ಭಾರತ ಮತ್ತು ವಿಶ್ವದ ದೊಡ್ಡಣ್ಣ ಅಮೆರಿಕ ಸಂಬಂಧ ವಿಶ್ವಾಸಾರ್ಹ
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆರಿದ ಮೇಲೆ ವಿಶ್ವಗುರುವಿನ ಸ್ಥಾನಕ್ಕೇರುತ್ತಿರುವ ಭಾರತಕ್ಕೆ ಇದೀಗ ಹೊಸ ಗರಿ ಮೂಡಿದ್ದು, ವಿಶ್ವದ ದೊಡ್ಡಣ ಅಮೆರಿಕಾದ ಜತೆ ಮೋದಿ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತಮ, ಗಮನಾರ್ಹ ಸ್ನೇಹ ಬಂಧ ಹೊಂದಿದ್ದಾರೆ. ಭಾರತ ಮತ್ತು ಅಮೆರಿಕ ಮಧ್ಯದ ಸಂಬಂಧ ವಿಶ್ವಮಟ್ಟದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ಅಮೆರಿಕದ ರಾಜ್ಯ ಇಲಾಖೆ ವಕ್ತಾರ ಹೀದರ್ ನೌರ್ಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹೈದರಾಬಾದ್ ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ ಪುತ್ರಿ ಇವಾಂಕಾ ಭಾರತವನ್ನು ಹೊಗಳಿದ್ದರು. ಇದು ಭಾರತ ಅಮೆರಿಕ ಮಧ್ಯದ ಇರುವ ಉತ್ತಮ ಭಾಂದವ್ಯಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಟ್ರಂಪ್ ಹಾಗೂ ಮೋದಿ ಉಭಯ ದೇಶಗಳ ಬಾಂಧವ್ಯ, ರಕ್ಷಣೆ, ಆರ್ಥಿಕ, ವಾಣಿಜ್ಯ-ವಹಿವಾಟಿಗೆ ಉತ್ತೇಜನ ನೀಡುತ್ತಿರುವುದರಿಂದ ಎರಡು ದೇಶಗಳ ಮೈತ್ರಿ ವೃದ್ಧಿಸುತ್ತದೆ. ಈ ಸ್ನೇಹ-ವಿಶ್ವಾಸಕ್ಕೆ ಅಣಿಯೇ ಇಲ್ಲ, ಆಗಸವೇ ಮಿತಿ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶ್ವಕ್ಕೆ ಅಪಾಯಕಾರಿಯಾಗಿರುವ ಭಯೋತ್ಪಾದಕರನ್ನು ಸದೆಬಡೆಯುವಲ್ಲಿ ಭಾರತದ ಕಾರ್ಯ ಶ್ಲಾಘನೀಯ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಪೀಡನೆ ಮಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದನ್ನು ಹೀದರ್ ನೌರ್ಟ್ ಶ್ಲಾಘೀಸಿದ್ದಾರೆ.
Leave A Reply