ವಿಶ್ವದ ಬೃಹತ್ ಆರೋಗ್ಯ ಭದ್ರತಾ ಯೋಜನೆ ಜಾರಿಗೆ ದಿನಾಂಕ ನಿಗದಿ, ಯಾವಾಗ ಗೊತ್ತಾ?
ದೆಹಲಿ: ಈ ಹಿಂದಿನ ಸರ್ಕಾರಗಳು ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆ ಘೋಷಿಸಿ, ಅದಕ್ಕೆ ಇಂತಿಷ್ಟು ಹಣ ಮೀಸಲಿಟ್ಟವು ಎಂದರೆ, ಅದನ್ನು ಜಾರಿಗೊಳಿಸಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದವು ಇಲ್ಲವೇ ಆರಂಭಿಕವಾಗಿ ಯೋಜನೆಗೆ ತುಸು ಹಣ ನೀಡಿ ಕೈತೊಳೆದುಕೊಳ್ಳುತ್ತಿದ್ದವು.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಹಾಗಲ್ಲ ಎಂಬುದನ್ನು ಸಾಬೀತುಪಡಿಸಿದ್ದು, ಮೊನ್ನೆಯಷ್ಟೇ ಬಜೆಟ್ಟಿನಲ್ಲಿ ಘೋಷಿಸಿದ, ವಿಶ್ವದ ಬೃಹತ್ ಆರೋಗ್ಯ ಭದ್ರತಾ ಯೋಜನೆ ಎಂದೇ ಖ್ಯಾತಿಯಾದ ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆ ಜಾರಿಗೊಳಿಸಲು ನಿಗದಿಪಡಿಸಿದೆ.
ಹೌದು, ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಯೋಜನೆಗೆ ಜಾರಿಗೆ ನೀತಿ ಆಯೋಗ ದಿನಾಂಕ ನಿಗದಿಡಪಿಸಿದ್ದು, ಅಂದು ಆಗದಿದ್ದರೆ ಅಕ್ಟೋಬರ್ 2ರ ಗಾಂಧಿಯ ಜಯಂತಿಯಂದು ಯೋಜನೆ ಜಾರಿಯಾಗಲೇಬೇಕು ಎಂದು ಡೆಡ್ ಲೈನ್ ಘೋಷಿಸಿದೆ.
ಈಗಾಗಲೇ ಯೋಜನೆ ಜಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ದಿನದಂದು ಯೋಜನೆ ಜಾರಿಗೊಳಿಸುವ ಉದ್ದೇಶವಿದೆ. ಒಂದು ವೇಳೆ ಆ ದಿನ ಆಗದಿದ್ದರೆ, ಅಕ್ಟೋಬರ್ 2ರಂದು ಖಂಡಿತ ಯೋಜನೆಗೆ ಚಾಲನೆ ಸಿಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾಹಿತಿ ನೀಡಿದ್ದಾರೆ.
ಫೆಬ್ರವರಿ ಒಂದರಂದು ಮಂಡಿಸಿದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಯೋಜನೆಗೆ ಘೋಷಿಸಿದ್ದು, ಇದರಿಂದ ದೇಶದ 10 ಕೋಟಿ ಕುಟುಂಬಗಳು ಹಾಗೂ 50 ಜನ ಸೌಲಭ್ಯ ಪಡೆಯಲಿದ್ದಾರೆ. ಒಬ್ಬರಿಗೆ ವಾರ್ಷಿಕ ಚಿಕಿತ್ಸೆಗೆ ಕೇಂದ್ರ ಸರ್ಕಾರ 5 ಲಕ್ಷ ರೂಪಾಯಿವರೆಗೆ ಖರ್ಚು ಮಾಡುವುದು ಸರ್ಕಾರದ ಯೋಜನೆಯಾಗಿದೆ. ಈ ದಿಸೆಯಲ್ಲಿ ಇದು ವಿಶ್ವದ ಬೃಹತ್ ಆರೋಗ್ಯ ರಕ್ಷಣಾ ಯೋಜನೆಯಾಗಿದೆ.
Leave A Reply