನ ಬೆಂಬಲಿಗ ಕೈಕಮಾಂಡ ಸ್ಪಷ್ಟ ನಿರ್ದೇಶನ ಮತ್ತು ಬೆಂಬಲವಿರುವುದು ಸಾಬೀತಾಯಿತು. ಗೌರಿ ಹೆಸರಲ್ಲಿ ಮೋದಿ ಅವರನ್ನು ಬೈದರೆ, ತೆಗಳಿದರೇ ಒಂದಿಷ್ಟು ಮತ ಪಡೆಯಬಹುದು ಎಂದು ಒಳಗೆಒಳಗೆ ಸಂಭ್ರಮಿಸಿ, ತಲೆಯಲೊಂದು ಪಠಾಕಿ ಹಾರಿಸಿರುವುದು ಅವರ ಮುಖದ ಭಾವನೆಗಳಲ್ಲಿ ಸ್ಪಷ್ಟವಾಗಿತ್ತು.

ಗೌರಿ ಲಂಕೇಶ್ 5 ಸೆಪ್ಟೆಂಬರ್ 2017 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಎದುರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ. ಗೌರಿ ಕೊಲೆಯಾದ ಕೆಲ ಗಂಟೆಗಳಲ್ಲೇ ಕೆಲವು ಸ್ವಯಂ ಘೋಷಿತ ಬುದ್ಧಿಜೀವಿಗಳು ಗೌರಿ ಸಾವಿಗೆ ಬಲಪಂಥೀಯರು ಕಾರಣ ಎಂದು ತೀರ್ಪು ನೀಡಿದ್ದರು. ಇನ್ನು ಕೆಲವರು ಗೌರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ತಳ ಬುಡವಿಲ್ಲದ ಆರೋಪಗಳನ್ನು ಬೊಗಳುತ್ತಾ ಮುಂದೆ ಸಾಗಿದ್ದರು. ಹೀಗೆ ಗೌರಿ ಸಾವಲ್ಲಿ ತಮ್ಮ ಬೇಳೆ ಬೇಯಿಸಿಕೊಂಡು, ಸತ್ತವಳಿಗೆ ನ್ಯಾಯ ದೊರೆಯದಿದ್ದರೂ ಸರಿ. ತಮ್ಮ ಬೇಳೆ ಬೇಯಲಿ ಎಂದು ಅವಳ ಹೆಸರಲ್ಲಿ ರಾಜಕೀಯ ಮಾಡುತ್ತಿರುವರನ್ನು ನೋಡಿ ಗೌರಿ ಆತ್ಮ ವಿಲವಿಲನೆ ಒದ್ದಾಡುವುದರಿಲ್ಲ, ಇವರನ್ನು ಶಪಿಸುವುದರಲ್ಲಿ ಅನುಮಾನವಿಲ್ಲ.

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
ತೇಜಸ್ವಿ ಪ್ರತಾಪ, ಮೈಸೂರು June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
ತೇಜಸ್ವಿ ಪ್ರತಾಪ, ಮೈಸೂರು June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search