ಎಷ್ಟು ಸಾಧ್ಯವೋ, ಅಷ್ಟು ಬೇಗ ರಾಮಮಂದಿರ ನಿರ್ಮಾಣ ಆಗಲಿ ಎಂದ ಐಪಿಎಸ್ ಅಧಿಕಾರಿ ಯಾರು ಗೊತ್ತಾ?
ಲಖನೌ: ಇದುವರೆಗೂ ರಾಮಮಂದಿರ ನಿರ್ಮಾಣವಾಗಬೇಕು ಎಂದು ಯಾರಾದರೂ ಹೇಳಿದರೆ ನೀವು ಬಿಜೆಪಿಯವರಾ? ಆರೆಸ್ಸೆಸ್ಸಿನವರಾ? ಅಥವಾ ಕಟ್ಟರ್ ಹಿಂದುತ್ವವಾದಿಗಳಾ? ರಾಮನ ಭಕ್ತರಾ ಎಂದು ಕೇಳುತ್ತಿದ್ದರು. ಇನ್ನು ಮುಂದೆ ನೀವು ಅಧಿಕಾರಿಗಳಾ ಎಂದು ಸಹ ಕೇಳಬಹುದು.
ಏಕೆಂದರೆ, ರಾಮನ ಭಕ್ತ, ಹಿಂದುತ್ವದ ಆರಾಧ ಐಪಿಎಸ್ ಅಧಿಕಾರಿಯೊಬ್ಬರು ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂದಿದ್ದಾರೆ.
ಹೌದು, ಮೂರು ದಿನಗಳ ಹಿಂದೆ ಲಖನೌ ವಿಶ್ವವಿದ್ಯಾಲಯದಲ್ಲಿ ಆಯೋಜಸಿದ್ದ ರಾಮಮಂದಿರಕ್ಕೆ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕರ ರ್ಯಾಂಕ್ ಅಧಿಕಾರಿ, ಹೋಂ ಗಾರ್ಡ್ ಡಿಜಿಯಾಗಿರುವ ಸೂರ್ಯಕುಮಾರ್ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೀಗೆ ಹೇಳಿರುವುದು ವ್ಯಾಪಕ ಚರ್ಚೆಯಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಂಗವಾಗಿ ಮಾತನಾಡುವುದಾದರೆ, ಎಷ್ಟು ಸಾಧ್ಯವೋ, ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡವುದು ಒಳಿತ. ಇದು ರಾಮನ ಭಕ್ತರಾಗಿ ನಾವು ಮಾಡುತ್ತಿರುವ ಆಗ್ರಹ ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.
ಆದರೆ ಇದನ್ನೇ ಘೋರ ಅಪರಾಧ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗುತ್ತಿದೆ. ಹಲವರು ಶುಕ್ಲಾ ಹೇಳಿಕೆಯನ್ನೂ ಬೆಂಬಲಿಸುತ್ತಿದ್ದಾರೆ. ಸೂರ್ಯ ಕುಮಾರ್ ಶುಕ್ಲಾ 1982ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
Leave A Reply