ಭಾರತದಲ್ಲಿದ್ದೂ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮುಸ್ಲಿಮರಿಗೆ ಏನು ಮಾಡಬೇಕು ಅಸಾದುದ್ದೀನ್ ಓವೈಸಿ?
ಎಐಎಂಐಎಮ್ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿಗೆ ಮುಸ್ಲಿಮರು ಎಳೆದು ತಂದು ರಾಜಕೀಯ ಮಾಡದಿದ್ದರೆ ತಿಂದ ಅನ್ನ ಕರಗುವುದಿಲ್ಲ ಅಂತ ಕಾಣುತ್ತದೆ. ಅದೇ ಕಾರಣಕ್ಕೇ ಏನೋ, ಯಾವಾಗಲೂ ಮುಸ್ಲಿಮರು ಎಳೆದು ತಂದೋ, ಹಿಂದೂಗಳ ವಿರುದ್ಧ ಮಾತನಾಡಿಯೋ ರಾಜಕೀಯ ಮಾಡುತ್ತಾರೆ.
ಈಗ ಓವೈಸಿ ಅಂಥಾದ್ದೇ ಹೇಳಿಕೆ ನೀಡಿದ್ದು, ಭಾರತೀಯ ಮುಸ್ಲಿಮರನ್ನು ಯಾರಾದರೂ “ಪಾಕಿಸ್ತಾನಿ” ಎಂದು ಕರೆದರೆ ಅವರನ್ನು ಮೂರು ವರ್ಷ ಜೈಲಿಗೆ ಕಳುಹಿಸಬೇಕು ಎಂದು ಓವೈಸಿ ಹೇಳಿದ್ದಾರೆ.
ಹಾಗಾದರೆ ಏನು ಅವರ ಮಾತಿನ ಅರ್ಥ? ಭಾರತೀಯ ಮುಸ್ಲಿಮರು ಪಾಕಿಸ್ತಾನಿಯರು ಎಂದವರು ಯಾರು? ಖಂಡಿತವಾಗಿಯೂ ಭಾರತೀಯ ಮುಸ್ಲಿಮರೆಲ್ಲರೂ ಪಾಕಿಸ್ತಾನಿಯರು ಎಂದು ಕರೆಯಿಸಿಕೊಳ್ಳಲು ಅರ್ಹರೇ? ಅಥವಾ ಅರ್ಹರಲ್ಲವೇ?
ಖಂಡಿತವಾಗಿಯೂ ಓವೈಸಿ ಹೇಳಿದುದರಲ್ಲಿ ಅರ್ಥವಿದೆ. ಭಾರತದಲ್ಲಿ ಇರುವ ಎಲ್ಲ ಮುಸ್ಲಿಮರೂ ಪಾಕಿಸ್ತಾನಿಯರು ಎಂದು ಕರೆಸಿಕೊಳ್ಳುವ ಅರ್ಹತೆ ಹೊಂದಿಲ್ಲ. ಮುಸ್ಲಿಮರಲ್ಲೂ ಅನೇಕ ಜನ ಭಾರತವನ್ನು ಪ್ರೀತಿಸುವ, ಗೌರವಿಸುವ ಗುಣ ಹೊಂದಿದ್ದಾರೆ. ನಮ್ಮ ಜಹೀರ್ ಖಾನ್ ಶಾಹೀದ್ ಅಫ್ರಿದಿ ವಿಕೆಟ್ ತೆಗೆದರೂ ಭಾರತದ ಪರ ಮಾತನಾಡುವವರಿದ್ದಾರೆ.
ಆದರೆ ಭಾರತದಲ್ಲಿದ್ದೂ ಪಾಕಿಸ್ತಾನವನ್ನು ಬೆಂಬಲಿಸುವ, ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಬೈಕ್ ರ್ಯಾಲಿ ಮಾಡಿ (ಕರ್ನಾಟಕದಲ್ಲಿ ವಿಜಯಪುರ ಇಂಥ ಘಟನೆಗಳಿಗೆ ಫೇಮಸ್ಸು) ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಮುಸ್ಲಿಮರನ್ನು ಏನೆಂದು ಕರೆಯಬೇಕು ಅಸಾದುದ್ದೀನ್ ಓವೈಸಿ? ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಪಾಕಿಸ್ತಾನಿ ಎನ್ನದೆ ಹಿಂದೂ ಸ್ತಾನಿ ಎನ್ನಬೇಕೆ?
ಭಾರತ ಕ್ರಿಕೆಟ್ಟಿನಲ್ಲಿ ಗೆದ್ದಾಗ ಬಿಡಿ, ಮುಸ್ಲಿಮರ ಅನೇಕ ರ್ಯಾಲಿಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೇಳಿಬರುತ್ತವೆ. ಅಫ್ಜಲ್ ಗುರುವಿನ ಗಲ್ಲಿಗೇರಿಸಿದ ದಿನವನ್ನು ಕರಾಳ ದಿನವನ್ನಾಗಿ ಅಚರಿಸಿ, ಆತನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. 2016ರಲ್ಲು ಮೊರಾದಾಬಾದ್, 2017ರ ನವೆಂಬರ್ ನಲ್ಲಿ ಪಂಜಾಬ್, ಜಮ್ಮು ಕಾಶ್ಮೀರದಲ್ಲಿ ಗೋ ಬ್ಯಾಕ್ ಇಂಡಿಯಾ ಎನ್ನುವ ಮುಸ್ಲಿಂ ಪ್ರತ್ಯೇಕತಾವಾದಿಗಳು. ಹೇಳಿ ಓವೈಸಿ ಇವರನ್ನೆಲ್ಲ ಏನು ಮಾಡಬೇಕು?
ಭಾರತದೊಳಗಿದ್ದೂ, ಭಾರತದ ಅನ್ನ ತಿಂದು, ನೀರು ಕುಡಿದು, ಇಲ್ಲಿಯ ಸರ್ಕಾರದ ಸೌಲಭ್ಯಗಳನ್ನೇ ಪಡೆದುಕೊಂಡು ಪಾಕಿಸ್ತಾನಕ್ಕೆ ಜೈ, ಜಿಂದಾಬಾದ್ ಎನ್ನದೆ ಪಾಕಿಸ್ತಾನಿಯರು ಎನ್ನದೆ ಏನೆನ್ನಬೇಕು ಓವೈಸಿ?
ಅಷ್ಟಕ್ಕೂ, ಭಾರತೀಯ ಹಿಂದೂಗಳು ಸೇರಿ ಯಾವುದೇ ಮುಸ್ಲಿಮರು ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಮಾತ್ರ ಅವರನ್ನು ಪಾಕಿಸ್ತಾನಿಯರು, ಭಾರತದ ವಿರುದ್ಧ ಮಾತನಾಡುವವರಿಗೆ ಪಾಕಿಸ್ತಾನಿಯರು ಎಂದಿದ್ದೇ ಹೊರತು, ನಮ್ಮ ಹೆಮ್ಮೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಜಹೀರ್ ಖಾನ್, ಇರ್ಫಾನ್ ಪಠಾಣ್, ಸಾನಿಯಾ ಮಿರ್ಜಾ, ಶೈಕ್ಷಣಿಕ ಕ್ರಾಂತಿಯ ಅಜೀಂ ಪ್ರೇಮ್ ಜೀ ಅವರಿಗೆ ಅಂದಿಲ್ಲ. ನೆನಪಿರಲಿ.
ಈ ವೀಡಿಯೋ ನೋಡಿ
Leave A Reply